ಆಟೋ ಮೊಬೈಲ್, ಷೇರು ಮಾರುಕಟ್ಟೆ ತಲ್ಲಣ: ಮತ್ತೊಂದು ಆರ್ಥಿಕ ಹಿಂಜರಿಕೆಯ ಛಾಯೆ!

By Web DeskFirst Published Aug 4, 2019, 9:16 AM IST
Highlights

ಆಟೋ ಮೊಬೈಲ್, ಷೇರು ಮಾರುಕಟ್ಟೆ ತಲ್ಲಣ| ಕೈಗಾರಿಕೆಗಳಲ್ಲಿ ಉದ್ಯೋಗ ಕಡಿತದ ಭೀತಿ| ಮತ್ತೊಂದು ಆರ್ಥಿಕ ಹಿಂಜರಿಕೆಯ ಛಾಯೆ!

ನವದೆಹಲಿ[ಆ.04]: 

 

ಕಳೆದೊಂದು ವರ್ಷದಿಂದ ದೇಶದ ಆರ್ಥಿಕತೆ ಹಂತಹಂತವಾಗಿ ಕುಸಿತ ಕಾಣುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಲೇ ಬರುತ್ತಿವೆ. ವಿಪಕ್ಷಗಳ ಆರೋಪವನ್ನು ಸರ್ಕಾರ ಸತತವಾಗಿ ನಿರಾಕರಿಸುತ್ತ ಬರುತ್ತಲೇ ಇದ್ದರೂ, ಇದೀಗ ಆರ್ಥಿಕತೆ ಕುಸಿದಿರುವ ಲಕ್ಷಣಗಳು ನಿಧನವಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲಿ ಕೆಲ ಪ್ರಮುಖ ಅಂಶಗಳು ಹೀಗಿವೆ.

1. ದಿನ​ಬ​ಳ​ಕೆಯ ವಸ್ತು​ಗಳ ಮಾರಾಟ ಕುಸಿ​ತ

ದೇಶದ ಆರ್ಥಿಕತೆಯ ಪ್ರಮುಖ ಸೂಚ್ಯಂಕಗಳ ಪೈಕಿ ದಿನಬಳಕೆ ವಸ್ತುಗಳ ಮಾರಾಟ ಪ್ರಮುಖವಾದುದು. ಆದರೆ ಈ ಉದ್ಯಮದ ಪ್ರಮುಖ ಕಂಪನಿಗಳು ಇತ್ತೀಚೆಗೆ ಪ್ರಕಟಿಸಿದ ತಮ್ಮ ಎರಡನೇ ತ್ರೈಮಾಸಿಕ ವರದಿ ಅತ್ಯಂತ ನಿರಾಶಾದಾಯಕವಾಗಿದೆ. ಮೊದಲ ತ್ರೈಮಾಸಿಕದಲ್ಲಿ ಎರಡಂಕಿಯ ಪ್ರಗತಿ ದಾಖಲಿಸಿದ್ದ ಹಿಂದುಸ್ತಾನ್‌ ಯುನಿಲಿವರ್‌, ಐಟಿಸಿ, ಗೋದ್ರೇಜ್‌ ಸೇರಿ ಹಲವು ಕಂಪನಿಗಳು 2ನೇ ತ್ರೈಮಾಸಿಕದಲ್ಲಿ ಕೇವಲ ಒಂದಂಕಿ ಬೆಳವಣಿಗೆ ದಾಖಲಿಸಿವೆ.

2. ಆಟೋಮೊಬೈ​ಲ್‌ ಸಾರ್ವ​ಕಾ​ಲಿ​ಕ ಕುಸಿ​ತ

ಆಟೋ​ಮೊ​ಬೈಲ್‌ ಕ್ಷೇತ್ರ​ದಲ್ಲಿ ಸಾರ್ವ​ಕಾ​ಲಿಕ ಕುಸಿ​ತ ಕಂಡುಬಂದಿದೆ. ಈ ಕ್ಷೇತ್ರ​ದಲ್ಲಿ ಒಟ್ಟು 3.7 ಕೋಟಿ ಜನ ಕೆಲಸ ಮಾಡು​ತ್ತಿದ್ದು, ದೇಶದ ಜಿಡಿ​ಪಿ​ಗೆ ಶೇ.7 ರಷ್ಟುಕೊಡುಗೆ ನೀಡು​ತ್ತಿದೆ. ಸದ್ಯ ಈ ಕ್ಷೇತ್ರ ​ಕೂಡ ಹಳ್ಳ ಹಿಡಿ​ದಿದ್ದು, ಕಳೆದ ಕೆಲ ತಿಂಗಳಿನಿಂದ 5 ಲಕ್ಷ ಪ್ರಯಾಣಿಕ ವಾಹನಗಳು ಮತ್ತು 30 ಲಕ್ಷ ದ್ವಿಚಕ್ರ ವಾಹ​ನ​ಗಳು ಮಾರಾ​ಟ​ವಾ​ಗದೆ ಉಳಿ​ದಿದೆ. ಅಟೋ​ಮೊ​ಬೈಲ್‌ ದೈತ್ಯ ಮಾರುತಿಯ ಷೇರು ಮೌಲ್ಯ ಕಳೆ​ದೊಂದು ವರ್ಷ​ದಿಂದ ಶೇ.26 ರಷ್ಟುಕುಸಿ​ದಿದ್ದು, ಇದು ಭಾರ​ತ​ದ​ಲ್ಲಿ ಅಟೋ​ಮೊ​ಬೈಲ್‌ ಕ್ಷೇತ್ರದ ಕುಸಿ​ತ​ವನ್ನು ಸಾರಿ ಹೇಳು​ತ್ತಿದೆ.

