ಅತ್ಯುತ್ತಮವಾಗಿ ಬೈಕ್ ನಿರ್ವಹಣೆ ಮಾಡಿದಂತೆ ಬೈಕ್ ಹೆಚ್ಚು ಬಾಳಿಕೆ ಬರಲಿದೆ. ಬೈಕ್‌ನ ಸಣ್ಣ ಪುಟ್ಟ ವಿಚಾರಗಳನ್ನ ನಿರ್ಲಕ್ಷ್ಯಿಸಿದ್ದರೆ ಮುಂದೆ ಭಾರಿ ದಂಡ ತೆರಬೇಕಾಗಬಹುದು.
ಬೆಂಗಳೂರು(ನ.18): ಬೈಕ್ ಖರೀದಿಗಿಂತ ಬೈಕ್ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕು ಅನ್ನೋದು ಸತ್ಯ. ನೀವು ಎಷ್ಟು ಚೆನ್ನಾಗಿ ಬೈಕ್ ಮೇಂಟೈನ್ ಮಾಡುತ್ತಿರೋ ಅಷ್ಟೇ ಉತ್ತಮ. ಬೈಕ್ ಹೆಚ್ಚು ಸಮಯ ಯಾವುದೇ ಸಮಸ್ಯೆ ಬರದ ರೀತಿ ಕಾಪಾಡಲು ಇಲ್ಲಿ ಕೆಲ ಟಿಪ್ಸ್ ಪಟ್ಟಿ ಮಾಡಲಾಗಿದೆ.
1 ಪ್ರತಿ ದಿನ ಟಯರ್ ಪರೀಕ್ಷಿಸಿ
ಪ್ರತಿ ದಿನ ಟಯರ್ ಪರೀಕ್ಷಿಸೋ ಅಗತ್ಯವೇನಿದೆ ಅನ್ನೋ ಪ್ರಶ್ನೆ ಮೂಡಿರಬಹುದು. ಆದರೆ ಚಕ್ರದಲ್ಲಿರುವ ಗಾಳಿ, ಟಯರ್ ಪರಿಸ್ಥಿತಿ ಸೇರಿದಂತೆ ಎಲ್ಲವನ್ನೂ ಪ್ರತಿ ದಿನ ಚೆಕ್ ಮಾಡಿಕೊಳ್ಳುವುದು ಉತ್ತಮ. ವೀಲ್ಹ್ ಆಲೈನ್‌ಮೆಂಟ್ ಕುರಿತು ಗಮನಹರಿಸುವುದು ಸೂಕ್ತ. ಯಾವುದೇ ಸಮಸ್ಯೆ ಇದ್ದಲ್ಲಿ ತಕ್ಷಣ ಸರಿಪಡಿಸಿಕೊಳ್ಳುವುದು ಸೂಕ್ತ. ಸಮಸ್ಯೆ ಚಿಕ್ಕದೆಂದು ನಿರ್ಲಕ್ಷ್ಯ ಮಾಡಬೇಡಿ.
undefined
2 ಎಂಜಿನ್ ಆಯಿಲ್ ಪರೀಕ್ಷಿಸಿ
ಬೈಕ್ ಸಂಪೂರ್ಣ ಎಂಜಿನ್ ಯಾವುದೇ ಸಮಸ್ಯೆ ಇಲ್ಲದೇ ಕಾರ್ಯನಿರ್ವಹಿಸಲು ಎಂಜಿನ್ ಆಯಿಲ್ ಅಗತ್ಯ. ನಿರ್ದಿಷ್ಟ ಕಿಲೋಮೀಟರ್ ಬಳಿಕ ಎಂಜಿನ್ ಆಯಿಲ್ ಬದಲಾಯಿಸುವುದು ಅನಿವಾರ್ಯ. ಇಲ್ಲದಿದ್ದರೆ ಎಂಜಿನ್ ಸೀಜ್ ಆಗೋ ಸಾಧ್ಯತೆ ಹೆಚ್ಚು.
3 ಏರ್ ಫಿಲ್ಟರ್ ಕ್ಲೀನ್ ಮಾಡಿ
ಧೂಳು ಸೇರಿದಂತ ಕಲುಷಿತ ಕಣಗಳು ಬಹುಬೇಗನೆ ಏರ್‌ಫಿಲ್ಟರ್‌ನಲ್ಲಿ ಸೇರಿಕೊಳ್ಳುತ್ತೆ. ಹೀಗಾಗಿ ಏರ್‌ಫಿಲ್ಟರ್ ಕ್ಲೀನ್ ಮಾಡಿವುದು ಅಗತ್ಯ. ನಿಗದಿತ ಕಿಲೋಮೀಟರ್ ಬಳಿಕ ಏರ್‌ಫಿಲ್ಟರ್ ಬದಲಾಯಿಸುವುದು ಸೂಕ್ತ.
