ನ್ಯಾಯ ಸಮ್ಮತ, ಪ್ರಾಯೋಗಿಕ ತೀರ್ಪು: ಆಚಾರ್ಯ

By Kannadaprabha NewsFirst Published Nov 10, 2019, 11:37 AM IST
Highlights

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವ, ನ್ಯಾಯ ಸಮ್ಮತ ಮತ್ತು ಪ್ರಾಯೋಗಿಕವಾದ ತೀರ್ಪು ನೀಡಿದೆ ಎಂದು ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಅವರು, ಅದ್ಭುತವಾದ ತೀರ್ಪು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್‌ನ್ನು ಅಭಿನಂದನೆ ಸಲ್ಲಿಸಬೇಕಾಗುತ್ತದೆ ಎಂದು ಶ್ಲಾಘಿಸಿದ್ದಾರೆ.

ಬೆಂಗಳೂರು(ನ.10): ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವ, ನ್ಯಾಯ ಸಮ್ಮತ ಮತ್ತು ಪ್ರಾಯೋಗಿಕವಾದ ತೀರ್ಪು ನೀಡಿದೆ ಎಂದು ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಅವರು, ಅದ್ಭುತವಾದ ತೀರ್ಪು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್‌ನ್ನು ಅಭಿನಂದನೆ ಸಲ್ಲಿಸಬೇಕಾಗುತ್ತದೆ ಎಂದು ಶ್ಲಾಘಿಸಿದ್ದಾರೆ.

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾನೂನು ಮತ್ತು ಸಾಕ್ಷ್ಯಾಧಾರ ಎರಡನ್ನೂ ಪುರಸ್ಕರಿಸಿ ಈ ತೀರ್ಪು ನೀಡಿದೆ. ಅದಕ್ಕಿಂತ ಮಿಗಿಲಾಗಿ ಪ್ರಾಯೋಗಿಕ ವಿಚಾರಗಳನ್ನು ಪರಿಗಣಿಸಿ ಆದೇಶಿಸಿದೆ. ದೇಶದಲ್ಲಿ ಸುಪ್ರೀಂಕೋರ್ಟ್ ಕೇವಲ ಅಂತಿಮ ನ್ಯಾಯಾಲಯವಲ್ಲ. ಅದು ಸಂವಿಧಾನದ ಆಶಯ ಹಾಗೂ ಮೌಲ್ಯವಾದ ಸಮಾನತೆಯ ಪ್ರತೀಕ ಎಂದಿದ್ದಾರೆ.

ರಾಮ ಮಂದಿರ ಕಿಚ್ಚು ಹಚ್ಚಿಸಿದ್ದೇ ಸಿಂಘಾಲ್, ಅಡ್ವಾಣಿ

ಸಾಕ್ಷ್ಯಾಧಾರಗಳ ಮೇಲೆ ಅಯೋಧ್ಯೆ ಪ್ರಕರಣವನ್ನು ತೀರ್ಮಾನಿಸಿದ್ದರೂ ಯಾವ ಕಕ್ಷಿದಾರನ ವಾದವನ್ನೂ ಸಂಪೂರ್ಣವಾಗಿ ಒಪ್ಪಿಲ್ಲ. ಭಾರತೀಯ ಸರ್ವೇಕ್ಷಣಾ ಇಲಾಖೆಯ ವರದಿ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಈ ತೀರ್ಪು ನೀಡಿದೆ ಎಂದು ತಿಳಿಸಿದ್ದಾರೆ.

