Crime Branch Raid: ರೇಪ್ ಕೇಸ್ ನಟನ ಮನೆಯ ಮೇಲೆ ಕ್ರೈಂ ಬ್ರಾಂಚ್ ರೇಡ್

By Suvarna NewsFirst Published Jan 14, 2022, 11:37 AM IST
Highlights
  • ಮಾಲಿವುಡ್ ನಟ ದಿಲೀಪ್ ಮನೆಗೆ ಕ್ರೈಂ ಬ್ರಾಂಚ್ ರೇಡ್
  • ಕಿಡ್ನಾಪ್, ರೇಪ್ ಕೇಸ್ ವಿಚಾರವಾಗಿ ಆರೋಪ ಎದುರಿಸುತ್ತಿರುವ ನಟ

ಜನವರಿ 13 ರಂದಯ ಆಲುವಾದಲ್ಲಿರುವ ನಟ ದಿಲೀಪ್(Dileep) ಅವರ ಮನೆಯ ಮೇಲೆ ಕೇರಳ ಕ್ರೈಂ ಬ್ರಾಂಚ್(Crime Branch) ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪೊಲೀಸರು ಅಲುವಾ(Aluva) ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ದಾಳಿ ಪ್ರಾರಂಭವಾಗಿದೆ. 2017ರ ಫೆಬ್ರವರಿಯಲ್ಲಿ ಮಹಿಳಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೃಶ್ಯಾವಳಿಗಳು ದಿಲೀಪ್ ಬಳಿ ಇದೆ ಎಂದು ಆರೋಪಿಸಿ ಬಾಲಚಂದ್ರಕುಮಾರ್ ಎಂಬವರ ಹೇಳಿಕೆಯನ್ನು ಕ್ರೈಂ ಬ್ರಾಂಚ್ ದಾಖಲಿಸಿದ ಒಂದು ದಿನದ ನಂತರ ಪೋಲೀಸ್ ಈ ಕ್ರಮ ಕೈಗೊಂಡಿದೆ. ಪಲ್ಸರ್ ಸುನಿ ಎಂಬಾತನನ್ನು ಅಪಹರಣಕ್ಕೆ ನೇಮಿಸಿದ ಆರೋಪ ದಿಲೀಪ್ ಮೇಲಿದೆ. ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಮೋಹನಚಂದ್ರನ್ ನೇತೃತ್ವದ 20 ಸದಸ್ಯರ ಕ್ರೈಂ ಬ್ರಾಂಚ್ ತಂಡವು ದಿಲೀಪ್ ಅವರ ‘ಪದ್ಮಸರೋವರಂ’ ಎಂಬ ಹೆಸರಿನ ಮನೆ ಮೇಲೆ ದಾಳಿ ನಡೆಸಿದೆ. ಹಲ್ಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಲಾಗಿದೆ ಎಂದು ಬಾಲಚಂದ್ರಕುಮಾರ್ ಆರೋಪಿಸಿದ ಮನೆ ಇದಾಗಿದೆ.

5 ವರ್ಷ ಬಳಿಕ ಮೌನ ಮುರಿದ ಭಾವನಾ ಮೆನನ್

ಬಾಲಚಂದ್ರಕುಮಾರ್ ಅವರ ಆರೋಪದ ನಂತರ, ಕ್ರೈಂ ಬ್ರಾಂಚ್ ಕಳೆದ ವಾರ ದಿಲೀಪ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಎಫ್‌ಐಆರ್‌ಗೆ ಸಂಬಂಧಿಸಿದಂತೆ ದಿಲೀಪ್ ಮನೆ ಮೇಲೆ ದಾಳಿ ನಡೆದಿದೆ. ನಟಿಯ ಲೈಂಗಿಕ ದೌರ್ಜನ್ಯದ ದೃಶ್ಯಗಳು ದಿಲೀಪ್ ಬಳಿ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಲಯಾಳಂ ಚಾನೆಲ್‌ಗಳ ಪ್ರಕಾರ, ಅಧಿಕಾರಿಗಳು ಬಂದಾಗ ಗೇಟ್‌ಗೆ ಬೀಗ ಹಾಕಲಾಗಿತ್ತು. ಪೊಲೀಸ್ ಅಧಿಕಾರಿಗಳು ಕಾಂಪೌಂಡ್ ಗೋಡೆ ಹಾರಿ ಒಳಗೆ ಪ್ರವೇಶಿಸಿದರೂ, ದಿಲೀಪ್ ಅವರ ಸಹೋದರಿ ನಂತರ ಆಗಮಿಸಿ ಅವರಿಗೆ ಗೇಟ್ ತೆರೆದರು. ಕೆಲ ಹೊತ್ತಿನಲ್ಲಿ ದಿಲೀಪ್ ಮನೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ದಿಲೀಪ್ ಅವರನ್ನು ಪ್ರಶ್ನಿಸಿಲ್ಲ ಎಂದು ಎಸ್ಪಿ ಮೋಹನಚಂದ್ರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

