ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿ ಮನಗೆದ್ದ ನಾಯಕ ನಾಗರಾಜ್ ಛಬ್ಬಿ

ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ರಾಜಕಾರಣಿಗಳು ಕೇವಲ ಭಾಷಣ ಮಾಡಿದರೆ ಸಾಲದು, ಜನರ ಮಧ್ಯೆ ಇದ್ದು ಜನರ ಸೇವೆಗೆ ಮುಂದಾಗ​ಬೇಕು ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಮನವಿ ಮಾಡಿ, ವಿಶೇಷವಾಗಿ ಅಚರಿಸಿದರು. 

First Published Oct 6, 2021, 3:25 PM IST | Last Updated Oct 6, 2021, 3:25 PM IST

ಬೆಂಗಳೂರು (ಅ. 06):  ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ರಾಜಕಾರಣಿಗಳು ಕೇವಲ ಭಾಷಣ ಮಾಡಿದರೆ ಸಾಲದು, ಜನರ ಮಧ್ಯೆ ಇದ್ದು ಜನರ ಸೇವೆಗೆ ಮುಂದಾಗ​ಬೇಕು ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಮನವಿ ಮಾಡಿ, ವಿಶೇಷವಾಗಿ ಅಚರಿಸಿದರು. 

ಕಲಘಟಗಿ ತಾಲೂಕಿನ ಬಾನಗಿತ್ತಿ ಗುಡಿಹಾಳದಲ್ಲಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹನ್ನೆರಡುಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಶ್ರವಣಾನಂದ ಶ್ರೀ, ನಿರ್ಗುಣನಂದ ಶ್ರೀ, ಗುರುಸಿದ್ದೇಶ್ವರ ಶ್ರೀ, ರಾಜಶೇಖರ ಶ್ರೀ, ಬಸವರಾಜ ಶ್ರೀ ಇದ್ದರು. ಕಿರಣಪಾಟೀಲ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಗುರುನಾಥ ದಾನೇನವರ, ದಾವಲ್‌ ನದಾಫ್‌, ಶಾಂತಲಿಂಗ ಬೆರುಡಗಿ ಉಪಸ್ಥಿತರಿದ್ದರು.  ಜನಪರ ಕಾಳಜಿ ಉಳ್ಳ ನಾಗರಾಜ್ ಛಬ್ಬಿಯವರು ಇದೇ ಸಂದರ್ಭದಲ್ಲಿ ಉಳುಮೆ ಮಾಡಲು ಎತ್ತುಗಳಿಲ್ಲದ ರೈತ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.