ಮೈಸೂರು: ದತ್ತಪೀಠದ ಶ್ರೀಗಳ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ವಿಶ್ ಮಾಡಿದ ಪ್ರಧಾನಿ ಮೋದಿ

ಮೈಸೂರಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ 80ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ವಿಶ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ. 

First Published May 22, 2022, 5:46 PM IST | Last Updated May 22, 2022, 5:46 PM IST

ನವದೆಹಲಿ (ಮೇ 22): ಮೈಸೂರಿ(Mysore)ನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ(Shree Ganapati Sachchcidananda swamiji) 80ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಕನ್ನಡದಲ್ಲಿ ಶುಭಾಶಯ ಕೋರಿದ್ದಾರೆ. ಭಾನುವಾರ ವರ್ಚುವಲ್ ಲೈವ್ ಮೂಲಕ ಶುಭಾಶಯ ಕೋರಿದ ಅವರು ಎಲ್ಲರಿಗೂ ಜಯ ಗುರುದತ್ತ ಎನ್ನುತ್ತಾ ಮಾತು ಆರಂಭಿಸಿದ್ದಾರೆ. 

ಇದನ್ನೂ ನೋಡಿ: ಚಾರ್ಮಾಡಿ ಘಾಟ್ ಕಾವಲಿಗೆ ನಿಂತಿರುವ ದೇವಿಯ ಪವಾಡ: ವಾಹನ ಸವಾರರಿಗೆ ಮಹಾತಾಯಿ ಶ್ರೀರಕ್ಷೆ!

ನಂತರ, 'ಅಪ್ಪಾಜಿ ಅವರಿಗೆ 80ನೇ ವರ್ಧಂತಿಯ ಶುಭಾಶಯಗಳು ಎಂದು ಕನ್ನಡದಲ್ಲಿ ಶುಭಾಶಯ‌ ಕೋರಿದ ಮೋದಿ (Narendra Modi), ಜಪಾನಿಗೆ ಹೋಗಬೇಕಾಗಿದ್ದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಒಳ್ಳೆಯದಾಗಲಿ. ಅವರಿಗೆ 80 ವರ್ಷವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಸಹಸ್ರ ಚಂದ್ರನ ದರ್ಶನವಾಗಿದೆ. ನಾನು ಅವರ ಅನುಯಾಯಿಯಾಗಿದ್ದೇನೆ. ಹನುಮ‌ ದ್ವಾರ ಉದ್ಘಾಟನೆಯಾಗಿದೆ. ಎಲ್ಲರಿಗೂ ಸ್ವಾಮೀಜಿ ಒಳ್ಳೆಯದನ್ನು ಮಾಡುತ್ತಿದ್ದಾರೆ. ದತ್ತ ಪೀಠದಲ್ಲಿ ವೇದ ಕಲಿಯುವ ಕೇಂದ್ರವನ್ನು ತೆರೆದಿದ್ದಾರೆ. ಸ್ವಾಮೀಜಿ ಮಾರ್ಗದರ್ಶನದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ' ಎಂದು ಸ್ವಾಮೀಜಿಯವರ ಕಾರ್ಯವನ್ನು ಶ್ಲಾಘಿಸಿದ್ದಾರೆ