ಸಂವಿಧಾನದದ ಪರಿಚ್ಛೇದ 14ರ ಪ್ರಕಾರ ಸುಪ್ರಿಂ ಕೋರ್ಟ್ ವಿಶೇಷ ಅಧಿಕಾರವೊಂದನ್ನು ಹೊಂದಿದೆ. ಮತ್ತೊಂದೆಡೆ ಅದೇ ಸಂವಿಧಾನದ ಪರಿಚ್ಛೇದ ೧೪೨ರಡಿ ಯಾವುದೇ ವಿವಾದವನ್ನಾದರೂ ಕಾನೂನು ಪರಿಧಿ ಮೀರಿ ಪ್ರಕರಣವನ್ನು ಪರಿಗಣಿಸಿ ನಿರ್ದೇಶನ ನೀಡುವ ಅಧಿಕಾರವನ್ನೂ ಹೊಂದಿದೆ. ಈ ಅಧಿಕಾರ ಬಳಸಿ ರಾಮಜನ್ಮ ಭೂಮಿ ಎನ್ನಲಾದ ಅಯೋಧ್ಯೆ ಸ್ಥಳದ ಹಕ್ಕು ಹಿಂದು ಭಕ್ತನ ಹೆಸರಿನಲ್ಲಿರಬೇಕು. ಒಂದು ಟ್ರಸ್ಟ್ ರಚನೆ ಮಾಡಿ, ಅದರಡಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ ಎಂದು ಹೇಳಿದ್ದಾರೆ.

ಶ್ರೀರಾಮನ ಪರವಾಗಿ ವಾದಿಸಿದ್ದ ಕನ್ನಡಿಗ ವಕೀಲ ಕೆ. ಎನ್. ಭಟ್.

ಈ ಮಧ್ಯೆ, ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದರು ಎಂಬುದಕ್ಕೆ ಪೂರಕ ಸಾಕ್ಷ್ಯಗಳಿವೆ ಎಂದು ಹೇಳಿದರೂ, ಆ ಜಾಗದ ಹಕ್ಕನ್ನು ಕ್ಲೇಮು ಮಾಡಿದ ವಕ್ಫ್ ಬೋರ್ಡ್‌ಗೆ ಬೇರೆಡೆ ಐದು ಎಕರೆ ಜಮೀನು ನೀಡಲು ಆದೇಶಿಸಿದೆ. ಇದು ನ್ಯಾಯಸಮ್ಮತವಾದ ತೀರ್ಪು. ಈ ತೀರ್ಪನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಬೇರೆ ವಿಚಾರ ಎಂದು ವಿಶ್ಲೇಷಿಸಿದ್ದಾರೆ.

ಯಾವುದೇ ತೀರ್ಪಾದರೂ ಶೇ.100ರಷ್ಟು ಸರಿ ಎಂದು ಹೇಳಲು ಆಗುವುದಿಲ್ಲ. ತೀರ್ಪು ಸಂಪೂರ್ಣವಾಗಿ ತೃಪ್ತಿಕರಾಗಿದೆ ಎಂದು ಹೇಳುವ ಸನ್ನಿವೇಶ ಬಹಳ ವಿರಳ. ಈ ತೀರ್ಪನ್ನೂ ಶೇ.100ರಷ್ಟು ಒಪ್ಪಿಕೊಳ್ಳದೇ ಇರಬಹುದು. ಮುಸ್ಲಿಮರಿಗೆ ಸ್ವಲ್ಪ ಅನ್ಯಾಯವಾಗಿದೆ ಎಂದು ಹೇಳಬಹುದಾದರೂ, ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುತ್ತಿರುವಾಗ, ಅದರಲ್ಲಿ ಶೇ.10ರಷ್ಟು ನ್ಯಾಯದ ಕೊರತೆ ಇದ್ದರೂ ಒಪ್ಪಲೇಬೇಕಾಗುತ್ತದೆ. ಕಾರಣ ಅದು ದೇಶದ ಅಂತಿಮ ಕೋರ್ಟ್ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಬುಲ್ ಬುಲ್‌ ರೌದ್ರಾವತಾರ: ಓರ್ವನ ಸಾವು, ತಗ್ಗು ಪ್ರದೇಶಗಳು ಮುಳುಗಡೆ

click me!