Cyber Fraud:ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬ್ಯಾಂಕ್ ಖಾತೆಗೆ ಕನ್ನ; 3.82 ಲಕ್ಷ ರೂ. ವಂಚನೆ

By Suvarna NewsFirst Published May 28, 2022, 12:51 PM IST
Highlights

*ಕ್ರೆಡಿಟ್ ಕಾರ್ಡ್ ಮಾಹಿತಿ ಬಳಸಿ ಖಾತೆಯಿಂದ ಹಣ ವರ್ಗಾವಣೆ
*ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬೋನಿ ಕಪೂರ್
*ಫೆಬ್ರವರಿ 9ರಂದು ನಡೆದ ಘಟನೆ
*ಗುರ್ಗಾಂವ್ ನಲ್ಲಿರುವ ಕಂಪನಿಯೊಂದರ ಖಾತೆಗೆ ಹಣ ವರ್ಗಾವಣೆ 

ಮುಂಬೈ (ಮೇ 28): ಬಾಲಿವುಡ್ (Bollywood) ನಿರ್ಮಾಪಕ  (Producer) ಬೋನಿ ಕಪೂರ್ (Boney Kapoor) ಸೈಬರ್ ವಂಚನೆಗೊಳಗಾಗಿದ್ದು, 3.84ಲಕ್ಷ ರೂ. ಕಳೆದುಕೊಂಡಿದ್ದಾರೆ. ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್(Credit card) ದುರ್ಬಳಕೆ ಮಾಡಿಕೊಂಡು ಫೆಬ್ರವರಿ 9ರಂದು ಅವರ ಖಾತೆಯಿಂದ 3.82 ಲಕ್ಷ ರೂ. ಹಣವನ್ನು 5 ವಹಿವಾಟುಗಳ ಮೂಲಕ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಬೋನಿ ಕಪೂರ್ ಮುಂಬೈಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ (Information Technology Act) ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಬ್ಯಾಂಕ್ ಖಾತೆಯಿಂದ ಹಣ ವಿತ್ ಡ್ರಾ (withdraw) ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಬೋನಿ ಕಪೂರ್, ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಆ ಬಳಿಕ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ವಂಚನೆಗೆ ಸಂಬಂಧಿಸಿ ಪೊಲೀಸರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಯಾರೂ ತನ್ನ ಬಳಿ ಕ್ರೆಡಿಟ್ ಕಾರ್ಡ್ ಮಾಹಿತಿ ಕೇಳಿಲ್ಲ ಹಾಗೂ ಈ ಕುರಿತು ಯಾವುದೇ ಫೋನ್ ಕರೆಯನ್ನು ಕೂಡ ಸ್ವೀಕರಿಸಿಲ್ಲ ಎಂದು ಬೋನಿ ಕಪೂರ್ ತಿಳಿಸಿದ್ದಾರೆ. 

SBI Customers Alert: ನಕಲಿ ಎಸ್ ಎಂಎಸ್ ಬಗ್ಗೆ ಎಚ್ಚರ, ಅಪ್ಪಿತಪ್ಪಿಯೂ ಪ್ರತಿಕ್ರಿಯಿಸಬೇಡಿ: ಎಸ್ ಬಿಐ ಗ್ರಾಹಕರಿಗೆ ಪಿಐಬಿ ಸಲಹೆ

ಬೋನಿ ಕಪೂರ್ ಕಾರ್ಡ್ ಬಳಕೆ ಮಾಡುವ ಸಂದರ್ಭದಲ್ಲಿ ಯಾರೋ ಮಾಹಿತಿಗಳನ್ನು ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕಪೂರ್ ಖಾತೆಯಲ್ಲಿನ ಹಣ ಗುರ್ಗಾಂವ್ ನಲ್ಲಿರುವ ಕಂಪನಿಯೊಂದರ ಖಾತೆಗೆ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. 
ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಕೂಡ ಕಳೆದ ತಿಂಗಳು ಹಣಕಾಸು ವಂಚನೆಗೊಳಗಾಗಿದ್ದರು. ರಾಜ್ ಕುಮಾರ್ ರಾವ್  ಪ್ಯಾನ್ ಕಾರ್ಡ್ (PAN Card) ದುರ್ಬಳಕೆ ಮಾಡಿಕೊಂಡು ಅವರ ಹೆಸರಿನಲ್ಲಿ ಸಾಲ ತೆಗೆಯಲಾಗಿತ್ತು. ಈ ಬಗ್ಗೆ ಟ್ವೀಟ್ (Tweet) ಮೂಲಕ ರಾಜ್ ಕುಮಾರ್ ರಾವ್ ಮಾಹಿತಿ ಹಂಚಿಕೊಂಡಿದ್ದರು.

