ಕಡೆಯ ಕ್ಷಣದ ಹೊಡಿಕೆ ಮಾಡುವವರು ಗಮನಿಸಬೇಕಾದ ಕೆಲವು ತಪ್ಪುಗಳು!

By Suvarna NewsFirst Published Mar 21, 2020, 1:21 PM IST
Highlights

ಸೆಕ್ಷನ್ 80ಸಿ ಪ್ರಕಾರ ಒಂದೂವರೆ ಲಕ್ಷದಷ್ಟು ಮೊತ್ತಕ್ಕೆ ತೆರಿಗೆ ರಿಯಾಯಿತಿ ಪಡೆಯಬಹುದು. ಇಪಿಎಫ್, ಹೋಂ ಲೋನ್,ಟ್ಯೂಷನ್ ಫೀಸು ಅಲ್ಲದೇ ವಾಲಂಟರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸ್ಕೀಮ್, ಸುಕನ್ಯ ಸಮೃದ್ಧಿ ಯೋಜನಾ ಇತ್ಯಾದಿಗಳಲ್ಲಿ ಹಣ ತೊಡಗಿಸಿ ಉಳಿಸಬಹುದು.
 

ಇನ್ನೇನು ಹತ್ತು ದಿನ ಇದೆ ಈ ತಿಂಗಳು ಮುಗಿಯಲು. ಈ ತಿಂಗಳು ಮುಗಿಯುವ ಮೊದಲೇ ತೆರಿಗೆ ಉಳಿತಾಯ ಮಾಡುವ ಕಾರಣಕ್ಕೆ ಹೊಸ ಹೊಸ ಇನ್‌ವೆಸ್ಟ್‌ಮೆಂಟ್ ಪ್ಲಾನ್ ಗಳಲ್ಲಿ ದುಡ್ಡು ಹೂಡಿಕೆ ಮಾಡುವ ಸಂಪ್ರದಾಯ ನಮಗಿದೆ. ಹೀಗೆ ಕೊನೆ ಗಳಿಗೆಯಲ್ಲಿ ಎಲ್ಲೆಲ್ಲೋ ದುಡ್ಡು ಹೂಡುವುದರಿಂದ ನಿಜಕ್ಕೂ ಲಾಭ ಇದೆಯಾ? ಪರಿಣತರು ಹೇಳುವ ಪ್ರಕಾರ ಸರಿಯಾದ ಹೂಡಿಕೆಯಿಂದ ಮಾತ್ರ ತೆರಿಗೆ ರಿಯಾಯಿತಿ ಪಡೆಯಬಹುದೇ ಹೊರತು ತಪ್ಪು ಹೂಡಿಕೆಗಳಿಂದ ತೆರಿಗೆ ರಿಯಾಯಿತಿ ಲಾಭ ಸಿಗುವುದಿಲ್ಲ. ಹಾಗಾಗಿ ಲಾಸ್ಟ್ ಮಿನಿಟ್ ಹೂಡಿಕೆ ಮಾಡುವವರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಅವಾಯ್ಡ್ ಮಾಡಬೇಕು. ಆ ತಪ್ಪುಗಳ ಪಟ್ಟಿ ಇಲ್ಲಿದೆ. ನೀವು ಕಡೆಯ ಕ್ಷಣದಲ್ಲಿ ಹೂಡಿಕೆ ಮಾಡಲು ಹೊರಟಿದ್ದರೆ ಇಲ್ಲೊಂಚೂರು ಗಮನ ಇರಲಿ.

ಕರ್ನಾಟಕ ಬಜೆಟ್ 2020: ಅಬಕಾರಿ ಮೇಲಿನ ಸುಂಕ ಹೆಚ್ಚಳ, ಎಣ್ಣೆ ಪ್ರಿಯರಿಗೆ ಬಿಗ್ ಶಾಕ್

ತೆರಿಗೆ ಪಾವತಿಸಬೇಕಾದ ಆದಾಯ ಲೆಕ್ಕ ಹಾಕದಿರುವುದು

ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸ ತೆರಿಗೆ ಪಾವತಿಸಬೇಕಾದ ನಿಮ್ಮ ಆದಾಯವನ್ನು ಲೆಕ್ಕ ಹಾಕುವುದು. ನೀವು ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಬರುವ ಸ್ಯಾಲರಿ ನಿಮ್ಮ ಆದಾಯದ ಒಂದು ಭಾಗ ಮಾತ್ರ ಆಗಿರಬಹುದು. ಉಳಿದಂತೆ ಬೇರೆ ಬ್ಯುಸಿನೆಸ್ ಆದಾಯ ಬರಬಹುದು, ಮನೆ ಬಾಡಿಗೆ ಕೊಟ್ಟಿದ್ದರೆ ಅಲ್ಲಿಂದ ಆದಾಯ ಬಂದಿರಬಹುದು, ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿದ್ದರೆ, ಷೇರು ಮಾರುಕಟ್ಟೆಯಿಂದ ಬಂದ ಲಾಭ ಹೀಗೆ ಬೇರೆ ಬೇರೆ ರೀತಿಯ ಆದಾಯಗಳನ್ನು ಲೆಕ್ಕ ಹಾಕಿ ಎಷ್ಟು ತೆರಿಗೆ ರಿಯಾಯಿತಿ ಪಡೆಯಬಹುದು ಎಂಬುದನ್ನು ಮೊದಲೇ ಲೆಕ್ಕಾಚಾರ ಮಾಡಿರಬೇಕು.

