'Omg Omg'ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದ ಭಾರ್ಗವ್‌ ರೇಪ್ ಕೇಸಲ್ಲಿ ಅರೆಸ್ಟ್!

By Suvarna NewsFirst Published Apr 22, 2021, 3:09 PM IST
Highlights

ಜನಪ್ರಿಯ ತೆಲುಗು ಟಿಕ್‌ಟಾಕ್‌ ಹಾಗೂ ಯುಟ್ಯೂಬ್‌ ನಟ ಚಿಪ್ಪಡ ಭಾರ್ಗವ್‌ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್‌ ಹಾಗೂ ಇನ್‌ಸ್ಟಾಗ್ರಾಂ ರೀಲ್ಸ್  ಹೆಚ್ಚು ಬಳಸುತ್ತಿದ್ದ ಸಮಯದಲ್ಲಿ ಡಿಫರೆಂಟ್‌ ಅಗಿ ವಿಡಿಯೋ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಂಡ ಫನ್‌ ಬಕೆಟ್‌ ಭಾರ್ಗವ್‌ ವಿರುದ್ಧ 14 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪ ಕೇಳಿ ಬರುತ್ತಿದೆ. ಈ ಸಂಬಂಧವಾಗಿ ಪ್ರಕರಣ ದಾಖಲಾದ ಕೆಲವೇ ಕ್ಷಣದಲ್ಲಿ ವಿಶಾಖಪಟ್ಟಣ ಪೊಲೀಸರು ಭಾರ್ಗವ್‌ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ. 

ಮೇಕಪ್‌ ಆರ್ಟಿಸ್ಟ್‌ಗೆ ಕೊರೋನಾ; ಸೆಲ್ಫ್‌ ಕ್ವಾರಂಟೈನ್‌ ಆದ 'ಆದಿಪುರುಷ್'! 

ಸೋಷಿಯಲ್ ಮೀಡಿಯಾದಲ್ಲಿ ತಾವು ಮಾಡಿದ ವಿಡಿಯೋಗಳನ್ನು ಮೆಸೇಜ್‌ ಮಾಡುವ ಮೂಲಕ ಹಂಚಿಕೊಳ್ಳುತ್ತಿದ್ದ ಭಾರ್ಗವ್, 14 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಳ್ಳುತ್ತಾರೆ. ತಾವು ಮಾಡುವ ವಿಡಿಯೋಗಳಲ್ಲಿ ಆಕೆ ನಟಿಸುವಂತೆ ಕೇಳಿ ಕೊಂಡಿದ್ದಾನೆ. ಯುವತಿಯೂ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದ ಕಾರಣ ಭಾರ್ಗವ್‌ ಜೊತೆ ವಿಡಿಯೋ ಮಾಡಲು ಒಪ್ಪಿಕೊಳ್ಳುತ್ತಾಳೆ. 

ಭಾರ್ಗವ್‌ ಆಕೆಯನ್ನು ಹೈದರಾಬಾದ್‌ನ ತನ್ನ ಕೋಂಪಲ್ಲಿಯ ಮನೆಗೆ ಕರೆಯಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆಕೆಯ ನಗ್ನ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿದ್ದಾನೆ. ಹೊರಗಡೆ ಬಾಯಿ ಬಿಟ್ಟರೆ ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕುತ್ತಲೇ ಆಕೆಯನ್ನು ಹಲವು ಬಾರಿ ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ. 14 ವರ್ಷದ ಯುವತಿ ಗರ್ಭಿಣಿಯಾಗಿದ್ದಾಳೆ. ಮನೆಯಲ್ಲಿ ವಿಷಯ ತಿಳಿಯುತ್ತಿದ್ದಂತೆ ಆಕೆಯ ಪೋಷಕರು ವಿಶಾಖಪಟ್ಟಣಂನ ಪೊಲೀಸರಿಗೆ ದೂರು ನೀಡಿದ್ದಾರೆ.  ಹೈದರಾಬಾದ್‌ಗೆ ಪೊಲೀಸರು ಆಗಮಿಸಿ ಭಾರ್ಗವ್‌ನನ್ನು ಬಂಧಿಸಿದ್ದಾರೆ.  ಸೆಕ್ಷನ್ 376. 354ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಊಟ ಸೇರೋಲ್ಲ, ಉಸಿರಾಡಲು ಕಷ್ಟ, ವಿಪರೀತ ಅಳು ಬರುತ್ತಿತ್ತು: ಶಾಲಿನಿ ಸತ್ಯನಾರಾಯಣ್ 

ಭಾರ್ಗವ್‌ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡುವ ಸಮಯದಲ್ಲಿ ನಿತ್ಯಾ ಎಂಬ ಹುಡುಗಿ ಜೊತೆ ವಿಡಿಯೋ ಮಾಡುತ್ತಿದ್ದರು. ಭಾರ್ಗವ್ ವಿಚಾರವಾಗಿ ನಿತ್ಯಾಗೆ ಮೆಸೇಜ್ ಬರುತ್ತಿರುವ ಕಾರಣ ಪೋಷಕರ ಜೊತೆ ವಿಡಿಯೋ ಮಾಡಿ ನಿತ್ಯ ಮಾತನಾಡಿದ್ದಾರೆ. 'ಭಾರ್ಗವ್‌ನ ಪೊಲೀಸರು ಬಂಧಿಸಿರುವುದು ನಿಜ. ಆದರೆ ನನಗೂ, ಈ ಕೇಸ್‌ಗೂ ಯಾವ ಸಂಬಂಧವೂ ಇಲ್ಲ. ಈ ವಿಚಾರವಾಗಿ ನನ್ನ ಫಾಲೋವರ್ಸ್‌ ನನಗೆ ಮೆಸೇಜ್‌ ಕಳುಹಿಸಿದ ಮೇಲೆ ಗೊತ್ತಾಗಿದ್ದು. ಕೆಲವು ಟ್ರೋಲ್ ಪೇಜ್ ಹಾಗೂ ಯುಟ್ಯೂಬ್‌ನಲ್ಲಿ ನನ್ನ ಹೆಸರನ್ನು ಬಳಕೆಕ ಮಾಡುದ್ದಾರೆ. ಸತ್ಯ ತಿಳಿಯದೇ ಹೀಗೆಲ್ಲಾ ಮಾಡಬೇಡಿ. ದಯವಿಟ್ಟು ವಿಡಿಯೋಗಳನ್ನು ಡಿಲೀಟ್ ಮಾಡಿ. ನಾನು ಭಾರ್ಗವ್‌ ಜೊತೆ ವಿಡಿಯೋ ಮಾಡುವುದನ್ನು ಬಿಟ್ಟು ಒಂದು ವರ್ಷ ಆಗಿದೆ. ನಾನು ಈಗ ಸೀರಿಯಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವೆ,' ಎಂದು ನಿತ್ಯ ಮಾತನಾಡಿದ್ದಾರೆ.

click me!