Operation Sindoor: ಥೂ ನಿಮ್ಮ ಜನ್ಮಕ್ಕೆ... ನಾಚಿಕೆ ಆಗಲ್ವಾ? ನಟರ ಜನ್ಮ ಜಾಲಾಡಿದ ನಟಿ ಫಲಕ್​ ನಾಜ್​!

Published : May 10, 2025, 10:50 PM ISTUpdated : May 12, 2025, 10:56 AM IST
Operation Sindoor: ಥೂ ನಿಮ್ಮ ಜನ್ಮಕ್ಕೆ... ನಾಚಿಕೆ ಆಗಲ್ವಾ? ನಟರ ಜನ್ಮ ಜಾಲಾಡಿದ  ನಟಿ ಫಲಕ್​ ನಾಜ್​!

ಸಾರಾಂಶ

ಆಪರೇಷನ್ ಸಿಂದೂರದ ಬಗ್ಗೆ ಬಾಲಿವುಡ್ ಮುಸ್ಲಿಂ ನಟರ ಮೌನದ ಬಗ್ಗೆ ನಟಿ ಫಲಕ್ ನಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಭಕ್ತಿಯ ಘೋಷಣೆ ಮಾಡುವ ನಟರು ಪಾಕಿಸ್ತಾನದ ಅಭಿಮಾನಿಗಳ ಭಯದಿಂದ ಮೌನವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನಿ ನಟರ ದೇಶಪ್ರೇಮವನ್ನು ಉದಾಹರಣೆಯಾಗಿ ನೀಡಿ, ಭಾರತೀಯ ನಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಟ್ಟಿಗರೂ ನಟರ ಮೌನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಥೂ ನಿಮ್ಮ ಜನ್ಮಕ್ಕೆ... ಸ್ವಲ್ಪನಾದ್ರೂ ನಾಚಿಕೆ ಇದ್ಯಾ? ನಿಮ್ಮನ್ನು ಇಂಡಸ್ಟ್ರಿಯ ಸಹೋದರರು ಎನ್ನಲು ನಾಚಿಕೆ ಆಗುತ್ತದೆ. ನಿಮ್ಮನ್ನು ನೀವು ಏನು ಅಂದುಕೊಂಡಿರುವಿರಿ? ಭಾರತದ ಅನ್ನ ಉಂಡು, ಇಂಥ ಸನ್ನಿವೇಶದಲ್ಲಿಯೂ ಒಂದೂ ಮಾತು ನಿಮ್ಮ ಬಾಯಿಂದ ದೇಶದ ಪರವಾಗಿ ಬರಲ್ಲ ಅಲ್ವಾ? ಎಲ್ಲಿ ನಿಮ್ಮ ಪಾಕಿಸ್ತಾನದ ಅಭಿಮಾನಿಗಳಿಗೆ ತೊಂದರೆ ಆಗತ್ತೆ ಎನ್ನುವ ಯೋಚನೆ ನಿಮಗೆ. ನನಗೂ ಪಾಕಿಸ್ತಾನದ ಫ್ಯಾನ್ಸ್​ ಇದ್ದಾರೆ. ಆದರೆ ದೇಶಭಕ್ತಿ ಮೊದಲು ಅನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಈ ದೇಶದ ಮುಸ್ಲಿಮರು ಎನ್ನುವುದಕ್ಕೆ ನಾಚಿಕೆಯಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರನ್ನು ಜನರು ಯಾಕೆ ನಂಬುವುದಿಲ್ಲ ಎಂದು ಯಾವಾಗಲೂ ಎನ್ನಿಸುತ್ತಿತ್ತು. ಈಗ ಅದು ಅರ್ಥವಾಗಿದೆ. ನಿಮ್ಮನ್ನು ನೋಡಿಯೇ ಎಲ್ಲರ ನಂಬಿಕೆಯೂ ಹೊರಟು ಹೋಗಿದೆ...' ಎನ್ನುತ್ತಲೇ ಬಾಲಿವುಡ್​ನ ನಟರ ಜನ್ಮ ಜಾಲಾಡಿದ್ದಾರೆ ನಟಿ ಫಲಕ್​ ನಾಜ್​.

