ABS ತಂತ್ರಜ್ಞಾನದೊಂದಿದೆ ಹೊಂಡಾ X ಬ್ಲೇಡ್ ಬೈಕ್ ಬಿಡುಗಡೆ!

By Web DeskFirst Published Dec 9, 2018, 5:49 PM IST
Highlights

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಹೊಂಡಾ ನೂತನ X ಬ್ಲೇಡ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.
 

ಬೆಂಗಳೂರು(ಡಿ.9): ಜಪಾನ್ ಮೋಟರ್‌ಸೈಕಲ್ ಹೊಂಡಾ ಇದೀಗ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ABS) ತಂತ್ರಜ್ಞಾನದೊಂದಿಗೆ ನೂತನ ಬೈಕ್ ಬಿಡುಗಡೆ ಮಾಡಿದೆ. ಹೊಂಡಾ X ಬ್ಲೇಡ್ ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ನೂತನ ಬೈಕ್ ಹಲವು ವಿಶೇಷತೆ ಹೊಂದಿದೆ.

 

The new X Blade is born to transform your ride. The fully-loaded features like ABS for efficient braking goes along with the style that declares – ONE LOOK IS ENOUGH. pic.twitter.com/Mf4s0godKf

— Honda 2 Wheelers (@honda2wheelerin)

 

ನೂತನ ಹೊಂಡಾ X ಬ್ಲೇಡ್ ಬೈಕ್ ಬೆಲೆ 87,776 ರೂಪಾಯಿ(ಎಕ್ಸ್ ಶೋ ರೂಂ). ಇದು ಹಳೆ ಎಕ್ಸ್ ಬ್ಲೇಡ್ ಬೈಕ್ ಬೆಲೆಗಿಂತ 6,000 ರೂಪಾಯಿ ಹೆಚ್ಚಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಬೈಕ್‌ನಲ್ಲಿ ಎಂಜಿನ್ ಹಾಗೂ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ.

 

Honda is ready for celebration of the perfect association where Art meets Technology with Honda X-Blade.
Autographed by Akshay Kumar exclusively for all the 2.0 Fans.
Know more: https://t.co/QAf0N2dxAc pic.twitter.com/rFKEUxoZQe

— Honda 2 Wheelers (@honda2wheelerin)

 

162.7 ಸಿಸಿ ಸಿಂಗಲ್ ಸಿಲಿಂಡರ್ ಎರ್‌ಕೂಲ್‌ಡ್ ಎಂಜಿನ್, 13.93 bph ಪವರ್ ಹಾಗೂ 13.9 nm ಟಾರ್ಕ್ ಉತ್ಪಾದಿಸಲಿದೆ. 5 ಸ್ವೀಡ್ ಗೇರ್ ಬಾಕ್ಸ್ ಹೊಂದಿದೆ. 276 mm ಡಿಸ್ಕ್ ಬ್ರೇಕ್(ABS) ಹಾಗೂ 130mm ರೇರ್ ಡ್ರಮ್ ಬ್ರೇಕ್ ಹೊಂದಿದೆ.  

ಫುಲ್ ಎಲ್ಇಡಿ ರೊಬೊಟ್ ಫೇಸ್ ಹೆಡ್‌ಲ್ಯಾಂಪ್ಸ್, ಡಿಜಿಟಲ್ ಇಂಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಕ್ಲಾಕ್ ಸೇರಿದಂತೆ ಹಲವು ನೂತನ ತಂತ್ರಜ್ಞಾನಗಳನ್ನ ಅಳವಡಿಸಲಾಗಿದೆ. 5 ವಿವಿದ ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ. 

click me!