ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರಿದಿದ್ದಾರೆ, ಹಾಸನದಲ್ಲಿ 3000ಕ್ಕೂ ಅಧಿಕ ವಿಡಿಯೋಗಳು ಹರಿದಾಡ್ತಿವೆ; ಅಲ್ಕಾ ಲಂಬಾ

By Sathish Kumar KHFirst Published Apr 29, 2024, 1:13 PM IST
Highlights

ಹಾಸನದಲ್ಲಿ 3000ಕ್ಕೂ ಅಧಿಕ ವಿಡಿಯೋಗಳು ಹರಿದಾಡುತ್ತಿವೆ. ಸಂತ್ರಸ್ತ ಮಹಿಳೆಯರ ಅಳಲು ಆಲಿಸಿದ ನಂತರ  ಸಂಸದ ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರಿದಿದ್ದಾರೆ ಎಂದೆನಿಸುತ್ತದೆ ಎಂದು ಎಐಸಿಸಿ ಮಹಿಳಾ ಅಧ್ಯಕ್ಷೆ ಅಲ್ಕಾ ಲಂಬಾ ಆರೋಪಿಸಿದ್ದಾರೆ.

ಬೆಂಗಳೂರು (ಏ.29): ದೇಶದಲ್ಲಿ ನಾನು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಾವಿರಾರು ಮಹಿಳೆಯರ ಜೊತೆಗೆ ಮಾತನಾಡಿದ್ದಾರೆ. ಎಲ್ಲರೂ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಆದರೆ, ಹಾಸನದಲ್ಲಿ 3000ಕ್ಕೂ ಅಧಿಕ ವಿಡಿಯೋಗಳು ಹರಿದಾಡುತ್ತಿವೆ. ಸಂಸದ ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರಿದಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮಹಿಳಾ ಅಧ್ಯಕ್ಷೆ ಅಲ್ಕಾ ಲಂಬಾ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದೇಶ್ಯಾದ್ಯಂತ ನಾನು ಸಾವಿರಾರು ಮಹಿಳೆಯರ ಜೊತೆ ಮಾತನಾಡಿದ್ದೇನೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಆದರೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರುದಿದ್ದಾರೆ. ಸುಮಾರು 3000 ವಿಡಿಯೋಗಳು ಹರಿದಾಡಿವೆ. ಹಾಸನದಲ್ಲಿ ವಿಡಿಯೋ ಹರಿದಾಡ್ತಿರುವ ಆರೋಪ ಬಂದಿದೆ. ಮೋದಿ ಕುಟುಂಬ ರಾಜಕೀಯ ಮತ್ತು ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾರೆ. ಆದ್ರೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದವರು ಮೋದಿ ಕುಟುಂಬದಲ್ಲಿ ಇದ್ದಾರೆ ಎಂದು ಆರೋಪ ಮಾಡಿದರು.

ಸಂಸದ ಪ್ರಜ್ವಲ್‌ನಿಂದ 16ರಿಂದ 50 ವರ್ಷದ 300ಕ್ಕೂ ಅಧಿಕ ‌ಮಹಿಳೆಯರ ಮೇಲೆ ಅತ್ಯಾಚಾರ; ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ಸಂಸದ ಬ್ರಿಜ್ ಭೂಷನ್, ಸಂದೀಪ್ ಸಿಂಗ್ ಸೇರಿದಂತೆ ದೌರ್ಜನ್ಯ ಮಾಡಿದವರಿದ್ದಾರೆ. ಬೇಟಿ ಬಚಾವ್, ಬೇಟಿ ಪಡಾವ್ ಅಂತ ಘೋಷಣೆ ಕೂಗುತ್ತಾರೆ. ಆದರೆ, ಈಗ ದೇಶಾದ್ಯಂತ ಸಂಸದ ಪ್ರಜ್ವಲ್ ರೇವಣ್ಣ ದೌರ್ಜನ್ಯದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ದೇಶ ಬಿಟ್ಟು ಸಂಸದ ಪ್ರಜ್ವಲ್ ಓಡಿ ಹೋಗಿದ್ದಾರೆ. ಓಡಿ ಹೋಗಲು ಕೇಂದ್ರ ಸರ್ಕಾರ ಸಹಾಯ ಮಾಡಿದೆ. ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡಬೇಕಿತ್ತು. ಪ್ರಜ್ವಲ್ ಮೇಲೆ ಒಂದು ತಿಂಗಳ ಹಿಂದೆ ಆರೋಪ ಇತ್ತು. ಎಲ್ಲವೂ ಗೊತ್ತಿದ್ದು ಓಡಿ ಹೋಗಲು ಬಿಜೆಪಿ ಸಹಾಯ‌ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.

