ರಾಜ್ಯ ಏಕೀಕರಣಗೊಂಡು 64 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಸಂಖ್ಯೆಯನ್ನು 64ಕ್ಕೆ ಸೀಮಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದರೂ, ಪ್ರಶಸ್ತಿ ಬಯಸಿ ಅರ್ಜಿಗಳ ಮಹಾಪೂರವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹರಿದುಬರತೊಡಗಿದೆ.
ಬೆಂಗಳೂರು(ಅ.24): ರಾಜ್ಯ ಏಕೀಕರಣಗೊಂಡು 64 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಸಂಖ್ಯೆಯನ್ನು 64ಕ್ಕೆ ಸೀಮಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದರೂ, ಪ್ರಶಸ್ತಿ ಬಯಸಿ ಅರ್ಜಿಗಳ ಮಹಾಪೂರವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹರಿದುಬರತೊಡಗಿದೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 1350 ದಾಟಿದೆ. ರಾಜ್ಯೋತ್ಸವಕ್ಕೆ ಒಂದು ವಾರ ಬಾಕಿ ಇದ್ದರೂ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತರ ಪ್ರಶಸ್ತಿಗಳಂತೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ. ಎಲೆಮರೆ ಕಾಯಿಯಂತೆ ಕಲೆ, ಸಮಾಜ ಸೇವೆ ಹೀಗೆ ವಿವಿಧ ರಂಗದಲ್ಲಿ ನಿರಂತರ ಸೇವೆ ಮಾಡುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಹೀಗಿದ್ದರೂ ಇಲಾಖೆಗೆ ಪ್ರತಿದಿನ ನೂರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ.
undefined
ಆಯ್ಕೆ ಪ್ರಕ್ರಿಯೆ ಆರಂಭ:
ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರ ಅಧ್ಯಕ್ಷತೆಯಲ್ಲಿ ಪದ್ಮಶ್ರೀ ಪುರಸ್ಕೃತ ಕವಿ ದೊಡ್ಡರಂಗೇಗೌಡ, ಹಿರಿಯ ನಟಿ ತಾರಾ ಅನುರಾಧ, ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೇ ಬಾಳೇಕುಂದ್ರಿಯವರ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಈಗಾಗಲೇ ವಿವಿಧ ಅಕಾಡೆಮಿಗಳ ಅಧ್ಯಕ್ಷರನ್ನೊಳಗೊಂಡಂತೆ ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ.
64 ಸಾಧಕರಿಗೆ ಮಾತ್ರ ಪ್ರಶಸ್ತಿ?
ಕಳೆದ ವರ್ಷ ಉಪ ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಈ ಬಾರಿ ಎಂದಿನಂತೆ ನ.1ರಂದು ನಡೆಯಲಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದ್ದು, ನ.11ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ನ.1ರಂದು ರಾಜ್ಯೋತ್ಸವ ಆಚರಣೆಯೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ಇಲಾಖೆ ತೀರ್ಮಾನಿಸಿದೆ.
ವಿದೇಶದಲ್ಲಿ ಕುಡಿದು ಸತ್ತವರ ಸತ್ಯವೂ ತಿಳಿದಿದೆಯಲ್ವೇ?: ಸಿದ್ದುಗೆ ತಿವಿದ ರವಿ!
