ಈ ಮಾಡೆಲ್‌, ಕರ್ನಲ್ ಸೋಫಿಯಾ ಖುರೇಷಿಯ ಅವಳಿ ಸೋದರಿ!

Published : May 10, 2025, 06:17 PM ISTUpdated : May 12, 2025, 11:06 AM IST
ಈ ಮಾಡೆಲ್‌, ಕರ್ನಲ್ ಸೋಫಿಯಾ ಖುರೇಷಿಯ ಅವಳಿ ಸೋದರಿ!

ಸಾರಾಂಶ

ಆಪರೇಶನ್‌ ಸಿಂದೂರದ ಬಳಿಕ ಈಗ ಕರ್ನಲ್‌ ಸೋಫಿಯಾ ಖುರೇಷಿ ದೇಶದ  ಎಲ್ಲರಿಗೂ ಗೊತ್ತು. ಆದರೆ ಆಕೆಯ ಅವಳಿ ಸಹೋದರಿಯ ಬಗ್ಗೆ ಗೊತ್ತೇ? ಈಕೆ ಮಾಡೆಲ್‌, ಸೌಮದರ್ಯ ಸ್ಪರ್ಧೆಯ ವಿಜೇತ ಎಂಬುದೆಲ್ಲ ನಿಮಗೆ ಗೊತ್ತಿತ್ತಾ? ಇಲ್ಲಿದೆ ಅಕೆಯ ವಿವರ, ಓದಿ.  

ಯಶಸ್ವಿ ಆಪರೇಷನ್ ಸಿಂದೂರ್‌ ನಂತರ ಕರ್ನಲ್ ಸೋಫಿಯಾ ಖುರೇಷಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಒಂದು ಇತಿಹಾಸವೇ ಸೃಷ್ಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಪರವಾಗಿ ಮಾತನಾಡಿದ ಇಬ್ಬರು ಮಹಿಳಾ ಅಧಿಕಾರಿಗಳಲ್ಲಿ ಒಬ್ಬರಾಗಿ, ಅವರ ಸಮಚಿತ್ತ ಮತ್ತು ಪ್ರಭಾವಶಾಲಿ ವರ್ಚಸ್ಸು ಇಡೀ ರಾಷ್ಟ್ರವನ್ನು ಆಕರ್ಷಿಸಿತು. ಇನ್ನೂ ಒಬ್ಬ ವೀಕ್ಷಕಿಗೆ ಆ ಕ್ಷಣ ಇನ್ನಷ್ಟು ಪುಳಕ ಮೂಡಿಸಿದ ಕ್ಷಣವಾಗಿತ್ತು- ಆಕೆ ಸೋಫಿಯಾರ ಅವಳಿ ಸಹೋದರಿ ಡಾ. ಶೈನಾ ಸುನ್ಸಾರಾ. ತನ್ನ ಸಹೋದರಿ ಸಮವಸ್ತ್ರದಲ್ಲಿ ಸಾಧಿಸಿದ ಎತ್ತರವನ್ನು ಶೈನಾ ಹೆಮ್ಮೆ ಮತ್ತು ವಿಸ್ಮಯದಿಂದ ವೀಕ್ಷಿಸಿದರು. ಅಂದ ಹಾಗೆ ಈ ಶೈನಾ ಸುನ್ಸಾರಾ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ? 

ಶೈನಾ ಸುನ್ಸಾರಾ ಮಾಡೆಲ್‌, ಫ್ಯಾಶನ್‌ ಡಿಸೈನರ್‌, ಎಕಾನಮಿಸ್ಟ್ ಇತ್ಯಾದಿ. ಅವಳು ಮತ್ತು ಅವಳ ಅವಳಿ ಸಹೋದರಿ ಕರ್ನಲ್ ಸೋಫಿಯಾ ಖುರೇಷಿ ಇಬ್ಬರೂ ಮಿಲಿಟರಿ ಕುಟುಂಬದಲ್ಲಿ ಬೆಳೆದವರು. ಇಬ್ಬರೂ ಸೈನ್ಯಕ್ಕೆ ಸೇರಲು ಆಕಾಂಕ್ಷಿಯಾಗಿದ್ದರು. ಆಗ ಮಹಿಳೆಯರಿಗೆ ಸೈನ್ಯದಲ್ಲಿ ಅವಕಾಶವಿಲ್ಲದಿದ್ದರೂ ಸಹ. ಸೈನ್ಯಕ್ಕೆ ದಾರಿ ಕಂಡುಕೊಳ್ಳಲು ದೃಢನಿಶ್ಚಯ ಮಾಡಿದ ಸೋಫಿಯಾ, ದೇಶಕ್ಕೆ ಸೇವೆ ಸಲ್ಲಿಸಲು DRDO ವಿಜ್ಞಾನಿಯಾಗುವ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು. ಅದಿಲ್ಲದಿದ್ದರೆ ಪೊಲೀಸ್ ಪಡೆಗೆ ಸೇರಲು ಸಿದ್ಧರಾಗಿದ್ದರು. ಆದರೆ ಕಡೆಗೂ ಸೋಫಿಯಾ ಸೈನ್ಯ ಸೇರಿದರು ಹಾಗೂ ಶೈನಾ ದಾರಿ ಬದಲಿಸಿ ಮಾಡೆಲ್‌ ಆದರು. 