ಎಷ್ಟು ತೆರಿಗೆ ರಿಯಾಯಿತಿ ಈಗಾಗಲೇ ಸಿಗಲಿದೆ ಎಂಬ ಲೆಕ್ಕಾಚಾರ

ಸ್ಯಾಲರಿ ಪಡೆಯುವ ಒಬ್ಬ ವ್ಯಕ್ತಿ ಸಾಮಾನ್ಯವಾಗಿ 5೦ ಸಾವಿರದಷ್ಟು ಮೊತ್ತಕ್ಕೆ ತೆರಿಗೆ ರಿಯಾಯಿತಿ ಪಡೆಯುತ್ತಾನೆ. ಮನೆ ಬಾಡಿಗೆ ಕೊಡುವುದು, ಮಕ್ಕಳ ಟ್ಯೂಷನ್ ಫೀಸು, ಹೋಂಲೋನ್ ಇತ್ಯಾದಿಗಳಿದ್ದಾಗ ಆ ರಿಯಾಯಿತಿ ಪಡೆಯಬಹುದು. ಅದಕ್ಕಿಂತ ಜಾಸ್ತಿ ಮೊತ್ತಕ್ಕೆ ರಿಯಾಯಿತಿ ಪಡೆಯುವ ಬಗ್ಗೆ ಯೋಚಿಸಬೇಕಷ್ಟೇ. ಅದರಲ್ಲೂ ಸೆಕ್ಷನ್ 80ಸಿ ಪ್ರಕಾರ ಒಂದೂವರೆ ಲಕ್ಷದಷ್ಟು ಮೊತ್ತಕ್ಕೆ ರಿಯಾಯಿತಿ ಪಡೆಯಬಹುದಾಗಿದೆ. ನೀವು ಈಗಾಗಲೇ ಇಪಿಎಫ್ ಗೆ ಹಣ ಕಟ್ಟಿರುತ್ತೀರಿ, ಅದು ಸೇರಿ ಹೋಂಲೋನ್, ಟ್ಯೂಷನ್ ಫೀಸು ಎಲ್ಲವೂ ಇದರಲ್ಲೇ ಬರುತ್ತದೆ. ಅಲ್ಲದೇ ವಾಲಂಟಿರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸ್ಕೀಮ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಸುಕನ್ಯ ಸಮೃದ್ಧಿ ಯೋಜನಾ ಇತ್ಯಾದಿಗಳಲ್ಲಿ ಹಣ ತೊಡಗಿಸಿಕೊಂಡಿದ್ದರೆ ತೆರಿಗೆ ರಿಯಾಯಿತಿ ದೊರೆಯುತ್ತದೆ. ಅವನ್ನೆಲ್ಲಾ ಲೆಕ್ಕ ಹಾಕಿ ನೋಡಿ ಮುಂದಿನ ಹೆಜ್ಜೆ ಇಡಬೇಕಿದೆ.


