ಹಣ ವರ್ಗಾವಣೆ ಮತ್ತಷ್ಟು ಸುಲಭ: ಎಸ್‌ಬಿಐ ಮೊಪ್ಯಾಡ್ ಲಾಂಚ್!

Aug 9, 2018, 5:26 PM IST

ಬೆಂಗಳೂರು(ಆ.9): ಡಿಜಿಟಲ್ ಇಂಡಿಯಾ ಪರಿಕಲ್ಪನೆ ಬಂದ ಮೇಲೆ ಜನ ಹಣ ಉಪಯೋಗಿಸುವ ರೀತಿಯೇ ಬದಲಾಗಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸ್ವೈಪ್ ಮೂಲಕ ಆನ್‌ಲೈನ್ ಹಣ ಪಾವತಿ ಇದೀಗ ಜನಮನ್ನಣೆ ಗಳಿಸಿದೆ.

ಇದೇ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊಪ್ಯಾಡ್ ಎಂಬ ವಿನೂತನ ಸಾಧನ ಪರಿಚಯಿಸಿದೆ. ಮೊಪ್ಯಾಡ್ ಮೂಲಕ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳ ಮೂಲಕ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಬಹುದಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನ ಆರ್ ಆರ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಎಸ್‌ಬಿಐ ಮೊಪ್ಯಾಡ್ ಸೇವೆಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಭಾರತ್ ಕ್ಯೂಆರ್ ಮತ್ತು ಎಸ್‌ಬಿಐ ಬಡ್ಡೀ ಎಂಬ ಹೊಸ ಆ್ಯಪ್‌ಗಳನ್ನು ಕೂಡ ಬಿಡುಗಡೆ ಮಾಡಲಾಯಿತು.