ಸಚಿವರ ಕಚೇರಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಚೇರಿಗೆ ಅರ್ಜಿಗಳು ಬರುತ್ತಿದ್ದು, ಅವುಗಳನ್ನು ವಿಂಗಡಿಸಿ ವಿಲೇವಾರಿ ಮಾಡುವುದು ಇಲಾಖೆ ಸಿಬ್ಬಂದಿಗಳಿಗೆ ತಲೆನೋವು ತರಿಸಿದೆ. ನಿಗದಿತ ನಮೂನೆಯ ಅರ್ಜಿಗಳು ಇಲ್ಲದ ಕಾರಣದಿಂದ ಒಂದು ಪುಟದ ಅರ್ಜಿ, ಫೋಟೋ ಆಲ್ಬಂ ಮಾದರಿಯ ಅರ್ಜಿ ಸೇರಿದಂತೆ ವಿವಿಧ ರೀತಿಯಲ್ಲಿ ಸಿಂಗಾರಗೊಂಡಿರುವ ನೂರಾರು ಪುಟಗಳ ಅರ್ಜಿಗಳು ಬರುತ್ತಿದ್ದು, ಇಲಾಖೆ ಕಚೇರಿಗಳು ಅರ್ಜಿಗಳಿಂದ ತುಂಬಿ ಹೋಗುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಆಯ್ಕೆ ಪ್ರಕ್ರಿಯೆ ಆರಂಭ:
ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರ ಅಧ್ಯಕ್ಷತೆಯಲ್ಲಿ ಪದ್ಮಶ್ರೀ ಪುರಸ್ಕೃತ ಕವಿ ದೊಡ್ಡರಂಗೇಗೌಡ, ಹಿರಿಯ ನಟಿ ತಾರಾ ಅನುರಾಧ, ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೇ ಬಾಳೇಕುಂದ್ರಿಯವರ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಈಗಾಗಲೇ ವಿವಿಧ ಅಕಾಡೆಮಿಗಳ ಅಧ್ಯಕ್ಷರನ್ನೊಳಗೊಂಡಂತೆ ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಸಭೆಯಲ್ಲಿ 60 ವರ್ಷ ಮೇಲ್ಪಟ್ಟಸಾಧಕರು, 70 ವರ್ಷ, 80 ವರ್ಷ ಹೀಗೆ ವಯಸ್ಸು ಮತ್ತು ಸಾಧನೆಯ ಆಧಾರದಲ್ಲಿ ಪಟ್ಟಿತಯಾರು ಮಾಡಲಾಗುತ್ತಿದೆ. ಎಲೆಮರೆ ಕಾಯಿಯಂತೆ ಸಾಧನೆ ಮಾಡಿದ ಸಾಧಕರಿಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಅರ್ಹರ ಪಟ್ಟಿತಯಾರಾಗುತ್ತಿದೆ ಎನ್ನಲಾಗಿದೆ.
ಸಲಹಾ ಸಮಿತಿ ಅಂತಿಮಗೊಳಿಸಿದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಕ್ಟೋಬರ್ ಅಂತ್ಯದೊಳಗೆ ಮುಖ್ಯಮಂತ್ರಿಯವರಿಗೆ ಸಲ್ಲಿಸಿ, ಅನುಮೋದನೆ ಪಡೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧತೆ ನಡೆಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಪ್ರಶಸ್ತಿ ವಿಭಾಗ
ಸಾಹಿತ್ಯ, ರಂಗಭೂಮಿ, ಸಂಗೀತ, ನೃತ್ಯ, ಜಾನಪದ, ಶಿಲ್ಪಕಲೆ, ಚಿತ್ರಕಲೆ, ಕ್ರೀಡೆ, ಯಕ್ಷಗಾನ, ಬಯಲಾಟ, ಚಲನಚಿತ್ರ, ಶಿಕ್ಷಣ, ಎಂಜಿನಿಯರಿಂಗ್, ಸಂಕೀರ್ಣ, ಪತ್ರಿಕೋದ್ಯಮ, ಸಹಕಾರ, ಸಮಾಜಸೇವೆ, ಕೃಷಿ, ಪರಿಸರ, ಸಂಘಸಂಸ್ಥೆ, ವೈದ್ಯಕೀಯ, ನ್ಯಾಯಾಂಗ, ಹೊರನಾಡು, ಸ್ವಾತಂತ್ರ್ಯ ಹೋರಾಟಗಾರರು ಹೀಗೆ ಹಲವು ವಿಭಾಗಗಳಲ್ಲಿ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಸಲಹಾ ಸಮಿತಿ ಸಲಹೆ ಮೇರೆಗೆ ರಾಜ್ಯ ಸರ್ಕಾರ ಆಯ್ಕೆ ಮಾಡುತ್ತದೆ.
ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದರೂ ಪ್ರಶಸ್ತಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವುದು ಕಡಿಮೆಯಾಗಿಲ್ಲ. ದಿನಕ್ಕೆ ಕನಿಷ್ಠ 20ರಿಂದ 25ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಈಗಾಗಲೇ 1350ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇನ್ನೂ ಬರುತ್ತಲೇ ಇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ. ಬಿ. ಸಿದ್ದಯ್ಯ ಇನ್ನಿಲ್ಲ