4 ಎಂಜಿನ್- ಕಾರ್ಬೊರೇಟರ್ ಕ್ಲೀನ್ ಮಾಡಿ
ಬೈಕ್‌ನ ಹೃದಯ ಎಂದೇ ಕರೆಯಿಸಿಕೊಳ್ಳುವ ಎಂಜಿನ್ ಕುರಿತು ಹೆಚ್ಚಿನ ಗಮನಹರಿಸಬೇಕು. ಪ್ರತಿ 1500 ಕಿ.ಮೀ ಪ್ರಯಾಣದ ಬಳಿಕ ಕಾರ್ಬೋರೇಟರ್ ಕ್ಲೀನ್ ಮಾಡಲೇಬೇಕು. ಇನ್ನು ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡಿ ಸರಿಯಾಗಿ ಸೆಟ್ ಮಾಡಿ. 750 ಕಿ.ಮೀ ಪ್ರಯಾಣದ ಬಳಿಕ ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡಬೇಕು. 2 ಸ್ಟ್ರೋಕ್ ಮೋಟರ್‌ಬೈಕ್ ಆಗಿದ್ದರೆ 1500 ಕಿ.ಮೀಗೆ ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡಿ.
5 ಚೈನ್ ಲ್ಯೂಬ್ರಿಕೇಶನ್ ಸರಿಯಾಗಿ ಬಳಸಿ
ಬೈಕ್ ಚೈನ್ ಕಾರ್ಯಕ್ಷಮತೆ ತುಂಬಾನೇ ಮುಖ್ಯ. ಬಟ್ಟೆ ಅಥವಾ ಬ್ರಶ್ ಬಳಸಿ ಚೈನ್ ಕ್ಲೀನ್ ಮಾಡಿ. ಆದರೆ ನೀರು ಬಳಸಿ ಕ್ಲೀನ್ ಮಾಡಬೇಡಿ. ಹೀಗೆ ಕ್ಲೀನ್ ಮಾಡಿದ ಚೈನ್‌ಗೆ ಉತ್ತಮ ಲ್ಯೂಬ್ರಿಕೇಶನ್ ಬಳಸಿ.
6 ಬ್ಯಾಟರಿ ಚೆಕ್ ಮಾಡಿ
ಬೈಕ್ ಸೆಲ್ಫ್ ಸ್ಟಾರ್ಟ್, ಹೆಡ್ ಲೈಟ್ ಸೇರಿದಂತೆ ಬೈಕ್ ಕಾರ್ಯನಿರ್ವಹಣೆಗೆ ಬ್ಯಾಟರಿ ಅಷ್ಟೇ ಮುಖ್ಯ. ಹೀಗಾಗಿ ಯಾವುಗೇ ಲೀಕೇಜ್ ಸೇರಿದೆಂತೆ ಬ್ಯಾಟರಿ ಕಾರ್ಯನಿರ್ವಹಣೆ ಕುರಿತು ನಿಗಾ ಇಡಿ.
7 ಬ್ರೇಕ್ ನಿರ್ವಹಣೆ ಮಾಡಿ
ಬೈಕ್ ಬ್ರೇಕ್ ಕುರಿತು ಹೆಚ್ಚಿನ ಗಮನಹರಿಸಬೇಕು. ಬ್ರೇಕ್ ಪ್ಯಾಡ್ ಹೆಚ್ಚು ಬಳಕೆಯಾಗಿದ್ದರೆ ಬದಲಿಸಬೇಕು. ಜೊತೆಗೆ ಬ್ರೇಕ್ ಲೈನ್, ಡಿಸ್ಕ್‌ಗಳ ಕುರಿತು ಗಮನಹರಿಸಿ.
8 ಕ್ಲಚ್ ಕುರಿತು ಗಮನವಿಡಿ
ಬೈಕ್ ಕ್ಲಚ್, ಕ್ಲಚ್ ವೈಯರ್ ಕ್ಲಚ್ ಪ್ಲೇಟ್ ತುಂಬಾನೇ ಮುಖ್ಯ, ಹೀಗಾಗಿ ಹೆಚ್ಚು ನಿಗದಿತ ಸಮಯದ ಬಳಿಕ ಕ್ಲಚ್ ವೈಯರ್ ಬದಲಾಯಿಸಿ.