Viral Video: ಪ್ರೀತ್ಸೆ ಎಂದು ಬೆನ್ನುಬಿದ್ದ, ಆಗಲ್ಲ ಎಂದಿದ್ದಕ್ಕೆ ಎಲ್ಲರ ಎದುರು ಕೊಂದೇಬಿಟ್ಟ!

ಪುಣೆಯ ಯರವಾಡದಲ್ಲಿ ಯುವತಿಯೊಬ್ಬಳನ್ನು ಕಂಪನಿಯ ಪಾರ್ಕಿಂಗ್‌ನಲ್ಲಿ ಹುಡುಗನೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ. ಪ್ರೀತಿ ನಿರಾಕರಣ ಅಥವಾ ಆರ್ಥಿಕ ವಿಚಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Santosh Naik  | Published: Jan 9, 2025, 10:39 PM IST

ಪುಣೆ (ಜ.9): ಇದು ತಾಲಿಬಾನ್‌ ಉಗ್ರನನ್ನೂ ಮೀರಿಸುವ ಭಯಾನಕ ಕೃತ್ಯ. ತಾಲಿಬಾನ್‌ ಮನಸ್ಥಿತಿಯ ಹುಡುಗ ನೂರಾರು ಜನರ ಎದುರಲ್ಲಿಯೇ ಯುವತಿಯನ್ನು ಕೊಂದಿದ್ದಾನೆ.

ಪ್ರೀತಿಸೋದಕ್ಕೆ ನಿರಾಕರಿಸಿದ್ದಕ್ಕೆ ಹಾಡುಹಗಲಿನಲ್ಲಿ ನೂರಾರು ಜನ ನೋಡುತ್ತಿರುವಂತೆಯೇ ಕಂಪನಿಯ ಪಾರ್ಕಿಂಗ್‌ ಲಾಟ್‌ನಲ್ಲಿಯೇ ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

ದರೋಡೆಗೆ ಬಂದವ ಮುತ್ತು ಕೊಟ್ಟು ಪರಾರಿಯಾದ! ಕಳ್ಳನ ಬಗ್ಗೆ ನೆಟ್ಟಿಗರ ಅನುಕಂಪ: ಏನಿದು ಸ್ಟೋರಿ?

ಪುಣೆಯ ಯರವಾಡದಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗನ ಪ್ರೀತಿ ನಿವೇದನೆಯನ್ನು ಹುಡುಗಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೂ ಕೆಲವು ಕಡೆ ಆರ್ಥಿಕ ವಿಚಾರವಾಗಿ ಕೊಲೆ ನಡೆದಿದೆ ಎಂದು ವರದಿಯಾಗಿದೆ.
 

Read More...