Asianet Suvarna News Asianet Suvarna News

ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಹಿಂದೂ ದೇಗುಲ, ಫೆ.14ಕ್ಕೆ ಪ್ರಧಾನಿ ಮೋದಿ ಲೋಕಾರ್ಪಣೆ!

ಖಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಭವ್ಯ ಹಿಂದೂ ದೇಗುಲ ತಲೆ ಎತ್ತಿ ನಿಂತಿದೆ. 2017ರಲ್ಲಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ ನಾರಾಯಣಸ್ವಾಮಿ ದೇಗುಲವನ್ನು ಫೆ.14ರಂದು ಲೋಕಾರ್ಪಣೆಗೊಳಿಸಲಾಗುತ್ತಿದೆ. ಪ್ರಧಾನಿ ಮೋದಿ ಈ ಮಂದಿರ ಲೋಕಾರ್ಪಣೆಗೊಳಿಸಲಿದ್ದಾರೆ.
 

First Published Jan 24, 2024, 6:16 PM IST | Last Updated Jan 24, 2024, 6:16 PM IST

ಅಬುಧಾಬಿ(ಜ.24) ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಭವ್ಯ ನಾರಾಯಣಸ್ವಾಮಿ ದೇಗುಲ ಸಂಪೂರ್ಣಗೊಂಡಿದೆ. ದೇಗುಲ ನಿರ್ಮಾಣಕ್ಕೆ ಅಬುಧಾಬಿ ಸರ್ಕಾರ 17 ಏಕರೆ ಭೂಮಿ ನೀಡಿತ್ತು. 2017ರಲ್ಲಿ ಪ್ರಧಾನಿ ಮೋದಿ ಈ ದೇಗುಲಕ್ಕೆ ಶಂಕುಸ್ಥಾಪನೆ ಮಾಡಿದ್ದರು. 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ದೇಗುಲವನ್ನು ಫೆಬ್ರವರಿ 14ರಂದು ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಿದ್ದಾರೆ. ಈ ದೇಗುಲ ನಿರ್ಮಾಣದಲ್ಲಿ 50 ಸಾವಿರ ಕಾರ್ಮಿಕರು ಶ್ರಮ ವಹಿಸಿದ್ದಾರೆ.  ಈ ದೇಗುಲದ ವಿಶೇಷತೆ ಏನು? ಇಲ್ಲಿದೆ ವಿವರ.
 

Video Top Stories