Locker Management Revised Instructions: ನಾಳೆಯಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ

By Suvarna News  |  First Published Dec 31, 2021, 5:43 PM IST

*ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ  ಆಗಸ್ಟ್ ನಲ್ಲಿ ಪರಿಷ್ಕೃತ ನಿರ್ದೇಶನ ಹೊರಡಿಸಿದ ಆರ್ ಬಿಐ
*ಬ್ಯಾಂಕುಗಳಲ್ಲಿನ ಹೊಸ ಹಾಗೂ ಈಗಾಗಲೇ ಇರೋ ಸೇಫ್ ಡೆಪಾಸಿಟ್ ಲಾಕರ್ ಗಳಿಗೆ ನಿಯಮ ಅನ್ವಯ
*ವಸ್ತುಗಳ ಸೇಫ್ ಕಸ್ಟಡಿಗೂ ಹೊಸ ನಿಯಮ ಅನ್ವಯ


ಮುಂಬೈ (ಡಿ.31): ಸುಪ್ರೀಂ ಕೋರ್ಟ್(Supreme Court) ಆದೇಶದ ಹಿನ್ನೆಲೆಯಲ್ಲಿ ಲಾಕರ್ ನಿರ್ವಹಣೆಗೆ(locker management) ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲ ಬ್ಯಾಂಕುಗಳಿಗೆ ಆಗಸ್ಟ್ ನಲ್ಲಿ ಪರಿಷ್ಕೃತ ನಿರ್ದೇಶನಗಳನ್ನು ನೀಡಿತ್ತು. ಈ ಪರಿಷ್ಕೃತ ನಿರ್ದೇಶನಗಳು ನಾಳೆಯಿಂದ ( ಜನವರಿ 1)  ಜಾರಿಗೆ ಬರಲಿವೆ. ಲಾಕರ್ ಗೆ(Locker) ಸಂಬಂಧಿಸಿ ಬ್ಯಾಂಕುಗಳು ತಮ್ಮ ಮಂಡಳಿಯಿಂದ ಅನುಮೋದನೆ ಪಡೆದ ನೀತಿಗಳು/ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಆರ್ ಬಿಐ (RBI) ಬ್ಯಾಂಕುಗಳಿಗೆ ಸಲಹೆ ನೀಡಿದೆ.

'ಪರಿಷ್ಕೃತ ನಿರ್ದೇಶನಗಳು(Revised Instructions) ಜನವರಿ 1, 2022ರಿಂದಲೇ ಜಾರಿಗೆ ಬರಲಿದೆ. ಇದು ಬ್ಯಾಂಕುಗಳಲ್ಲಿನ ಹೊಸ ಹಾಗೂ ಈಗಾಗಲೇ ಇರೋ ಸೇಫ್ ಡೆಪಾಸಿಟ್ ಲಾಕರ್ ಗಳಿಗೆ (safe deposit lockers) ಹಾಗೂ ವಸ್ತುಗಳ ಸೇಫ್ ಕಸ್ಟಡಿ ( safe custody of articles) ಸೌಲಭ್ಯಗಳೆರಡಕ್ಕೂ ಅನ್ವಯಿಸಲಿದೆ' ಎಂದು ಆರ್ ಬಿಐ ತಿಳಿಸಿದೆ. ಬ್ಯಾಂಕುಗಳು(Banks) ಎಷ್ಟು ಲಾಕರ್ ಗಳು(Lockers)  ಖಾಲಿಯಿವೆ ಎನ್ನೋದನ್ನು ಶಾಖೆಗಳ ಅನ್ವಯ ಪಟ್ಟಿ ಮಾಡಬೇಕು. ಅಲ್ಲದೆ, ಲಾಕರ್ ಗಾಗಿ ಎಷ್ಟು ಗ್ರಾಹಕರು ವೇಯ್ಟಿಂಗ್ ಲಿಸ್ಟ್ ನಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಆರ್ ಬಿಐ ತಿಳಿಸಿದೆ. ಇದ್ರಿಂದ ಗ್ರಾಹಕರಿಗೆ ಯಾವ ಬ್ಯಾಂಕ್ ನಲ್ಲಿ ಲಾಕರ್ ಖಾಲಿಯಿದೆ ಎಂಬ ಮಾಹಿತಿ ಸಿಗೋ ಜೊತೆ ಎಲ್ಲಿ ಲಾಕರ್ ತೆರೆಯಬಹುದೆಂಬ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ. ಇದ್ರಿಂದ ಲಾಕರ್ ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿರಲು(Transferent) ಸಾಧ್ಯವಾಗುತ್ತದೆ.ಲಾಕರ್ ಸೌಲಭ್ಯ ಕಲ್ಪಿಸಿದ ಬಳಿಕ ಗ್ರಾಹಕರಿಗೆ ಈ ಬಗ್ಗೆ ಲಿಖಿತ ಮಾಹಿತಿ ನೀಡಬೇಕು ಹಾಗೂ ಲಾಕರ್ ಖಾಲಿಯಿಲ್ಲದ ಸಂದರ್ಭಗಳಲ್ಲಿ ಗ್ರಾಹಕರಿಗೆ ಟೋಕನ್ ನಂಬರ್ (ವೇಯ್ಟಿಂಗ್ ಲಿಸ್ಟ್ ನಂಬ್ರ) ನೀಡಬೇಕು ಎಂದು ಕೂಡ ಆರ್ ಬಿಐ ಸೂಚಿಸಿದೆ. 