ತೆರಿಗೆ ರಿಯಾಯಿತಿ ಯೋಚನೆ ಮಾಡುವಾಗ ಗೊಂದಲ ಬೇಡ

ಸಾಮಾನ್ಯವಾಗಿ ತೆರಿಗೆ ರಿಯಾಯಿತಿ ಯೋಚನೆ ಮಾಡುವವರು ಭವಿಷ್ಯದಲ್ಲಿ ದುಡ್ಡು ವಾಪಸ್ ಬರುವ ಕುರಿತೂ ಯೋಚನೆ ಮಾಡುತ್ತಾರೆ. ಯಾವಾಗ ತಾವು ಹೂಡಿದ ದುಡ್ಡು ವಾಪಸ್ ಬರುತ್ತದೆ ಎಂದು ಯೋಚಿಸುವುದು ಸಾಮಾನ್ಯ. ಆದರೆ ತೆರಿಗೆ ರಿಯಾಯಿತಿ ಪಡೆಯುವ ವೇಳೆಯಲ್ಲಿ ಜಾಸ್ತಿ ದುಡ್ಡು ವಾಪಸ್ ಪಡೆಯುವ ಯೋಜನೆಗಳ ಕುರಿತು ಆಲೋಚಿಸಿ ಗೊಂದಲಕ್ಕೆ ಒಳಗಾಗುವುದು ಒಳ್ಳೆಯದಲ್ಲ. ಹಾಗೆ ಯೋಚನೆ ಮಾಡುವುದಾದರೆ ಬೇರೆ ಬೇರೆ ಯೋಜನೆಗಳಿವೆ. ಈಗಿನ್ನೂಮದುವೆಯಾಗದವರು ತೆರಿಗೆ ರಿಯಾಯಿತಿಪಡೆಯುವ ಜತೆಗೆ ಮುಂದೆ ಭವಿಷ್ಯದಲ್ಲಿ ನೆರವಾಗುವಂತಹ ಯೋಜನೆಗಳಿಗೆ ಮಾರು ಹೋಗುತ್ತಾರೆ. ಹೀಗೆ ಹೋದಾಗ ಕಡಿಮೆ ಮೆಚ್ಯುರಿಟಿ ಸಮಯ ಇರುವಂತಹ ಯೋಜನೆಯಲ್ಲಿ ದುಡ್ಡು ಹೂಡುತ್ತಾರೆ. ಅದಕ್ಕೆ ಕಾರಣ ಮದುವೆ, ಮಕ್ಕಳು ಆದ ಮೇಲೆ ದುಡ್ಡು ಬೇಕಾಗುತ್ತದೆ ಅನ್ನುವ ಕಾರಣಕ್ಕೆ. ಅಂಥಾ ಸಮಯದಲ್ಲಿ ಕಡಿಮೆ ಮೆಚ್ಯುರಿಟಿ ಸಮಯ ಇರುವ ಯೋಜನೆಗಳಿಗಿಂತ ಹೆಚ್ಚು ಮೆಚ್ಯುರಿಟಿ ಸಮಯ ಇರುವ ಯೋಜನೆಗಳಲ್ಲಿ ದುಡ್ಡು ಹೂಡುವುದು ಒಳ್ಳೆಯದು ಅನ್ನುತ್ತಾರೆ ಪರಿಣತರು. ಅದಕ್ಕೆಂದೇ ವಿಪಿಎಫ್, ಪಿಪಿಎಫ್, ಎನ್ ಪಿಎಸ್ ಗಳನ್ನು ಆರಿಸಬಹುದು. ತೆರಿಗೆ ರಿಯಾಯಿತಿ ಪಡೆಯುವುದೇ ಬೇರೆ ಭವಿಷ್ಯದ ಯೋಚನೆಯೇ ಬೇರೆ. ಗೊಂದಲ ಮಾಡಬಾರದು. ಯೋಚನೆ ಮಾಡಿ ಯೋಜನೆ ಆರಿಸಿ.

ಫಾರಿನ್‌ ಟೂರ್ ಇನ್ನು ಬಲು ದುಬಾರಿ: ಕೇಂದ್ರದ 'ತೆರಿಗೆ' ಪ್ರಹಾರ!

ಇನ್ಸುರೆನ್ಸ್ ಕಡೆಗೆ ಸರಿಯಾದ ಗಮನ ಇರದೇ ಇರುವುದು

ತೆರಿಗೆ ರಿಯಾಯಿತಿ ಪಡೆಯುವ ಕಾರಣಕ್ಕೆ ಹಲವಾರು ಮಂದಿ ಅರ್ಜೆಂಟಿಗೆ ಇನ್ಸುರೆನ್ಸ್ ಪಾಲಿಸಿ ಪಡೆಯುತ್ತಾರೆ. ಇನ್ಸುರೆನ್ಸ್ ನ ನಿಜವಾದ ಅವಶ್ಯಕತೆ ಏನು ಅಂದರೆ ನಮ್ಮ ಅಥವಾ ನಮ್ಮ ಕುಟುಂಬದ ಆರೋಗ್ಯ, ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳುವುದು. ಏನಾದರೂ ಅನಾರೋಗ್ಯ.ಅಥವಾ ಅವಘಡ ಸಂಭವಿಸಿದಲ್ಲಿ ಇನ್ಸುರೆನ್ಸ್ ನೆರವಾಗಲಿ ಎಂಬ ಕಾರಣಕ್ಕೆ. ಅದಕ್ಕೆ ತಕ್ಕಂತೆ ಇನ್ಸುರೆನ್ಸ್ ಪಾಲಿಸಿ ಮಾಡಿಸಿಕೊಳ್ಳಬೇಕು. ಈಗಂತೂ ಹೆಲ್ತ್ ಇನ್ಸುರೆನ್ಸ್ ಇಲ್ಲದೆ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಹಾಗಾಗಿ ನಮ್ಮ ಅಗತ್ಯಕ್ಕಾಗಿ ಇನ್ಸುರೆನ್ಸ್ ಪಾಲಿಸಿ ಪಡೆಯಬೇಕೇ ಹೊರತು ಅರ್ಜೆಂಟಿಗೆ, ತೆರಿಗೆ ರಿಯಾಯಿತಿ ಪಡೆಯುವುದಕ್ಕೆ ಇನ್ಸುರೆನ್ಸ್ ಪಡೆಯಲು ಹೋಗದಿರಿ.

click me!