ಹೇಗಿದೆ ಅಯೋಧ್ಯಾ ಟೆಂಟ್‌ ಸಿಟಿ? ಅಯೋಧ್ಯೆಯಿಂದ ಏಷ್ಯಾನೆಟ್‌ ಸುವರ್ಣನ್ಯೂಸ್‌ ನೇರ ವರದಿ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಅಯೋಧ್ಯೆಯಲ್ಲಿ  ಹೋಟೆಲ್, ಲಾಡ್ಜ್ ಗಳು ಭರ್ತಿಯಾಗಿದೆ. ಸಮಾರಂಭದ ಹಿನ್ನೆಲೆ ತೀರ್ಥ ಕ್ಷೇತ್ರ ಪುರಂ ಹೆಸರಿನಲ್ಲಿ ಟೆಂಟ್‌ ಸಿಟಿ ನಿರ್ಮಾಣ ಮಾಡಲಾಗಿದೆ.

Gowthami K  | Published: Jan 16, 2024, 8:45 PM IST

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಅಯೋಧ್ಯೆಯಲ್ಲಿ  ಹೋಟೆಲ್, ಲಾಡ್ಜ್ ಗಳು ಭರ್ತಿಯಾಗಿದೆ. ಸಮಾರಂಭದ ಹಿನ್ನೆಲೆ ತೀರ್ಥ ಕ್ಷೇತ್ರ ಪುರಂ ಹೆಸರಿನಲ್ಲಿ ಟೆಂಟ್‌ ಸಿಟಿ ನಿರ್ಮಾಣ ಮಾಡಲಾಗಿದೆ. ಅಯೋಧ್ಯೆಯ ಹಲವು ಪ್ರದೇಶಗಳಲ್ಲಿ  ಟೆಂಟ್‌ ಸಿಟಿ ನಿರ್ಮಾಣ ಮಾಡಲಾಗಿದೆ. ಮಜಾ ಗುಪ್ತಾರ್ ಫಾಟ್‌ನಲ್ಲಿ 30 ಎಕರೆಯಲ್ಲಿ ಟೆಂಟ್‌ ನಿರ್ಮಾಣ ಮಾಡಲಾಗಿದೆ.‘ಟೆಂಟ್ ಸಿಟಿ’ ರಾಮ ಜನ್ಮಭೂಮಿಯಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿದೆ.  ಇದು ವಿವಿಧ ಸಂರಚನೆಗಳ 300 ಐಷಾರಾಮಿ ಡೇರೆಗಳನ್ನು ಹೊಂದಿರುತ್ತದೆ. ಇಲ್ಲಿ ಹೆದ್ದಾರಿಯೂದ್ದಕ್ಕೂ ಐತಿಹಾಸಿಕ ವಿಚಾರಗಳು ಹಾಗೂ ಪುರಾಣಗಳ ಕಥೆಗಳನ್ನು ಹೇಳುವ ಚಿತ್ರಗಳನ್ನು ಕಾಣುಬಹುದು. ಜತೆಗೆ ಪ್ರಾಯೋಗಿಕ ಕೇಂದ್ರಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ.

'ಪೂಜಿಸಲೆಂದೇ ಹೂಗಳ ತಂದೆ...' ಕನ್ನಡ ಹಾಡಿಗೆ ತಲೆದೂಗಿದ ಪ್ರಧಾನಿ ಮೋದಿ

Read More...