12 ಮಂದಿಯ ಪೊಲೀಸ್ ತಂಡವು ಆಲುವಾದಲ್ಲಿರುವ ದಿಲೀಪ್ ಸಹೋದರ ಅನೂಪ್ ಅವರ ಮನೆಯ ಮೇಲೂ ದಾಳಿ ನಡೆಸಿದೆ. ಪೊಲೀಸರು ದಾಖಲಿಸಿರುವ ಹೊಸ ಎಫ್‌ಐಆರ್‌ನಲ್ಲಿ ಅನೂಪ್ ಕೂಡ ಆರೋಪಿಯಾಗಿದ್ದಾರೆ. ದಿಲೀಪ್ ಅವರ ಗ್ರ್ಯಾಂಡ್ ಪ್ರೊಡಕ್ಷನ್ ಎಂಬ ಪ್ರೊಡಕ್ಷನ್ ಹೌಸ್ ಕಚೇರಿಗೆ ಪೊಲೀಸರು ಬಂದರೂ ಅದನ್ನು ಮುಚ್ಚಲಾಗಿತ್ತು. ಬಲವಂತವಾಗಿ ಕಚೇರಿಗೆ ನುಗ್ಗುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು. ಮಧ್ಯಾಹ್ನ 2.15ರ ಸುಮಾರಿಗೆ ನೌಕರರು ಕಚೇರಿ ತೆರೆದು ದಾಳಿ ಆರಂಭಿಸಿದರು.

ಲೈಂಗಿಕ ದೌರ್ಜನ್ಯ ಕೇಸ್, ಸ್ಟಾರ್ ನಟನ ವಿರುದ್ಧ ಮತ್ತೊಮ್ಮೆ FIR

ಮಾಲಿವುಡ್(Bollywood) ನಟ ದಿಲೀಪ್(Dileep) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದು ಈ ಘಟನೆ ಕಳೆದ ಕೆಲವು ವರ್ಷಗಳಲ್ಲಿ ಭಾರೀ ಸುದ್ದಿಯಾಗಿತ್ತು. ಮಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ದಿಲೀಪ್ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಸಿಗುವುದು ಭಾರೀ ಕಡಿಮೆ. ಮಾಲಿವುಡ್‌ನಲ್ಲೇ ಹಿಂದಿನಿಂದಲೂ ನಟಿಸುತ್ತಿರುವ ದಿಲೀಪ್ ಸಹನಟಿ ಮಂಜು ವಾರಿಯರ್ ಅವರನ್ನು ವರಿಸಿದ್ದರು. ನಂತರದಲ್ಲಿ ಅವರೊಂದಿಗೆ ವಿಚ್ಚೇದನೆ ಪಡೆದು ನಟಿ ಕಾವ್ಯ ಮಾಧವನ್ ಅವರನ್ನು ವಿವಾಹವಾಗಿದ್ದಾರೆ. ಸಹನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ನಟನ ಮೇಲೆ ಈಗ ಮತ್ತೊಂದು ಆರೋಪ ಕೇಳಿ ಬಂದಿದ್ದು ಸದ್ಯ ದಿಲೀಪ್ ಮತ್ತೆ ಸುದ್ದಿಯಲ್ಲಿದ್ದಾರೆ.

ಕ್ರೈಂ ಬ್ರಾಂಚ್ ಭಾನುವಾರ ನಟನ ವಿರುದ್ಧ ಫ್ರೆಶ್ ಎಫ್‌ಐಆರ್ ದಾಖಲಿಸಿದೆ.  ದಿಲೀಪ್ ಹಾಗೂ ಇತರ ಐವರ ವಿರುದ್ಧ ಎಫ್‌ಐಆರ್(FIR) ದಾಖಲಾಗಿದೆ. ಕ್ರಿಮಿನಲ್ ಉದ್ದೇಶಗಳು ಹಾಗೂ ಅತ್ಯಾಚಾರ ಕೇಸ್ ತನಿಖೆ ನಡೆಸುವ ತನಿಖಾಧಿಕಾರಿ ಹಾಗೂ ಉನ್ನತ ಅಧಿಕಾರಿಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ದಿಲೀಪ್ 8ನೇ ಅರೋಪಿ.

click me!