ಬಿಜೆಪಿ ಕೈ ಹಿಡಿಯುತ್ತಾ ರೋಡ್‌ ಶೋ ತಂತ್ರ: ಕರ್ನಾಟಕದಲ್ಲಿ ಎಷ್ಟು ಸ್ಥಾನ ಗೆಲ್ಲಲಿದೆ ?

ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳಿಸಲು ಬಿಜೆಪಿಯಿಂದ ರೋಡ್‌ ಶೋ
ಗುಜರಾತ್‌ನಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದ ರೋಡ್‌ ಶೋಗಳು
ಕರ್ನಾಟಕದಲ್ಲೂ ಕೈ ಹಿಡಿಯುತ್ತಾ ಬಿಜೆಪಿಯ ರೋಡ್‌ ಶೋ ಮಂತ್ರ ?

First Published May 7, 2023, 6:00 PM IST | Last Updated May 7, 2023, 6:00 PM IST

ಗುಜರಾತ್‌ನಲ್ಲಿ ಬಿಜೆಪಿಗೆ ಗೆಲುವು ತಂದು ಕೊಟ್ಟ ರೋಡ್‌ ಶೋ ತಂತ್ರಗಾರಿಕೆ ಕರ್ನಾಟಕದಲ್ಲೂ ಕೈ ಹಿಡಿಯುತ್ತಾ ? ಎಂಬ ಪ್ರಶ್ನೆ ಇದೀಗ ಮೂಡಿದೆ. ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ರೋಡ್ ಶೋನನ್ನು ತನ್ನ ದಾಳವನ್ನಾಗಿ ಮಾಡಿಕೊಂಡಿದೆ. ಈ ರೋಡ್‌ ಶೋ ನಾಯಕ ಮತ್ತು ಜನರ ನಡುವೆ ಸಂಬಂಧವನ್ನು ಬೆಸೆಯಲಿದೆ ಎಂಬುದು ಬಿಜೆಪಿ ಅಭಿಲಾಷೆಯಾಗಿದೆ. ಅಲ್ಲದೇ ರೋಡ್‌ ಶೋದಿಂದ ಒಬ್ಬ ನಾಯಕ ತಾನು ಬರುವ ರಾಜ್ಯ ಹೇಗಿದೆ ಎಂದು ತಿಳಿಯಬಹುದಾಗಿದೆ. ಮತ್ತೊಂದೆಡೆ ರಾಜ್ಯದ ಜನತೆಗೆ ಮೋದಿಯವರನ್ನು ಹತ್ತಿರದಿಂದ ನೋಡಿದ್ವಿ ಎಂಬ ಖುಷಿ ಸಹ ಸಿಗಲಿದೆ. ಈ ಹಿಂದೆ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಇದ್ದಾಗ ಮೋದಿ 50 ರೋಡ್‌ ಶೋ ಮಾಡಿದ್ದರು. ಹೀಗಾಗಿ ಬೆಂಗಳೂರಿನಲ್ಲೂ ಹೆಚ್ಚು ಸ್ಥಾನವನ್ನು ಗೆಲ್ಲಲು ಬಿಜೆಪಿ ರೋಡ್ ಶೋಗಳನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ವೀಕ್ಷಿಸಿ: ಮೋದಿಯನ್ನು ನೋಡುವುದಕ್ಕಾಗಿಯೇ ಜನ ಬರುತ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

Video Top Stories