ಡಬ್ಬದಲ್ಲಿ, ಹರಿದ ಪರ್ಸ್ ನಲ್ಲಿ ಹಣವಿದ್ಯಾ? ನೂರು ರೂಪಾಯಿ ಹಳೆ ನೋಟಿದ್ಯಾ? ಈಗ್ಲೇ ಅದನ್ನು ಚೆಕ್ ಮಾಡಿ. ನೋಟು ವಿಶೇಷತೆ ಹೊಂದಿದ್ರೆ ಮನೆಯಲ್ಲೇ ಲಕ್ಷ ಸಂಪಾದನೆ ಮಾಡ್ಬಹುದು. ಏನ್ ಮಾಡ್ಬೇಕು ಅನ್ನೋದನ್ನು ಮೊದಲು ತಿಳಿಯಿರಿ.
ಆನ್ಲೈನ್ ನಲ್ಲಿ ಹಣ ಸಂಪಾದನೆ (online Earn money) ಮಾಡೋದು ಈಗ ಬಹಳ ಸುಲಭ. ವಿಡಿಯೋ ಹಾಕ್ಬೇಕು, ಫೋಟೋ ಎಡಿಟ್ ಮಾಡ್ಬೇಕು ಅಂತೇನಿಲ್ಲ. ಮನೆ ಕಪಾಟಿನ ಮೂಲೆಯಲ್ಲಿ ಹಳೆ ನೋಟು (old notes), ನಾಣ್ಯವಿದ್ರೆ ಹುಡುಕಿ. ನಿಮ್ಮ ಬಳಿ ಇರುವ ವಿಶೇಷ ನೋಟುಗಳೇ ನಿಮ್ಮನ್ನು ಲಕ್ಷಾಧಿಪತಿ ಮಾಡುತ್ತೆ. ವೆಬ್ಸೈಟ್ (website) ನಲ್ಲಿ ನೋಟಿನ ಫೋಟೋ ಪೋಸ್ಟ್ ಮಾಡಿದ್ರೆ ಸಾಕು.
100 ರೂಪಾಯಿ ನೀಡಿ 21 ಲಕ್ಷ ಗಳಿಸಿ : ಮನೆಯಲ್ಲೇ ಕುಳಿತು 100 ರೂಪಾಯಿಗೆ 21 ಲಕ್ಷ ಸಂಪಾದನೆ ಮಾಡುವ ಐಡಿಯಾವನ್ನು ನಾವು ಹೇಳ್ತೇವೆ. 100 ರೂಪಾಯಿ ನೋಟಿನ ಬೆಲೆ 21 ಲಕ್ಷ ಅಂದ್ರೆ ನೀವು ದಂಗಾಗ್ಬಹುದು. ಆದ್ರೆ ಇದು ಸತ್ಯ. ಇದಕ್ಕೆ ಕೆಲವೊಂದು ಷರತ್ತಿದೆ. ಅದನ್ನು ನೀವು ಫಾಲೋ ಮಾಡ್ಬೇಕಾಗುತ್ತದೆ.
undefined
RBI ಎಚ್ಚರಿಕೆಯ ಗೈಡ್‌ಲೈನ್: 100, 200 ಮತ್ತು 500 ರೂ ಫೇಕ್ ನೋಟು ಪತ್ತೆ ಹಚ್ಚೋದು ಹೇಗೆ?
100 ರೂಪಾಯಿ ನೋಟಿನ ವೈಶಿಷ್ಟ್ಯಗಳು : ವಿಶ್ವ ಮಾರುಕಟ್ಟೆಯಲ್ಲಿ ಹಲವು ವೆಬ್‌ಸೈಟ್‌ಗಳು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸುತ್ತಿವೆ. ಅದಕ್ಕೆ ಪ್ರತಿಯಾಗಿ ಉತ್ತಮ ಮೊತ್ತವನ್ನು ನೀಡುತ್ತವೆ. ನೀವು ನೋಟು ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ನಿರ್ಧರಿಸಿದ್ದರೆ ಈ ಅವಕಾಶವನ್ನು ತಪ್ಪಿಸಿಕೊಳ್ಬೇಡಿ. ನಿಮ್ಮ ಬಳಿ ಇರುವ ನೂರು ರೂಪಾಯಿ ನೋಟಿನ ಕ್ರಮಸಂಖ್ಯೆ 786 ಆಗಿರಬೇಕು. ಆಗ ನೀವು ನೋಟನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ.