ಕಳೆದ ಜನವರಿಯಲ್ಲಿ ಸಹೋದರಿಯರು ಭೇಟಿಯಾಗಿದ್ದರಂತೆ. ಆದರೆ ಆಪರೇಷನ್ ಸಿಂದೂರ್ ಪತ್ರಿಕಾಗೋಷ್ಠಿಯಯಲ್ಲಿ ಸೋಫಿಯಾ ದೇಶವನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿರಲಿಲ್ಲ. ರಾಷ್ಟ್ರೀಯ ದೂರದರ್ಶನದಲ್ಲಿ ತನ್ನ ಸಹೋದರಿಯನ್ನು ನೇರಪ್ರಸಾರದಲ್ಲಿ ನೋಡುವುದು ಆಕೆಗೆ ಎಮೋಷನಲ್‌ ಆಗಿತ್ತಂತೆ. ಇದು ಕುಟುಂಬದ ಹೆಮ್ಮೆಯ ವಿಷಯವೂ, ರಾಷ್ಟ್ರೀಯ ಹೆಮ್ಮೆಯ ವಿಷಯವೂ ಆಗಿತ್ತು.

ಶೈನಾ ಸುನ್ಸಾರಾ ಅವರ ತಂದೆ 1971ರ ಬಾಂಗ್ಲಾದೇಶ ಯುದ್ಧದಲ್ಲಿ ಸೇವೆ ಸಲ್ಲಿಸಿದರು. ಅವರ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ಅವರು ಸೈನ್ಯದಲ್ಲಿಯೂ ಇದ್ದರು. ಅವರ ಚಿಕ್ಕಪ್ಪ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಭಾಗವಾಗಿದ್ದರು ಮತ್ತು ಅವರ ಮುತ್ತಜ್ಜ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಸೇರುವ ಮೊದಲು ಬ್ರಿಟಿಷ್ ಸೈನ್ಯದಲ್ಲಿ ಹೋರಾಡಿದ್ದರು. ಅವರ ಅಜ್ಜಿ ಆಗಾಗ್ಗೆ ಝಾನ್ಸಿಯ ದಂತಕಥೆಯಾದ ರಾಣಿಯೊಂದಿಗೆ 1857ರ ದಂಗೆಯಲ್ಲಿ ಭಾಗವಹಿಸಿದ ಪೂರ್ವಜರ ಕಥೆಗಳನ್ನು ಹೇಳುತ್ತಿದ್ದರು. ಕರ್ನಲ್ ಸೋಫಿಯಾ ಖುರೇಷಿ ಆಪರೇಷನ್ ಸಿಂಧೂರ್ ಬ್ರೀಫಿಂಗ್ ನೀಡುತ್ತಿರುವುದನ್ನು ನೋಡಿದಾಗ, ಝಾನ್ಸಿ ರಾಣಿಯ ಉತ್ಸಾಹ ಜೀವಂತವಾಗುವುದನ್ನು ಕಂಡಂತೆ ಭಾಸವಾಯಿತಂತೆ ಶೈನಾಗೆ. 

ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿದ್ದ Aamir Khan! ಈ ಪಾಕಿಸ್ತಾನ ಬೆಂಬಲಿತ ರಾಷ್ಟ್ರಕ್ಕೆ ಕಾಲಿಡಲ್ಲ ಎಂದ ಗಾಯಕ

ಡಾ. ಶೈನಾ ಸುನ್ಸಾರಾ ನಿಜವಾದ ಆಲ್‌ರೌಂಡರ್. ಶೈನಾ ಪ್ರತಿಭೆ ಹಲವು ಕಡೆ ಹರಿದಿದೆ- ಆಕೆ ಅರ್ಥಶಾಸ್ತ್ರಜ್ಞೆ, ಪರಿಸರವಾದಿ, ಫ್ಯಾಷನ್ ಡಿಸೈನರ್, ಮಾಜಿ ಸೇನಾ ಕೆಡೆಟ್ ಮತ್ತು ರೈಫಲ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ವಿಜೇತೆ. ಭಾರತದ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಾಕೆ. ಬಾಲ್ಯದಲ್ಲಿಯೇ ಆಲ್‌ರೌಂಡರ್ ಎಂದು ಕರೆಯಲ್ಪಡುತ್ತಿದ್ದ ಆಕೆ ಫ್ಯಾಷನ್ ವಿನ್ಯಾಸದ ಬಗ್ಗೆ ಉತ್ಸಾಹ ಹೊಂದಿದ್ದರು. ತನ್ನ ಶಾಲಾ ಅವಧಿಯಲ್ಲಿ ಶೈನಾ ಒಮ್ಮೆ ತನ್ನ ತಾಯಿಯ ಸೀರೆಯನ್ನು ಕತ್ತರಿಸಿ ಉಡುಪನ್ನು ವಿನ್ಯಾಸಗೊಳಿಸಿದ್ದಳು- ಇದು ಅವಳ ಸೃಜನಶೀಲತೆಯ ಆರಂಭಿಕ ಪ್ರದರ್ಶನವಾಗಿತ್ತು.

ವಡೋದರದ ವಂಡರ್ ವುಮನ್ ಎಂದು ಕರೆಯಲ್ಪಡುವ ಆಕೆ ಮಿಸ್ ಗುಜರಾತ್, ಮಿಸ್ ಇಂಡಿಯಾ ಅರ್ಥ್ 2017 ಮತ್ತು ಮಿಸ್ ಯುನೈಟೆಡ್ ನೇಷನ್ಸ್ 2018 ಗೆದ್ದಿರುವ ಕಿರೀಟಧಾರಿ ಸೌಂದರ್ಯ ರಾಣಿಯೂ ಆಗಿದ್ದಾರೆ. 2018ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು. ಇದು ಅವರ ಸುದೀರ್ಘ ಪ್ರಶಸ್ತಿಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ. ಗುಜರಾತ್‌ನಾದ್ಯಂತ 100,000 ಮರಗಳನ್ನು ನೆಡುವ ಅವರ ಉಪಕ್ರಮ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದ ಯೋಜನೆ.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸಂಬಳ, ಸೌಲಭ್ಯ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?