ರಾಜಣ್ಣ ಪುತ್ರನ ಹತ್ಯೆ ಯತ್ನ, ಸುಪಾರಿ ಸೂತ್ರದಾರ ಯಾರು? ಸಿಎಂಗೆ ಆಪ್ತರಾಗಿದ್ದಕ್ಕೆ ಜೀವಕ್ಕೆ ಆಪತ್ತು.. ಏನಿದರ ಸೀಕ್ರೆಟ್?
ಸಹಕಾರ ಸಚಿವ ರಾಜಣ್ಣ ಅವರ ಪುತ್ರ ರಾಜೇಂದ್ರ ಹತ್ಯೆಗೆ ಯತ್ನ ನಡೆದಿದ್ದು, ಹನಿಟ್ರ್ಯಾಪ್ ಪ್ರಕರಣದೊಂದಿಗೆ ನಂಟಿದೆಯೇ ಎಂಬ ಅನುಮಾನ ಮೂಡಿದೆ. ರಾಜಕೀಯ ದ್ವೇಷವೇ ಹತ್ಯೆಗೆ ಕಾರಣವೇ? ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕರ್ನಾಟಕ ರಾಜ್ಯದ ಸಹಕಾರ ಸಚಿವ ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ಕೊಟ್ಟದ್ದು ಆತನೇನಾ? ಆತ ಬೆಂಗಳೂರಿನ ಪ್ರಭಾವಿ. ಉನ್ನತ ರಾಜಕಾರಣಿ. ಸಿಎಂ ಜೊತೆಗೆ ಆಪ್ತರಾಗಿದ್ದ ಕಾರಣಕ್ಕೇನೆ ನಡೆಯಿತಂತೆ ಹತ್ಯಾ ಯತ್ನ. 'ಹನಿ'ದಾಳ.. 'ಹತ್ಯೆ' ಪ್ರಯತ್ನ.. ಎರಡರ ಹಿಂದಿರೋ ಸೂತ್ರದಾರ ಒಬ್ಬನೇನಾ? ರಾಜಕೀಯ ದ್ವೇಷ, ಬೆದರಿಕೆ, ಸಂಚು.. ಶಿರಾ-ಕಲಾಸಿಪಾಳ್ಯದಲ್ಲಿ ಮರ್ಡರ್ಗೆ ಸ್ಕೆಚ್. ಹತ್ಯೆ ಯತ್ನದ ಹಿಂದಿರೋ 'ಕೈ' ಆತನದ್ದೇನಾ.? ದೂರು ದಾಖಲು. ಅನುಮಾನ ಯಾರ ಮೇಲೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯಾರವನು.?
ರಾಜೇಂದ್ರ ಹತ್ಯೆ ಯತ್ನಕ್ಕೆ ದೂರು ದಾಖಲಾಯ್ತು..? ಆದ್ರೆ ಹನಿ ಕಥೆ ಏನಾಯ್ತು..? ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಅಬ್ಬರಿಸಿದ್ದ ರಾಜಣ್ಣ ದೂರು ಕೊಡೋಕೆ ಹಿಂದೇಟು ಹಾಕ್ತಾ ಇರೋದ್ಯಾಕೆ..? ಈ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. ತಮ್ಮ ಹತ್ಯೆ ಯತ್ನ ಆಗಿತ್ತು ಅಂದಿದ್ದ ರಾಜೇಂದ್ರ ಅವರು, ಆ ಬಗ್ಗೆ ದೂರನ್ನೂ ದಾಖಲಿಸಿದ್ದಾರೆ. ಆದರೆ, ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿತ್ತು ಅಂತ ಸದನದೊಳಗೆ ಸ್ಫೋಟಕ ವಿಚಾರ ಬಹಿರಂಗಪಡಿಸಿದ್ದ ರಾಜಣ್ಣ ಇನ್ನೂ ಕೂಡ ಆ ಬಗ್ಗೆ ದೂರನ್ನ ಯಾಕೆ ದಾಖಲಸಿಲ್ಲ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಹನಿಟ್ರ್ಯಾಪ್ ಹಾಗೂ ಹತ್ಯಾ ಯತ್ನ ಎರಡರ ಹಿಂದೆಯೂ ಇರೋದು ಒಬ್ಬರೇ ಅನ್ನೋ ಅನುಮಾನಕ್ಕೆ ಕಾರಣಗಳು ಏನು..? ಅಪ್ಪನ ಮೇಲೆ ಹನಿಜಾಲ.. ಮಗನ ಮೇಲೆ ಹತ್ಯೆ ಯತ್ನ.. ಈ ಎರಡರ ಹಿಂದಿರೋ ಕಾಣದ ಕೈ ಒಂದೇನಾ..? ಅಷ್ಟಕ್ಕೂ ಈ ಅನುಮಾನ ಮೂಡಿರೋದು ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಪೂರ್ಣ ಮಾಹಿತಿ.