786 ಸಂಖ್ಯೆ ಯಾಕೆ ? : ಮುಸ್ಲಿಂ ಸಮಾಜದಲ್ಲಿ 786 ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಖರೀದಿಸಿದ್ರೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ಜನರು ಭಾವಿಸ್ತಾರೆ. ಈ ನಂಬರ್ ನೋಟಿದ್ದರೆ ಅದನ್ನು ಅವರು ಎಷ್ಟು ಹಣ ನೀಡಿಯಾದ್ರೂ ಖರೀದಿ ಮಾಡ್ತಾರೆ. ನೀವು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ನೂರು ರೂಪಾಯಿ ನೋಟನ್ನು 7 ಲಕ್ಷಕ್ಕೆ ಮಾರಾಟ ಮಾಡಬಹುದು. ನಿಮ್ಮ ಬಳಿ ಮೂರು ನೋಟುಗಳಿದ್ದರೆ 21 ಲಕ್ಷ ರೂಪಾಯಿ ಆರಾಮವಾಗಿ ಗಳಿಸಬಹುದು.
ಈ ನೂರು ರೂಪಾಯಿ ನೋಟನ್ನು ಎಲ್ಲಿ ಮಾರಾಟ ಮಾಡುವುದು? : ಆನ್ಲೈನ್ ಈ ನೋಟುಗಳನ್ನು ನೀವು ಮಾರಾಟ ಮಾಡಬಹುದು. Quikr ವೆಬ್‌ಸೈಟ್ ನಿಮಗೆ ನೋಟುಗಳನ್ನು ಮಾರಾಟ ಮಾಡುವ ಅವಕಾಶ ನೀಡ್ತಿದೆ. ಮೊದಲು ನೀವು Quikr ವೆಬ್ ಸೈಟ್ ಗೆ ಲಾಗಿನ್ ಆಗ್ಬೇಕು. ನೋಟುಗಳ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ಆ ನಂತ್ರ ಗ್ರಾಹಕರು ಸ್ವಯಂಚಾಲಿತವಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಆ ನಂತ್ರ ನೀವು ಗ್ರಾಹಕರಿಗೆ ನೋಟಿನ ಬೆಲೆ ಹೇಳಿ, ವ್ಯವಹಾರ ಕುದುರಿಸಿಕೊಳ್ಳಬಹುದು. Quikr ವೆಬ್‌ಸೈಟ್ ಅಧಿಕೃತವಾಗಿ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದ್ರೆ ಈ ನೂರು ರೂಪಾಯಿ 7 ಲಕ್ಷಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗ್ತಿದೆ ಎಂದು ಮಾಧ್ಯಮಗಳು ಅಂದಾಜಿಸಿವೆ.
ಹಳೆ ನೋಟು, ನಾಣ್ಯವನ್ನು ಖರೀದಿ ಮಾಡುತ್ತೆ ಈ ವೆಬ್ ಸೈಟ್ : ಬರೀ Quikr ವೆಬ್‌ಸೈಟ್ ಮಾತ್ರವಲ್ಲ ಇನ್ನೂ ಕೆಲ ವೆಬ್ಸೈಟ್ ನಲ್ಲಿ ನೀವು ವಿಶೇಷವಾಗಿರುವ ನಾಣ್ಯ ಹಾಗೂ ನೋಟುಗಳನ್ನು ಮಾರಾಟ ಮಾಡಬಹುದು.
ಒಲಾ ಇವಿ ಬಗ್ಗೆ ಸಾಲು ಸಾಲು ದೂರು, ಕೇಂದ್ರದ ಸಮಿತಿಯಿಂದ ಕಂಪನಿಗೆ ನೋಟಿಸ್
1. ಕಾಯಿನ್ ಬಜಾರ್ (coinbazzar.com) ವೆಬ್‌ಸೈಟ್ ಮೂಲಕವೂ ನೀವು ಹಳೆ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡಬಹುದು. ಸ್ಟೋರ್ ಮ್ಯಾನೇಜರ್‌ಗೆ ಹೋಗಿ ಇಮೇಲ್ ಐಡಿ ಸಹಾಯದಿಂದ ಹೆಸರು ನೋಂದಾಯಿಸಿ ಜಾಹೀರಾತು ಪೋಸ್ಟ್ ಮಾಡಬಹುದು. ಅಲ್ಲದೆ ವಾಟ್ಸಾಪ್ ಸಂಖ್ಯೆ +91 121 433 0679 ನಲ್ಲಿಯೂ ನಾಣ್ಯಗಳನ್ನು ಮಾರಾಟ ಮಾಡುವ ಬಗ್ಗೆ ಚಾಟ್ ಮಾಡಬಹುದು.
2. OLX ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಹಳೆಯ ನಾಣ್ಯಗಳು,ನೋಟುಗಳ ಜಾಹೀರಾತನ್ನು ಪೋಸ್ಟ್ ಮಾಡಬಹುದು.