Erika kirk Heartbreaking Tribute: ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಅವರ ಹತ್ಯೆಯಿಂದ ಆಘಾತಕ್ಕೊಳಗಾಗಿರುವ ಅವರ ಪತ್ನಿ ಎರಿಕಾ ಕಿರ್ಕ್, ಪತಿಯ ಶವಪೆಟ್ಟಿಗೆಯ ಮೇಲೆ ಬಿದ್ದು ಕಣ್ಣೀರಿಟ್ಟಿದ್ದಾರೆ. ಈ ಭಾವುಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ್ಯೂಯಾರ್ಕ್: ಅಮೆರಿಕಾ 31 ವರ್ಷದ ಬಲಪಂಥೀಯ ನಾಯಕ ಟ್ರಂಪ್ ಆಪ್ತ, ಚಾರ್ಲಿ ಕಿರ್ಕ್ ಸಾವು ಇಡೀ ಅಮೆರಿಕಾದ ರಾಷ್ಟ್ರೀಯವಾದಿಗಳನ್ನು ಬಿಕ್ಕಳಿಸುವಂತೆ ಮಾಡಿದೆ. ಅವರ ಅಚಾನಕ್ ಸಾವಿನಿಂದ ಅವರ ಪತ್ನಿಯೂ ಆಘಾತಗೊಂಡಿದ್ದು, ಪತಿಯ ಶವಪೆಟ್ಟಿಗೆಯ ಮೇಲೆ ಬಿದ್ದು ಬಿಕ್ಕಳಿಸುತ್ತಿರುವ ದೃಶ್ಯ ಎಂಥವರ ಹೃದಯವನ್ನು ಕರಗುವಂತೆ ಮಾಡಿದೆ. ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿವಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಶೂಟರ್ ಓರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದ. ರಾಷ್ಟ್ರೀಯವಾದಿ ಚಿಂತನೆಗಳನ್ನು ಹೊಂದಿದ್ದ ಚಾರ್ಲಿ ಕಿರ್ಕ್, ಡೊನಾಲ್ಡ್ ಟ್ರಂಪ್ ಅತ್ಯಾಪ್ತನಾಗಿದ್ದು, ಟ್ರಂಪ್ ಚಿಂತನೆಗಳ ಪ್ರಬಲ ಪ್ರತಿಪಾದಕನಾಗಿದ್ದ, ಚಾರ್ಲಿ ಕಿರ್ಕ್ ಅವರ ಹಠಾತ್ ಸಾವು ಸ್ವತಃ ಟ್ರಂಪ್ ಅವರಿಗೆ ವೈಯಕ್ತಿಕವಾಗಿಯೂ ಆಘಾತ ನೀಡಿದ್ದು, ದೇಶದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಹಾರಿಸುವುದರ ಜೊತೆಗೆ ದೇಶದಲ್ಲಿ ನಾಲ್ಕು ದಿನಗಳ ಶೋಕಚಾರಣೆ ಘೋಷಿಸಿದ್ದರು.
ಚಾರ್ಲಿ ಕಿರ್ಕ್‌ಗೆ ಅಂತಿಮ ನಮನ: ಶವಪೆಟ್ಟಿಗೆ ಮೇಲೆ ಬಿಕ್ಕಳಿಸಿದ ಪತ್ನಿ:
ಇದೀಗ ಅವರ ಪತ್ನಿ ಎರಿಕಾ ಕಿರ್ಕ್ ಅವರು ಚಾರ್ಲಿ ಕಿರ್ಕ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದು, ಪತಿಯ ತೆರೆದ ಶವ ಪೆಟ್ಟಿಗೆಯೇ ಮೇಲೆ ಬಿದ್ದು ಕಣ್ಣೀರಿಟ್ಟಿದ್ದಾರೆ. ಎರಿಕಾ ಕಿರ್ಕ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಭಾವುಕ ದೃಶ್ಯವನ್ನು ಪೋಸ್ಟ್ ಮಾಡಲಾಗಿದ್ದು, ತನ್ನ ಪತಿಗೆ ಅಂತಿಮ ಸಲ್ಲಿಸುತ್ತಾ ಭಾವುಕ ಬರಹವನ್ನು ಎರಿಕಾ ಬರೆದುಕೊಂಡಿದ್ದಾರೆ.