ಆರ್ಥಿಕತೆ: 7ನೇ ಸ್ಥಾನಕ್ಕೆ ಕುಸಿದ ಭಾರತ, ಮೇಲಕ್ಕೇರಿದ ಬ್ರಿಟನ್‌, ಫ್ರಾನ್ಸ್‌!

3. ಕಂಪ​ನಿ​ಗ​ಳಿಗೆ ಸರ್ಕಾ​ರ​ದಿಂದ ಮೂಗು​ದಾರ

ನಿರ್ಮಲಾ ಸೀತಾ​ರಾ​ಮನ್‌ ಮಂಡಿ​ಸಿದ ಬಜೆ​ಟ್‌​ನಲ್ಲಿ ಆಗರ್ಭ ಶ್ರೀಮಂತ ತೆರಿಗೆ ವಿಧಿ​ಸಿ​ರುವುದು ಕಂಪ​ನಿಗಳಿಗೆ ಹಿನ್ನ​ಡೆ​ಯಾ​ಗಿದೆ. ಇದ​ರಿಂದಾಗಿ ಕಂಪನಿಗಳು ತನ್ನ ರಚ​ನೆ​ಯನ್ನು ಬದ​ಲಿ​ಕೊ​ಳ್ಳ​ಬೇ​ಕಾದ ಅನಿ​ವಾರ್ಯ ಎದು​ರಾ​ಗಿದೆ. ಅಲ್ಲದೇ ಕೇಂದ್ರ ಸರ್ಕಾ​ರದ ಹೊಸ ಕಾರ್ಮಿಕ ನೀತಿಯಿಂದಾಗಿ ಈಗಾ​ಗ​ಲೇ ಕೈಗೊಂಡಿ​ರುವ ನೌಕ​ರರ ನೇಮ​ಕಾ​ತಿ​ಯನ್ನೂ ಕೂಡ ಕಂಪ​ನಿ​ಗಳು ತಡೆ ಹಿಡಿ​ದಿವೆ. ಇದರ ಜತೆಗೆ ಬ್ಯಾಂಕ್‌​ಗಳ ಮರು​ಬಂಡ​ವಾಳ, ನಗ​ದಿನ ಕೊರತೆಯಿಂದಾಗಿ ಕಂಪ​ನಿ​ಗಳ ಬೆಳ​ವ​ಣಿ​ಗೆಯ ವೇಗಕ್ಕೆ ಬ್ರೇಕ್‌ ಬಿದ್ದಿದೆ.

4. ಜಾಗ​ತಿಕ ಸುಂಕ ಯುದ್ಧ

ಕಳೆ​ದೊಂದು ವರ್ಷ​ದಲ್ಲಿ ಭಾರ​ತದ ರಫ್ತು ಶೇ.10 ರಷ್ಟುಕುಂಠಿ​ತ​ವಾ​ಗಿದ್ದು, ಅಮೆ​ರಿಕಾ- ಚೀನಾ ತೆರಿಗೆ ಸಮ​ರ​ದಿಂದಾಗಿ ಇದು ಮತ್ತಷ್ಟುಬಿಗ​ಡಾ​ಯಿ​ಸಿದೆ. ಅಂತಾ​ರಾ​ಷ್ಟ್ರೀಯ ಹಣ​ಕಾಸು ನಿಧಿ ಕೂಡ ಇದನ್ನು ಸ್ಪಷ್ಟಪಡಿ​ಸಿ​ದ್ದು ಆಂತ​ರಿಕ ಬೇಡಿಕೆ ಕುಸಿ​ತ​ದೊಂದಿಗೆ ಕೆಲ ಬಾಹ್ಯ ಕಾರ​ಣ​ಗಳೂ ಕೂಡ ಭಾರ​ತದ ಬೆಳ​ವ​ಣಿ​ಗೆಗೆ ತಡೆ​ಯಾ​ಗಿದೆ ಎಂದು ಹೇಳಿದೆ. ಇದರ ಜತೆಗೆ ಕೃಷಿ ಸುಧಾ​ರಣೆ, ಜಿಎ​ಸ್‌ಟಿ ಮರು​ಪಾ​ವತಿ ಆರ್ಥಿ​ಕ​ತೆಗೆ ದೊಡ್ಡ ಹೊಡೆತ ನೀಡಿದೆ.

5. ಮಾರು​ಕ​ಟ್ಟೆ​ಯಲ್ಲಿ ಕರಡಿ ಕುಣಿ​ತ

ಎರಡನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೂಡಿಕೆದಾರರ ಸಂಪತ್ತಿನಲ್ಲಿ 12 ಲಕ್ಷ ಕೋಟಿ ಮಾಯವಾಗಿದೆ. ಪ್ರತಿ 10ರಲ್ಲಿ 9 ಷೇರುಗಳು ಕುಸಿತ ಕಂಡಿವೆ. ಇದು ದೇಶದ ಆರ್ಥಿಕತೆ ಬೆಳವಣಿಗೆ ಬಗ್ಗೆ ಉಂಟಾಗಿರುವ ಸಂಶಯಕ್ಕೆ ಉದಾಹರಣೆ ಎನ್ನಲಾಗುತ್ತಿದೆ.

click me!