ಹಾಸನದಲ್ಲಿ ಸುಮಾರು 3000 ವಿಡಿಯೋಗಳು ಹರಿದಾಡಿವೆ ಎಂದು ಕೇಳಿಬಂದಿದೆ. ಅವರ ತಾತ ದೇಶದ ಪ್ರಧಾನಿಯಾಗಿದ್ದವರು. ಅವರ ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ ಆಗಿದ್ದಾರೆ. ಇಂಥವರ ಕುಟುಂಬದಲ್ಲಿ ಈ ರೀತಿ ನಡೆದಿದೆ. ಎಸ್‌ಟಿಐ ತನಿಖೆಗೆ ಕೊಡಲಾಗಿದೆ. ಮಹಿಳಾ ಆಯೋಗ ದೂರು ದಾಖಲಿಸಿದೆ. ಇಷ್ಟಾದ್ರೂ ಮೊದಲು ಎಫ್ ಐಆರ್ ದಾಖಲಿಸಿಲ್ಲ. ದೇಶದಲ್ಲಿ ಎಲ್ಲೂ ಇದರ ಬಗ್ಗೆ ಮಾತಿಲ್ಲ. ಆರೋಪಿ ವಿದೇಶಕ್ಕೆ ಹೋಗ್ತಾನೆ ಅಂದ್ರೆ ಹೇಗೆ? ಸಂತ್ರಸ್ಥರಿಗೆ ಎಲ್ಲಿ ನ್ಯಾಯ ಸಿಗಲಿದೆ. ಪ್ರಜ್ವಲ್ ಗಂಭೀರ ಕೃತ್ಯ ಎಸಗಿದ್ದಾರೆ. ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಬೇಕು. ಅಪರಾಧಿಯನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ದೇಶದಲ್ಲಿ ಅತ್ಯಾಚಾರ, ಬಲಾತ್ಕಾರ ಹೆಚ್ಚಾಗ್ತಿದೆ. ಈ ಹಿಂದೆಯೂ ಡಬಲ್ ಎಂಜಿನ್ ಸರ್ಕಾರದಲ್ಲಿ ಯಾವ ಕ್ರಮವಾಗಿಲ್ಲ. ಬೇಟಿ ಬಚಾವ್ ನ್ಯಾಯ ಎಲ್ಲಿದೆ? ಮೋದಿ ಪರಿವಾರದಲ್ಲಿ ಇಂತವರೇ ಸೇರಿಕೊಂಡಿದ್ದಾರೆ. ಅವರನ್ನ ರಕ್ಷಣೆ ಮಾಡುವ ಕೆಲಸ ನಡೆದಿದೆ. ಇದನ್ನ ನಾವು ಯಾವುದೇ ಕಾರಣಕ್ಕೆ ಒಪ್ಪಲ್ಲ. ನಮ್ಮ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ಅಪರಾಧಿ ಬಹಳ ಪ್ರಬಲ ಕುಟುಂಬದವರಾಗಿದ್ದಾರೆ. ಮೊದಲು ಆರೋಪಿಯನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.

ಸಾವಿರಾರು ಹೆಣ್ಮಕ್ಕಳ ಮೇಲೆ ಪ್ರಜ್ವಲ್‌ ರೇವಣ್ಣ ದೌರ್ಜನ್ಯ: ರಾಜ್ಯ ಮಹಿಳಾ ಆಯೋಗ

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಇದರ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ. ಕರ್ನಾಟಕ ಪ್ರಕರಣದ ಬಗ್ಗೆ ಯಾಕೆ ಮಾತನಾಡ್ತಿಲ್ಲ. ಸ್ಮೃತಿ ಇರಾನಿ ಮೇಡಂ ಯಾಕೆ ಧ್ವನಿ ಎತ್ತುತ್ತಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಯಾಕೆ ಮಾತನಾಡ್ತಿಲ್ಲ. ಅವರು ಮೌನವಾಗಿದ್ದಾರೆ ಅಂದರೆ ಇದನ್ನ ಸಮರ್ಥನೆ ಮಾಡಿಕೊಳ್ತಿದ್ದಾರೆ ಅಂತ ಅರ್ಥ. ಮಾಜಿ ಸಿಎಂ ಕುಮಾರಸ್ವಾಮಿ ಯಾಕೆ ಮಾತನಾಡ್ತಿಲ್ಲ. ನಮ್ಮ ಮಹಿಳಾ ಘಟಕ ಇದನ್ನ ಸುಮ್ಮನೆ ಬಿಡಲ್ಲ. ದೇಶದ ಮೂಲೆ ಮೂಲೆಗೆ ಕೊಂಡೊಯ್ಯುತ್ತೇವೆ. ಚುನಾವಣೆಯಲ್ಲಿ ಬಿಜೆಪಿ ಮುಕ್ತ ಮಾಡುತ್ತೇವೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತವಾಗಲಿದೆ. ನಮ್ಮ ಮಹಿಳೆಯರು ಬಿಜೆಪಿಗೆ ಯಾರೂ ಮತವನ್ನ ಹಾಕುವುದಿಲ್ಲ ಎಂದು  ಅಲ್ಕಾ ಲಂಬಾ ಆಕ್ರೋಶ ಹೊರ ಹಾಕಿದರು.

click me!