ಪತಿಯ ಶವದ ಮೇಲೆ ಬಿದ್ದು ಬಿಕ್ಕಿಬಿಕ್ಕಿ ಅತ್ತ ಎರಿಕಾ ಕೊನೆಯದಾಗಿ ಚಾರ್ಲಿ ಕಿರ್ಕ್ ಕೈಗಳನ್ನು ತಮ್ಮ ಕೈಗಳಿಂದ ಹಿಡಿದುಕೊಂಡರು. ಈ ಪ್ರಪಂಚ ಕೆಟ್ಟದು, ಆದರೆ ನಮ್ಮ ರಕ್ಷಕ, ನಮ್ಮ ದೇವರು, ಅವನು ಅವನು ತುಂಬಾ ಒಳ್ಳೆಯವನು, ನನಗೆ ಹೇಳಿಕೊಳ್ಳುವುದಕ್ಕೆ ಯಾವುದೇ ಪದಗಳಿಲ್ಲ, ಈ ವಿಧವೆಯ ಅಳುವ ಶಬ್ದವು ಈ ಪ್ರಪಂಚದಾದ್ಯಂತ ಯುದ್ಧದ ಕೂಗಿನಂತೆ ಪ್ರತಿಧ್ವನಿಸುತ್ತದೆ. ಇದರಲ್ಲಿ ಯಾವುದರ ಅರ್ಥವೂ ನನಗೆ ತಿಳಿದಿಲ್ಲ. ಆದರೆ ಬೇಬಿ, ನಿನಗೆ ಅರ್ಥವಾಗಿದೆ ಎಂದು ನನಗೆ ತಿಳಿದಿದೆ ಮತ್ತು ನಮ್ಮ ಕರ್ತನಿಗೂ ಸಹ ತಿಳಿದಿದೆ. ಚಾರ್ಲಿಯ ಹೆಂಡತಿಯ ಮನಸ್ಸಿನೊಳಗೆ ಅವರು ಏನು ಹೊತ್ತಿಸಿದ್ದಾರೆಂದು ಅವರಿಗೆ ತಿಳಿದಿಲ್ಲ. ನನ್ನ ಗಂಡನ ಧ್ಯೇಯವು ಈಗ ದೊಡ್ಡದಾಗಿದೆ ಎಂದು ಅವರು ಭಾವಿಸಿದ್ದರೆ.. ನಿಮಗೆ ತಿಳಿದಿಲ್ಲ.
ನೀವು, ನೀವೆಲ್ಲರೂ ಎಂದಿಗೂ ಆಗುವುದಿಲ್ಲ. ಎಂದಿಗೂ ನನ್ನ ಗಂಡನನ್ನು ಮರೆಯುವುದಿಲ್ಲ, ನಾನು ಅದನ್ನು ಖಚಿತಪಡಿಸಿಕೊಳ್ಳುತ್ತೇನೆ.ದೇವರ ತೋಳುಗಳಲ್ಲಿ ಶಾಂತವಾಗಿರಿ ಆತ ನಿಮಗೆ ಬೆಡ್ಸಿಟ್ ಹಾಸುತ್ತಾನೆ ಹಾಗೂ ಅವನು, ನಿಮ್ಮ ಹೃದಯ ಯಾವಾಗಲೂ ಕೇಳಲು ಹಾತೊರೆಯುವ, 'ನನ್ನ ಒಳ್ಳೆಯ ಮತ್ತು ನಂಬಿಗಸ್ತ ಸೇವಕ ಚೆನ್ನಾಗಿ ಮಾಡಿದೆ ಎಂದು ಹೇಳಿ ನಿಮ್ಮನ್ನು ಸಮಾಧಾನಿಸುತ್ತಾನೆ ಎಂದು ಎರಿಕಾ ಬರೆದುಕೊಂಡಿದ್ದಾರೆ.
2021ರಲ್ಲಿ ಮದುವೆಯಾಗಿದ್ದ ಜೋಡಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ:
ಎರಿಕಾ ಹಾಗೂ ಚಾರ್ಲಿ ಕಿರ್ಕ್ ಅವರು 2021ರಲ್ಲಿ ಮದುವೆಯಾಗಿದ್ದರು. ಇವರಿಗೆ ಮೂರು ವರ್ಷದ ಒಬ್ಬ ಮಗಳು ಹಾಗೂ ಒಂದು ವರ್ಷದ ಮಗನಿದ್ದಾರೆ. ವೀಡಿಯೋದಲ್ಲಿ ಎರಿಕಾ ಚಾರ್ಲಿ ಕಿರ್ಕ್ ಬ್ಲೇಜರ್ ಹಿಡಿದುಕೊಂಡು ಆತನ ಬಲಕೈಯನ್ನು ಹಿಡಿದುಕೊಂಡು ಹಳದಿ ಒತ್ತರಿಸಿ ಬರುವ ಕಣ್ಣೀರಿನೊಂದಿಗೆ ಆತನ ಹಳದಿ ಬಣ್ಣಕ್ಕೆ ತಿರುಗಿದ ಕೈಗಳಿಗೆ ಮುತ್ತಿಕ್ಕುವುದನ್ನು ಕಾಣಬಹುದು ಆಕೆ ಅಳುತ್ತಲೇ ಐ ಲವ್ ಯೂ ಎಂದು ಹಲವು ಬಾರಿ ಹೇಳುತ್ತಿರುವ ದೃಶ್ಯ ಎಂತಹವರ ಕಣ್ಣನ್ನು ತೇವಗೊಳಿಸುತ್ತಿದೆ.
