ರಷ್ಯಾದಲ್ಲಿ ವಿಧ್ವಂಸ ಸೃಷ್ಟಿಸಿದೆ ಉಕ್ರೇನ್ ಡ್ರೋನ್ಗಳು! ಯುದ್ಧತಂತ್ರವನ್ನೇ ಬದಲಾಯಿಸಿವೆ ಚಿತ್ರವಿಚಿತ್ರ ಅಸ್ತ್ರಗಳು!
ರಷ್ಯಾ ಮೇಲಿನ ಡ್ರೋನ್ ದಾಳಿಯು ಯುದ್ಧತಂತ್ರವನ್ನು ಬದಲಾಯಿಸಿದೆ. ನಿನ್ನೆಯ ಡ್ರೋನ್ ದಾಳಿ, ಮೊನ್ನೆಯ ಅರ್ತ್ಕ್ವೇಕ್ ಬಾಂಬ್, ಇದೆಲ್ಲವೂ ಕೂಡ, ಸ್ಯಾಂಪಲ್ ಅಷ್ಟೆ.. ಇಂಥಾ ಅತಿ ಭಯಾನಕ ಅಸ್ತ್ರಗಳು, ಜಗತ್ತಿನ ಬಲಿಷ್ಠ ದೇಶಗಳ ಬತ್ತಳಿಕೆಯಲ್ಲಿವೆ. ಒಂದು ಕಡೆ ರಷ್ಯಾ ಉಕ್ರೇನ್ ಯುದ್ಧ.. ಮತ್ತೊಂದು ಕಡೆ ಮಧ್ಯಪ್ರಾಚ್ಯದ ಸಂಘರ್ಷ.. ಈ ಎರಡೂ ಸಂಗತಿಗಳು ಜಗತ್ತಿನ ಭೂಪಟವನ್ನೇ ಬದಲಿಸಿಬಿಡೋ ಸಾಧ್ಯತೆ ದಟ್ಟವಾಗಿ ಕಾಡ್ತಾ ಇದೆ..
ನಮಸ್ತೆ ವೀಕ್ಷಕರೇ.. ಜಗತ್ತು ಬದಲಾಗ್ತಾ ಇದೆ.. ದಿನದಿನಕ್ಕೂ ಜನ ಆಲೋಚನೆ ಮಾಡೋ ವಿಧಾನ, ಬದುಕೋಕೆ ಬೇಕಾದ ಅಗತ್ಯ ವಸ್ತುಗಳು ಪ್ರತಿಯೊಂದೂ ಬದಲಾಗ್ತಾ ಇವೆ.. ಅದೇ ಥರ, ಜಗತ್ತನ್ನ ವಿನಾಶ ಮಾಡಬಲ್ಲ ದುಷ್ಟಶಕ್ತಿ, ಯುದ್ಧತಂತ್ರ ಕೂಡ ಬದಲಾಗ್ತಾ ಇದೆ.. ಬರೀ ಬದಲಾಗ್ತಾ ಇಲ್ಲ.. ಬಲಿಷ್ಠವಾಗ್ತಾ ಇದೆ.. ಈ ಬದಲಾವಣೆ ನೋಡ್ತಾ ಇದ್ರೆ, ಜಗತ್ತಿನ ಭವಿಷ್ಯದ ಬಗ್ಗೆ ಭಯ ಹುಟ್ಟಿಕೊಳ್ಳುತ್ತೆ.. ಅದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ನಿನ್ನೆಯ ಡ್ರೋನ್ ದಾಳಿ, ಮೊನ್ನೆಯ ಅರ್ತ್ಕ್ವೇಕ್ ಬಾಂಬ್, ಇದೆಲ್ಲವೂ ಕೂಡ, ಸ್ಯಾಂಪಲ್ ಅಷ್ಟೆ.. ಇಂಥಾ ಅತಿ ಭಯಾನಕ ಅಸ್ತ್ರಗಳು, ಜಗತ್ತಿನ ಬಲಿಷ್ಠ ದೇಶಗಳ ಬತ್ತಳಿಕೆಯಲ್ಲಿವೆ. ಒಂದು ಕಡೆ ರಷ್ಯಾ ಉಕ್ರೇನ್ ಯುದ್ಧ.. ಮತ್ತೊಂದು ಕಡೆ ಮಧ್ಯಪ್ರಾಚ್ಯದ ಸಂಘರ್ಷ.. ಈ ಎರಡೂ ಸಂಗತಿಗಳು ಜಗತ್ತಿನ ಭೂಪಟವನ್ನೇ ಬದಲಿಸಿಬಿಡೋ ಸಾಧ್ಯತೆ ದಟ್ಟವಾಗಿ ಕಾಡ್ತಾ ಇದೆ.. ಅಂದ ಹಾಗೆ ಈ ಭಯ ಬರೀ ವಿಶ್ವನಾಶದ ಬಗ್ಗೆ ಮಾತ್ರವೇ ಅಲ್ಲ.. ಅವರ ಬಳಿ ಇರೋ ಅತ್ಯಾಧುನಿಕ ಅಸ್ತ್ರಗಳಿಂದಲೂ ಉಂಟಾಗ್ತಾ ಇದೆ. ಯುದ್ಧ ದಾಹ ಹೆಚ್ಚಾದಷ್ಟೂ, ತಂತ್ರಜ್ಞಾನದ ಬಳಕೆ ಹೆಚ್ಚಿದಷ್ಟೂ ಭೂಮಂಡಲಕ್ಕೇ ಅಪಾಯ ಮಿತಿಮೀರುತ್ತೆ., ಇಲ್ಲಿಂದ ಮುಂದೆ ಅದೇನು ಗ್ರಹಚಾರ ಕಾದಿದೆಯೋ ಗೊತ್ತಿಲ್ಲ..