Tap to resize

Latest Videos

KYC Update Deadline Extended:ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್; ಕೆವೈಸಿ ದಾಖಲೆ ಸಲ್ಲಿಕೆ ಗಡುವು ಮಾ.31ಕ್ಕೆ ವಿಸ್ತರಣೆ

ಬ್ಯಾಂಕ್ ನಿರ್ಲಕ್ಷ್ಯದಿಂದ ವಸ್ತು ಕಳೆದುಹೋದ್ರೆ ಪರಿಹಾರ
ಒಂದು ವೇಳೆ ಬ್ಯಾಂಕ್(Bank) ಸಿಬ್ಬಂದಿ ನಿರ್ಲಕ್ಷ್ಯ ಅಥವಾ ವಂಚನೆಯಿಂದ ಗ್ರಾಹಕ(Customer) ಲಾಕರ್ ನಲ್ಲಿರೋ ತನ್ನ ಬೆಲೆಬಾಳೋ ವಸ್ತುವನ್ನು ಕಳೆದುಕೊಂಡಿದ್ರೆ ಬ್ಯಾಂಕ್ (Bank) ಆತನಿಗೆ ಲಾಕರಿಗೆ  ವಾರ್ಷಿಕವಾಗಿ ಪಾವತಿಸೋ ಬಾಡಿಗೆಯ(Rent) ನೂರು ಪಟ್ಟು ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆರ್ ಬಿಐ ನಿರ್ದೇಶಿಸಿದೆ. ಲಾಕರ್ ಇರೋ ಸ್ಥಳದ ಸುರಕ್ಷತೆ ಹಾಗೂ ಭದ್ರತೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋದು ಬ್ಯಾಂಕ್ ಜವಾಬ್ದಾರಿಯಾಗಿದೆ. ಬೆಂಕಿ ಅವಘಡ, ಕಳ್ಳತನ, ದರೋಡೆ, ಕಟ್ಟಡ ಧ್ವಂಸ ಮುಂತಾದ ಕೃತ್ಯಗಳು ನಿರ್ಲಕ್ಷ್ಯ ಅಥವಾ ತನ್ನ ಸ್ವಯಂಕೃತ ತಪ್ಪಿನಿಂದ ಘಟಿಸದಂತೆ ಬ್ಯಾಂಕ್ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಬ್ಯಾಂಕ್ ಅಜಾಗರೂಕತೆಯಿಂದ ಇಂಥ ಘಟನೆಗಳು ಘಟಿಸಿದರೆ ಅಂಥ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಪರಿಹಾರ ಪಾವತಿಸಬೇಕು. ಪ್ರವಾಹ, ಭೂಕಂಪ, ಸಿಡಿಲು ಮುಂತಾದ ನೈಸರ್ಗಿಕ ವಿಕೋಪಗಳು, ಗ್ರಾಹಕನ ನಿರ್ಲಕ್ಷ್ಯದಿಂದ ಲಾಕರ್ನಲ್ಲಿರೋ ವಸ್ತು ಕಳೆದುಹೋದ್ರೆ ಅಥವಾ ಹಾನಿಯಾದ್ರೆ ಅಂಥ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಪರಿಹಾರ ಪಾವತಿಸಬೇಕಾಗಿಲ್ಲ. ಇನ್ನು ಬ್ಯಾಂಕ್(Bank) ತನ್ನ ಸ್ಟ್ರಾಂಗ್ ರೂಮ್ನಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಅಲ್ಲದೆ, ಲಾಕರ್ ಸುತ್ತಮುತ್ತ ನಡೆಯೋ ಚಟುವಟಿಕೆಗಳ ಸಿಸಿಟಿವಿ ಫೋಟೇಜ್ ಅನ್ನು 180 ದಿನಗಳ ಕಾಲ ಸಂರಕ್ಷಿಸಿಡಬೇಕು. 

undefined

HDFC Life Systematic Retirement Plan:ನಿವೃತ್ತಿ ನಂತರವೂ ಆದಾಯ ಗಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಠೇವಣಿ ಮುಂದುವರಿಕೆ
ವಾರ್ಷಿಕ ಲಾಕರ್ ಬಾಡಿಗೆಯನ್ನು(Locker rent) ವಸೂಲಿ ಮಾಡೋ ಉದ್ದೇಶದಿಂದ ಬ್ಯಾಂಕುಗಳು ಲಾಕರ್ ನೀಡೋ ಸಮಯದಲ್ಲಿ ತುಸು ಹೆಚ್ಚೇ ಠೇವಣಿ (Deposit)ಪಡೆದುಕೊಳ್ಳೋದು ಸಾಮಾನ್ಯ. ಹೊಸ ನಿಯಮಗಳಲ್ಲಿ ಈ ಬಗ್ಗೆ ಹೆಚ್ಚು ಸ್ಪಷ್ಟನೆ ನೀಡಲಾಗಿದ್ದು, ಲಾಕರ್ ಹಂಚಿಕೆ ಸಮಯದಲ್ಲಿ ಗ್ರಾಹಕರಿಂದ 3 ವರ್ಷಗಳ ಲಾಕರ್ ಬಾಡಿಗೆ ಎಷ್ಟಾಗುತ್ತದೆಯೋ ಅಷ್ಟು ಮೊತ್ತದ ಠೇವಣಿಯನ್ನು ಬ್ಯಾಂಕುಗಳು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ. 
 

click me!