ಪತ್ನಿ ಕಿರುಕುಳ ಆರೋಪ: ಬೆಂಗಳೂರಲ್ಲಿ ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಸಾವಿಗೆ ಶರಣು!
ಪತ್ನಿ ಕಿರುಕುಳದಿಂದ ಬೇಸತ್ತು ಒಡಿಶಾದ ಖ್ಯಾತ ರ‍್ಯಾಪರ್ ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತ್ನಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ.

ಬೆಂಗಳೂರು (ಫೆ.12): ಪತ್ನಿ ಕಿರುಕುಳದಿಂದ ಬೇಸತ್ತು ಒಡಿಶಾದ ಖ್ಯಾತ ರ‍್ಯಾಪರ್ ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತ್ನಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಖ್ಯಾತ ರಾಪರ್ ಅಭಿನವ್ ಸಿಂಗ್ ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಸದ್ಯ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾನುವಾರ ರಾತ್ರಿ ಅಭಿನವ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಓಡಿಶಾದಲ್ಲಿ ಅಭಿನವ್ ಪತ್ನಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರಿಂದ ಇದೇ ಕಾರಣಕ್ಕೆ ಮನನೊಂದು ಅಭಿನವ್ ಆತಹತ್ಯೆಗೆ ಶರಣಾಗಿದ್ದಾರೆ. ಅಭಿನವ್ ಸಿಂಗ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಒಡಿಶಾಗೆ ರವಾನಿಸಲಾಗಿದ್ದು, ಮಾರತಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ದೇವರ ವಿಷಯದಲ್ಲಿ ಬಿಜೆಪಿ ರಾಜಕೀಯ: ಸಚಿವ ಶಿವರಾಜ ತಂಗಡಗಿ
ಪತ್ನಿ ನೇಣು ಬಿಗಿದು ಆತ್ಮಹತ್ಯೆ: ಪತಿ ಅನ್ಯ ಯುವತಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.ಗ್ರಾಮದ ವೈಭವ್ ಫಿಟ್ನೆಸ್ ಜಿಮ್ ಮಾಲೀಕ ಗಿರೀಶ್ ಪತ್ನಿ ಎಂ.ಜೆ.ದಿವ್ಯ (27) ಆತ್ಮಹತ್ಯೆಗೆ ಶರಣಾದ ಗೃಹಣಿ. ಕೆಸ್ತೂರು ರಸ್ತೆಯ ಬೊಮ್ಮನಾಯನಹಳ್ಳಿ ರಸ್ತೆಯಲ್ಲಿ ಪತ್ನಿಯೊಂದಿಗೆ ಜಿಮ್ ನಡೆಸುತ್ತಿದ್ದ ಗಿರೀಶ್ ಆತಗೂರು ಹೋಬಳಿಯ ಮಾಚಹಳ್ಳಿ ಗ್ರಾಮದ ದಿವ್ಯಳನ್ನು 2016ರಲ್ಲಿ ವಿವಾಹವಾಗಿದ್ದನು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ಗಿರೀಶ ಬಸವಲಿಂಗನದೊಡ್ಡಿ ಗ್ರಾಮದ ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು.
ಈ ವಿಚಾರವಾಗಿ ದಂಪತಿಯ ಎರಡು ಕುಟುಂಬಗಳ ನಡುವೆ ಕಲಹ ನಡೆದು ಕೆಸ್ತೂರು ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ನಡೆದಿತ್ತು. ಈ ವೇಳೆ ಗಿರೀಶ ಅನ್ಯ ಯುವತಿಯೊಂದಿಗೆ ಸಂಬಂಧ ಕೈ ಬಿಟ್ಟು ಪತ್ನಿ ದಿವ್ಯಳೊಂದಿಗೆ ಹೊಂದಾಣಿಕೆಯಿಂದ ಜೀವನ ನಡೆಸುವಂತೆ ತೀರ್ಮಾನವಾಗಿತ್ತು. ದಿವ್ಯ ಮತ್ತೆ ಸಂಸಾರ ನಡೆಸುತ್ತಾ ಜಿಮ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಗಿರೀಶ ಯುವತಿಯ ಪ್ರೇಮಕ್ಕೆ ಮಾರು ಹೋಗಿ ನಾಪತ್ತೆಯಾಗಿದ್ದರು. ಇದರಿಂದ ಬೇಸತ್ತ ದಿವ್ಯ ಸೋಮವಾರ ಮಧ್ಯಾಹ್ನ ಜಿಮ್‌ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.