ಪತಿಯ ಕನಸುಗಳನ್ನು ಸಾಯಲು ಬಿಡುವುದಿಲ್ಲ ಎಂದ ಎರಿಕಾ
ಮತ್ತೊಂದು ವೀಡಿಯೋದಲ್ಲಿ ಚಾರ್ಲಿ ಅವರ ಶವಪೆಟ್ಟಿಗೆಯನ್ನು ಬೇರೆಡೆ ತೆಗೆದುಕೊಂಡು ಹೋಗಲು ಹೊರಗೆ ತರುವುದನ್ನು ನೋಡಬಹುದು. ಈ ವೇಳೆ ಅಮೆರಿಕಾ ಉಪಾಧ್ಯಕ್ಷ ಜೇಡಿ ವಾನ್ಸ್ ಪತ್ನಿ ಉಷಾ ವಾನ್ಸ್ ಅವರು ಕಣ್ಣೀರಿಡುತ್ತಿದ್ದ ಚಾರ್ಲಿ ಪತ್ನಿಗೆ ಹೆಗಲು ಕೊಟ್ಟು ಸಮಾಧಾನಿಸುವ ಯತ್ನ ಮಾಡಿದ್ದಾರೆ. ಪತಿಯ ಸಾವಿನ ನಂತರ ಮೊದಲ ಬಾರಿ ಶುಕ್ರವಾರ ಮಾತನಾಡಿದ ಎರಿಕಾ ಪತಿಯ ಪರಂಪರೆ ಕನಸ್ಸುಗಳನ್ನು ಸಾಯಲು ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಚಾರ್ಲಿ ಎಲ್ಲರನ್ನು ನನ್ನನ್ನು ನ್ನ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಹೇಳಿದ್ದರು.
ನನ್ನ ಮಗಳು ಅಮದು ರಾತ್ರಿ ಅಪ್ಪ ಎಲ್ಲಿ ಎಂದು ಕೇಳಿದಳು, ಮೂರು ವರ್ಷದ ಕಂದನಿಗೆ ನಾನು ಏನು ಹೇಳಲಿ, ಬೇಬಿ ಡ್ಯಾಡಿ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಈಗ ಆತ ಜೀಸಸ್ ಜೊತೆ ಕೆಲಸದ ಪ್ರವಾಸದಲ್ಲಿದ್ದಾನೆ ಎಂದು ಹೇಳಿದ್ದಾಗಿ ಎರಿಕಾ ಭಾವುಕರಾಗಿದ್ದಾರೆ.
ಸೆಪ್ಟೆಂಬರ್ 21ರಂದು ಅರಿಜೋನಾದಲ್ಲಿ ಅಂತ್ಯಸಂಸ್ಕಾರ:
ಚಾರ್ಲಿ ಕಿರ್ಕ್ ಅಂತ್ಯಸಂಸ್ಕಾರ ಸೆಪ್ಟೆಂಬರ್ 21ರಂದು ಅರಿಜೋನಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅಮೆರಿಕಾದ ಗಣ್ಯರು ಭಾಗಿಯಾಗಲಿದ್ದಾರೆ. ಅರಿಜೋನಾದಲ್ಲಿಯೇ ಅವರು ಅವರ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದರು.
ಇದನ್ನೂ ಓದಿ: ಭದ್ರತಾ ಏಜೆನ್ಸಿಯ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ರಾ ಗುಂಡೇಟಿಗೆ ಬಲಿಯಾದ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್?
ಇದನ್ನೂ ಓದಿ: ಮುಸ್ಲಿಂ, ಏಷ್ಯಾದಿಂದ ವಲಸೆ ಖಂಡಿಸಿ ಲಂಡನ್‌ನಲ್ಲಿ ಭಾರಿ ಪ್ರತಿಭಟನೆ: ಪೊಲೀಸರ ಹಲ್ಲು ಉದುರಿಸಿದ ಪ್ರತಿಭಟನಾಕಾರರು
