
ಮೈಸೂರು : ಕ್ರಿಕೆಟ್ ಬೆಟ್ಟಿಂಗ್ ಗಾಗಿ ಸಾಲ ಮಾಡಿ, ಆ ಸಾಲವನ್ನು ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ ಸಿವಿಲ್ ಎಂಜಿನಿಯರನನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಗೆಂಡೆಕೊಪ್ಪಲು ಗ್ರಾಮದ ನಿವಾಸಿ ಕೇಶವ(26) ಎಂಬವರೇ ಬಂಧಿತ ಆರೋಪಿ. ಈತನಿಂದ 1.20 ಲಕ್ಷ ರೂ. ಮೌಲ್ಯದ ಎರಡು ದ್ವಿಚಕ್ರವಾಹನಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಇ ಸಿವಿಲ್ ಎಂಜಿನಿಯರಿಂಗ್ ಓದಿರುವ ಕೇಶವ ಕಳೆದ ಮೂರು ವರ್ಷಗಳಿಂದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ದಾಸನಾಗಿ 3 ಲಕ್ಷ ರೂ. ಕಳೆದುಕೊಂಡಿದ್ದ. ಸಾಲ ಹೆಚ್ಚಾದ ಹಿನ್ನಲೆ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ. ದ್ವಿಚಕ್ರ ವಾಹನ ಕಳ್ಳತನ ವೇಳೆ ಗಸ್ತಿನಲ್ಲಿದ್ದ ಕುವೆಂಪುನಗರ ಠಾಣೆಯ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ವಿಚಾರಣೆ ವೇಳೆ ಈತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡಿರುವ 8 ಪ್ರಕರಣ ಪತ್ತೆಯಾಗಿದೆ.
ಕುವೆಂಪುನಗರ ಠಾಣೆ ಇನ್ಸ್ ಪೆಕ್ಟರ್ ಡಿ. ಯೋಗೇಶ್, ಎಸ್‌ಐ ಗೋಪಾಲ್, ಸಿಬ್ಬಂದಿ ಮಂಜುನಾಥ್, ಆನಂದ್, ಹಜರತ್ ಆಲಿ, ಸುರೇಶ್, ನಾಗೇಶ್ ಈ ಪತ್ತೆ ಮಾಡಿದ್ದಾರೆ.