ಇವರ ಟಾರ್ಗೆಟ್​ ಇರುವುದು ಮುಸ್ಲಿಂ ನಟರ ಮೇಲೆ. ಅದರಲ್ಲಿಯೂ ಭಾರತದಲ್ಲಿಯೇ ಕೋಟ್ಯಂತರ ಮಂದಿ ದೇವರು ಎಂದೇ ನಂಬಿರುವ ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಆಮೀರ್​  ಖಾನ್​, ಸೈಫ್​ ಅಲಿ ಖಾನ್​ ಸೇರಿದಂತೆ ಟಾಪ್​ ನಟರು ಎನ್ನಿಸಿಕೊಂಡವರ ಮೇಲೆ. ಅವರು ಆಪರೇಷನ್​ ಸಿಂದೂರದ ವಿಷಯದಲ್ಲಿ ಮಾತನಾಡದೇ ಇರುವುದು ನಟಿ ಫಲಕ್​ ನಾಜ್​ ಅವರನ್ನು ಕೆರಳಿಸಿದೆ. ಸಿನಿಮಾಗಳಲ್ಲಿ ದೇಶ ಭಕ್ತಿಯ ಪಾಠ ಮಾಡುವ ಈ ನಟರು, ಮಾಡುವುದೆಲ್ಲಾ ಅನಾಚಾರ... ಮನೆಯ ಮುಂದೆ... ಎನ್ನುವಂತೆ ಕಾಣಿಸುತ್ತಿದೆ. ಆಪರೇಷನ್​ ಸಿಂದೂರ ಆರಂಭವಾಗಿ, ಪಾಕಿಸ್ತಾನವು ಇದಾಗಲೇ ಎಲ್ಲಾ  ನಿಯಮಗಳನ್ನು ಉಲ್ಲಂಘಿಸಿ ಭಾರತದ ನಾಗರಿಕರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರೂ ಈ ದೇಶಭಕ್ತರು ಮಾತ್ರ ಕಾಣೆಯಾಗಿದ್ದಾರೆ. ಕೊನೆಯ ಪಕ್ಷ ಒಂದೇ ಒಂದು ಮಾತು ಕೂಡ ಇವರ ಬಾಯಿಯಿಂದ ಹೊರಟಿಲ್ಲ. ಇದಕ್ಕೆ  ಕಾರಣ, ಎಲ್ಲಿ ತಮ್ಮ ಪಾಕಿಸ್ತಾನದ ಸಹೋದರ, ಸಹೋದರಿಯರು ಬೇಸರ ಮಾಡಿಕೊಂಡು ಬಿಡುತ್ತಾರೋ ಎನ್ನುವ ನೋವು ಇವರಿಗೆ. ಇದನ್ನೇ ನಟಿ ಹೇಳಿದ್ದಾರೆ.

ಆಪರೇಷನ್​ ಸಿಂದೂರ: ಬಾಲಿವುಡ್​ ಖಾನ್​ಗಳು ಬಹುದೂರ ​! ವೈರಲ್​ ಆಯ್ತು ವಾಜಪೇಯಿ ಹೇಳಿದ್ದ ಮಾತು...

'ಪಾಕಿಸ್ತಾನದ ನಟರನ್ನು ಒಮ್ಮೆ ನೋಡಿ. ಅವರೂ ಬಾಲಿವುಡ್​ನಲ್ಲಿ ಕೆಲಸ ಮಾಡಿದ್ದಾರೆ. ನಾನೂ ಕೆಲವರ ಫಾಲೋವರ್​  ಆಗಿದ್ದೇನೆ. ಅವರಿಗೂ ಭಾರತದ ಋಣ ಇದೆ. ಆದರೆ ದೇಶದ ಮಾತು ಬಂದಾಗ, ಅವರು ತಮ್ಮ ದೇಶದ ಪರವಾಗಿ ನಿಂತಿದ್ದಾರೆ. ಅವರನ್ನು ನೋಡಿಯೂ ನಿಮಗೆ ನಾಚಿಕೆ ಆಗಲ್ವಾ? ಏನ್ರೀ ನೀವೆಲ್ಲಾ...' ಎಂದು ಹಿಗ್ಗಾಮುಗ್ಗ ಥಳಿಸಿದ್ದಾರೆ  ನಟಿ ಫಲಕ್​. 

ಇದಾಗಲೇ ಬಾಲಿವುಡ್​ ನಟರ ಮೇಲೆ ನೆಟ್ಟಿಗರೂ ಗರಂ ಆಗಿದ್ದಿದೆ..  ದೇಶಪ್ರೇಮವನ್ನು ಅಭಿಮಾನಿಗಳಲ್ಲಿ ಸಾರಿ ಸಾರಿ ಹೇಳುವ ಮೂಲಕ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುವ ಈ ನಟಿರು ಆಪರೇಷನ್​ ಸಿಂದೂರದ ವಿಷಯದಲ್ಲಿ ಫುಲ್ ಸೈಲೆಂಟ್​ ಆಗುವ ಮೂಲಕ ಸೋಷಿಯಲ್​  ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಉಗ್ರರನ್ನು ಪೋಷಿಸುತ್ತಿರುವ, ಭಾರತದ ಹೆಣ್ಣುಮಕ್ಕಳ ಸಿಂದೂರನ್ನು ಕಿತ್ತುಕೊಂಡಿರುವ ಪಾಕಿಗಳ ಪರವಾಗಿ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದರೆ, ಬೇರೆ ಯಾವುದೇ ವಿಷಯಗಳಿಗೆ  ಥಟ್​ ಎಂದು ರಿಯಾಕ್ಟ್​ ಮಾಡುವ ನಟರು ಮಾತ್ರ ಸುಮ್ಮನೇ ಇರುವುದು ಅವರ ಅಭಿಮಾನಿಗಳಿಗೂ ಸಹಿಸಿಕೊಳ್ಳಲು ಆಗುತ್ತಿಲ್ಲ! ಕೊನೆಯ ಪಕ್ಷ ಪಾಕಿಸ್ತಾನದ ವಿರುದ್ಧವಾದರೂ ಒಂದಾದರೂ ಮಾತನಾಡಬೇಕಲ್ವಾ? ಇದು ಯಾವ ದೇಶದ ಪ್ರೇಮ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು!

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!