ಅನಿವಾಸಿ ಕನ್ನಡಿಗ ಬಿ. ಆರ್. ಶೆಟ್ಟಿಗೆ ಸಂಕಷ್ಟ: ತಾವೇ ಸ್ಥಾಪಿಸಿದ ಸಂಸ್ಥೆಯಿಂದ ಹೊರಕ್ಕೆ!

By Suvarna NewsFirst Published Feb 20, 2020, 12:12 PM IST
Highlights

ಭಾರೀ ಪ್ರಮಾಣದಲ್ಲಿ ಷೇರು ಕುಸಿದ ಪರಿಣಾಮ| ಅನಿವಾಸಿ ಭಾರತೀಯ ಉದ್ಯಮಿ ಬಿ ಆರ್ ಶೆಟ್ಟಿಗೆ ಸಂಕಷ್ಟ| ತಾವೇ ಸ್ಥಾಪಿಸಿದ ಸಂಸ್ಥೆಯಿಂದಲೂ ಬಿ ಆರ್ ಶೆಟ್ಟಿ ಹೊರಕ್ಕೆ

ನವದೆಹಲಿ[ಫೆ.20]: ಭಾರೀ ಪ್ರಮಾಣದಲ್ಲಿ ಷೇರು ಕುಸಿದ ಪರಿಣಾಮ ಅನಿವಾಸಿ ಭಾರತೀಯ, ಕನ್ನಡಿಗ ಉದ್ಯಮಿ ಬಿ ಆರ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. 

ಷೇರು ಮಾರುಕಟ್ಟೆ ಕುಸಿತದಿಂದಾಗಿ ಉದ್ಯಮಿ ಬಿ ಆರ್ ಶೆಟ್ಟಿ ತಾವೇ ಸ್ಥಾಪಿಸಿದ್ದ NMC ಹೆಲ್ತ್ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯ ಸದಸ್ಯರ ಒತ್ತಾಯಕ್ಕೆ ಮಣಿದು ಬಿ ಆರ್ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. 

ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್‌. ಶೆಟ್ಟಿ ಫಿಲ್ಮ್‌ ಸಿಟಿ ಸ್ಥಾಪನೆ!

ಸಂಸ್ಥೆಯ ಷೇರು ಮೌಲ್ಯ ಶೇಕಡಾ 40ರಷ್ಟು ಕುಸಿತ ಕಂಡಿದ್ದು, NMC ಹೆಲ್ತ್ ಸಂಸ್ಥೆಯ ವ್ಯವಹಾರ ಪಾರದರ್ಶಕವಾಗಿಲ್ಲ ಎಂಬ ವರದಿಯೂ ಹೊರ ಬಿದ್ದಿತ್ತು. ಹೀಗಿರುವಾಗ ಉದ್ಯಮಿಯ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಬಿ. ಆರ್. ಶೆಟ್ಟಿ ತಮ್ಮ ಸ್ಥಾನಕ್ಕೆ ಗುಡ್ ಬೈ ಎಂದಿದ್ದಾರೆ.

ಯುಎಇಯಲ್ಲಿ ಹಲವು ಉದ್ದಿಮೆ ಹೊಂದಿರುವ ಮಂಗಳೂರು ಮೂಲದ ಬಿ ಆರ್ ಶೆಟ್ಟಿ 1975ರಲ್ಲಿ NMC ಹೆಲ್ತ್ ಸಂಸ್ಥೆ ಸ್ಥಾಪಿಸಿದ್ದರು. ಇದು ಯುಎಇಯಲ್ಲಿ NMC ಹೆಲ್ತ್ ಸಂಸ್ಥೆ ಅತೀ ದೊಡ್ಡ ಮೆಡಿಕಲ್ ಜಾಲ ಹೊಂದಿದೆ.  

#NewsIn100Seconds ಪ್ರಮುಖ ಹೆಡ್‌ಲೈನ್ಸ್

"

ಫೆಬ್ರವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!