ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್! ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ... ಆಗಿದ್ದೇನು?
ಫ್ರಾನ್ಸ್, ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಮಾಡಲಾಗಿರುವ ವಿಷಯ ಬೆಳಕಿಗೆ ಬಂದಿದೆ. ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ ನೀಡಲಾಗಿದೆ. ಆಗಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಉಗ್ರರು ಕಣ್ಣು ನೆಟ್ಟಿರುವುದು ಹೊಸ ವಿಷಯವೇನಲ್ಲ. ಗಣ್ಯರ ಹತ್ಯೆಗೆ ಸದಾ ಸಂಚುರೂಪಿಸುವ ದೊಡ್ಡ ಗುಂಪೇ ಇದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಗಣ್ಯ ನಾಯಕರ ವಿರುದ್ಧ ಈ ಪಿತೂರಿ ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ದೇಶದ ಒಳಗೆ ಇದ್ದುಕೊಂಡೇ ಇಂಥ ಸ್ಕೆಚ್ ಹಾಕುತ್ತಿರುವವರೂ ಕಡಿಮೆ ಏನಿಲ್ಲ. ಇದರ ಬೆನ್ನಲ್ಲೇ ಇದೀಗ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರ ವಿಶೇಷ ವಿಮಾನದ ಮೇಲೆ ಭಯೋತ್ಪದನಾ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶಗಳು ಬಂದಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು, ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ (ಫೆಬ್ರವರಿ 11) ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬೆದರಿಕೆ ಕರೆ ಬಂದಿದೆ. ಅವರ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ಮಾಡುವ ಸಾಧ್ಯತೆ ಇರುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರಧಾನಿ ಫ್ರಾನ್ಸ್, ಅಮೆರಿಕ ಪ್ರವಾಸಕ್ಕೆ ತೆರಳುವ ಮುನ್ನ ಈ ಬೆದರಿಕೆ ಬಂದಿತ್ತು. ಪ್ರಧಾನಿ ಮೋದಿ ವಿದೇಶಕ್ಕೆ ಅಧಿಕೃತ ಭೇಟಿಗೆ ತೆರಳುತ್ತಿರುವಾಗ ಅವರ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಬಹುದು ಎಂಬ ಎಚ್ಚರಿಕೆಯ ಕರೆ ಮುಂಬೈ ಪೊಲೀಸರಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾನೂ ಖಿನ್ನತೆಗೆ ಜಾರಿದ್ದೆ... ಮಕ್ಕಳಿಗೆ ಪರೀಕ್ಷೆಯ ಟಿಪ್ಸ್ ಕೊಟ್ಟ ದೀಪಿಕಾ ಪಡುಕೋಣೆ: ಪಿಎಂ ಮೋದಿ ಶ್ಲಾಘನೆ
ಪ್ರಧಾನಿ ಮೋದಿ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಲ್ಲಿದ್ದಾರೆ. ಫೆಬ್ರವರಿ 12 ರಿಂದ 14 ರವರೆಗೆ ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿ ನೆಲೆಸಿರುವ ಮೋದಿ ಇಂದು ಅಮೆರಿಕಕ್ಕೆ ತೆರಳಲಿದ್ದಾರೆ. ಈ ಸಮಯದಲ್ಲಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಇದಾಗಲೇ ಅಮೆರಿಕದಲ್ಲಿ ಅಕ್ರಮ ಭಾರತೀಯರನ್ನು ಗಡಿಪಾರು ಮಾಡಲಾಗುತ್ತಿದ್ದು, ಆ ಬಗ್ಗೆಯೂ ಪ್ರಧಾನಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಇಂಥದ್ದೊಂದು ಮಾಹಿತಿ ಬಂದಿರುವ ಕಾರಣ, ಆತಂಕ ಸೃಷ್ಟಿಯಾಗಿದೆ. ಮಾಹಿತಿಯ ಗಂಭೀರ ಸ್ವರೂಪವನ್ನು ಪರಿಗಣಿಸಿ, ಪೊಲೀಸರು ಇತರ ಸಂಸ್ಥೆಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದರು ಎಂದು ವರದಿಯಾಗಿದೆ.
ಇದರ ನಡುವೆಯೇ, ಫ್ರಾನ್ಸ್ನಲ್ಲಿರುವ ಸಂದರ್ಭದಲ್ಲಿ ಪ್ರಧಾನಿ, ದಕ್ಷಿಣ ಫ್ರಾನ್ಸ್‌ನ ಮಾರ್ಸಿಲ್ಲೆನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿ ಡಿ ಸಾವರ್ಕರ್ ಅವರ ಸ್ಮರಣಾರ್ಥ ಗೌರವ ಸಲ್ಲಿಸಿದರು. ಬಳಿಕ ಅವರು, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜೊತೆಗೂಡಿ ಮಾರ್ಸಿಲ್ಲೆಯ ಮಜಾರ್ಗ್ಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಹುತಾತ್ಮರಾದ ಭಾರತೀಯ ಸೈನಿಕರೂ ಗೌರವ ಸಮರ್ಪಣೆ ಅರ್ಪಿಸಿದರು. ಅವರು ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಅನ್ನು ಸಹ ಉದ್ಘಾಟಿಸಿದರು. ಇದೇ ವೇಳೆ, ಭಾರತೀಯ ರಾಯಭಾರ ಕಚೇರಿಯನ್ನೂ ಇದೇ ವೇಳೆ ಉದ್ಘಾಟಿಸಿದರು.
450 ವರ್ಷಗಳ ಹಿಂದೆಯೇ ಮೋದಿ ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್ 2025ರ ಬಗ್ಗೆ ಶಾಕಿಂಗ್ ಭವಿಷ್ಯ!