ಭಾರತೀಯ ರಿಸರ್ವ್ ಬ್ಯಾಂಕಿನ (RBI) 2021-22ನೇ ಸಾಲಿನ ವಾರ್ಷಿಕ ವರದಿ (Annual Report) ಪ್ರಕಾರ 2021-22ನೇ ಹಣಕಾಸು ಸಾಲಿನಲ್ಲಿ ಬ್ಯಾಂಕ್ ವಂಚನೆ (Bank Fraud) ಪ್ರಕರಣಗಳ ಸಂಖ್ಯೆ ಅದರ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ. ಇನ್ನು ಖಾಸಗಿ ವಲಯದ ಬ್ಯಾಂಕುಗಳಲ್ಲೇ ಅತ್ಯಧಿಕ ಸಂಖ್ಯೆಯ ವಂಚನೆಗಳು ವರದಿಯಾಗಿವೆ. ಖಾಸಗಿ ವಲಯದ ಬ್ಯಾಂಕುಗಳು ವರದಿ ಮಾಡಿರುವ ವಂಚನೆ ಪ್ರಕರಣಗಳು ಮುಖ್ಯವಾಗಿ ಸಣ್ಣ ವ್ಯಾಲ್ಯೂ ಕಾರ್ಡ್ (Small Value Card) ಅಥವಾ ಇಂಟರ್ನೆಟ್ ವಂಚನೆಗೆ (Internet Fraud) ಸಂಬಂಧಿಸಿದ್ದಾಗಿವೆ.

RBI Annual Report : 2021-22ನೇ ಹಣಕಾಸು ಸಾಲಿನಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಏರಿಕೆ; ಖಾಸಗಿ ಬ್ಯಾಂಕುಗಳಲ್ಲೇ ಹೆಚ್ಚು

ನಕಲಿ ಎಸ್ ಎಂಎಸ್ ಹಾಗೂ ಇ-ಮೇಲ್ ಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರಂತರವಾಗಿ ಎಚ್ಚರಕೆ ನೀಡುತ್ತಲೇ ಬಂದಿದೆ. 'ಒಂದು ವೇಳೆ ಯಾರಾದ್ರೂ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ವಂಚನೆಯಿಂದ ವಿತ್ ಡ್ರಾ ಮಾಡಿದ್ರೆ, ತಕ್ಷಣ ನಿಮ್ಮ ಬ್ಯಾಂಕಿಗೆ ಮಾಹಿತಿ ನೀಡಿ' ಎಂದು ಆರ್ ಬಿಐ (RBI) ಸಲಹೆ ನೀಡಿದೆ. ವಂಚಕರು ಹೇಗೆ ತಮ್ಮ ವ್ಯವಹಾರ ನಡೆಸುತ್ತಾರೆ ಹಾಗೂ ಗ್ರಾಹಕರು ವಂಚನೆ ತಡೆಗೆ ಏನು ಮಾಡಬೇಕು ಎಂಬ ಬಗ್ಗೆ ಆರ್ ಬಿಐ (RBI) ಮಾರ್ಚ್ ನಲ್ಲಿ ಕೂಡ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಬಿಡುಗಡೆ ಮಾಡಿತ್ತು. 

ಭಾರತೀಯ ಸ್ಟೇಟ್ ಬ್ಯಾಂಕ್ ಗೆ (SBI) ಸಂಬಂಧಿಸಿ ಖಾತೆಗಳನ್ನು ಬ್ಲಾಕ್ (Block) ಮಾಡಲಾಗಿದೆ ಎಂಬ ನಕಲಿ (Fake) ಎಸ್ ಎಂಎಸ್ (SMS) ಹರಿದಾಡುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರದ ಮಾಧ್ಯಮ ವಿಭಾಗ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಇತ್ತೀಚೆಗೆ ಗ್ರಾಹಕರಿಗೆ ಸೂಚಿಸಿತ್ತು. 

click me!