ಪ್ರವೀಣ್ ಹತ್ಯೆ ಕೇಸ್ NIA ಗೆ ಹಸ್ತಾಂತರ: ಹೇಗೆ ನಡೆಯಲಿದೆ ಗೊತ್ತಾ ತನಿಖೆ?

- ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ತನಿಖೆ ಎನ್‌ಐಎಗೆ

- ಕೇಂದ್ರೀಯ ತನಿಖೆಗೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

- ಪ್ರವೀಣ್‌ ಹತ್ಯೆ ವ್ಯವಸ್ಥಿತ ಸಂಚು, ಜತೆಗೆ ಅಂತಾರಾಜ್ಯ ವಿಚಾರ ಆದ ಹಿನ್ನೆಲೆಯಲ್ಲಿ ಈ ತೀರ್ಮಾನ: ಸಿಎಂ

 

First Published Jul 30, 2022, 1:06 PM IST | Last Updated Jul 30, 2022, 1:06 PM IST

ಬೆಂಗಳೂರು (ಜು. 30): ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್‌ಐಎ ಹಸ್ತಾಂತರಿಸಿದೆ. ಎನ್‌ಐಎ ತನಿಖೆ ಯಾವ ರೀತಿ ನಡೆಯಲಿದೆ ಎಂದು ನೋಡುವುದಾದರೆ,  ಪೊಲೀಸರ ಕೇಸ್ ಫೈಲ್  ಕೂಲಂಕುಷವಾಗಿ ಅಧ್ಯಯನ ನಡೆಸಲಾಗುತ್ತದೆ. NIA ತಂಡದಿಂದಲೇ ಪ್ರತ್ಯೇಕವಾಗಿ FIR ದಾಖಲಾಗುತ್ತದೆ.  FIR ದಾಖಲಿಸಿ ಎನ್‌ಐಎ ತನಿಖೆ ಆರಂಭಿಸಲಿದೆ. ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಎನ್ಐಎ ತಂಡ ಪರಿಶೀಲನೆ ನಡೆಸಲಿದೆ.  ಪ್ರವೀಣ್ ಕುಟುಂಬ, ಆಪ್ತರು, ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಯಲಿದೆ. 

 

Video Top Stories