Lakshmi Nivasa Serial: ಈಗಾಗಲೇ ಲಕ್ಷ್ಮೀ ಸೇರಿ ಹಲವು ಪಾತ್ರಗಳ ಕಲಾವಿದರು ಬದಲಾದ ಲಕ್ಷ್ಮೀ ನಿವಾಸದಲ್ಲಿ ಇದೀಗ ಮತ್ತೊಂದು ಮುಖ್ಯ ಪಾತ್ರದ ನಟನೂ ಬದಲಾಗುವ ಸೂಚನೆ ಸಿಗುತ್ತಿದೆ. ಯಾರದು? ಗೊತ್ತಾದ್ರೆ ನಿಮಗೂ ತುಂಬಾ ಬೇಜಾರಾಗುತ್ತೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಶ್ವ ಪಾತ್ರದಲ್ಲಿ ನಟ ಭವಿಷ್ ಗೌಡ ಅವರು ಅಭಿನಯಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಈ ಧಾರಾವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿದೆ. ಈಗ ಅವರು ಈ ಸೀರಿಯಲ್‌ನಿಂದ ಹೊರಬರುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.
ಧಾರಾವಾಹಿ ಬಿಡ್ತಾರಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ʼಗಂಧದ ಗುಡಿʼ ಎನ್ನುವ ಸೀರಿಯಲ್ ಪ್ರಸಾರ ಆಗ್ತಿದೆ. ಭವಿಷ್ ಗೌಡ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಶಿಶಿರ್ ಶಾಸ್ತ್ರೀ, ಸುಬ್ಬು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಭವಿಷ್ ಗೌಡ ಅವರು ಧಾರಾವಾಹಿಯನ್ನು ಬಿಡಲಿದ್ದಾರಾ?
ಭವಿಷ್ ಗೌಡಗೆ ಈ ನಿಯಮ ಅಪ್ಲೈ ಆಗತ್ತಾ?
ಒಂದೇ ಭಾಷೆಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವರು ಏಕಕಾಲಕ್ಕೆ ಎರಡು ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ. ಹೀಗಾಗಿ ಇವರು ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಅಂದಹಾಗೆ ಅಮೃತಧಾರೆ ಧಾರಾವಾಹಿಯಲ್ಲಿ ಜೀವ ಪಾತ್ರದಲ್ಲಿ ನಟಿಸುತ್ತಿರುವ ಯಶವಂತ್ ಅವರು ʼನಂದಗೋಕುಲʼ ಧಾರಾವಾಹಿಯಲ್ಲಿ ಕೇಶವನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ ಭವಿಷ್ ಗೌಡ ಕೂಡ ಇದೇ ರೀತಿ ಮಾಡ್ತಾರಾ? ಇಲ್ಲವಾ ಎಂಬ ಪ್ರಶ್ನೆ ಎದುರಾಗಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಬಿಡ್ತಾರಾ?
ಅಂದಹಾಗೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಐದು ದಂಪತಿಗಳಿವೆ. ಇವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಮೊದಲು ಒಂದು ಗಂಟೆಗಳ ಕಾಲ ಪ್ರಸಾರ ಆಗ್ತಿದ್ದ ಈ ಸೀರಿಯಲ್ ಈಗ ಅರ್ಧ ಗಂಟೆಗೆ ಬಂದು ನಿಂತಿದೆ. ಹೀಗಾಗಿ ಓರ್ವ ಕಲಾವಿದನಿಗೆ ತಿಂಗಳಲ್ಲಿ ಅಷ್ಟಾಗಿ ಡೇಟ್ ಕೂಡ ಸಿಗೋದಿಲ್ಲ. ಹೀಗಾಗಿ ಭವಿಷ್ ಗೌಡ ಅವರು ಬೇರೆ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ, ಹೀಗಾಗಿ ಹಳೆ ಧಾರಾವಾಹಿಯನ್ನು ಬಿಟ್ಟರೂ ಕೂಡ ಆಶ್ಚರ್ಯವಿಲ್ಲ ಎನ್ನಬಹುದು.
ಲಕ್ಷ್ಮೀ ನಿವಾಸ ಧಾರಾವಾಹಿಯ ತಾರಾಬಳಗದಲ್ಲಿ ಈಗಾಗಲೇ ಕೆಲ ಬದಲಾವಣೆಗಳು ಆಗಿವೆ. ತನು ಪಾತ್ರಧಾರಿ, ಲಕ್ಷ್ಮೀ ಪಾತ್ರಧಾರಿಯ ಬದಲಾವಣೆ ಕೂಡ ಆಗಿದೆ. ಅಂದಹಾಗೆ ವಿಶ್ವನ ಅಪ್ಪನ ಪಾತ್ರಧಾರಿ ಕೂಡ ಬದಲಾಗಿದ್ದಾರೆ. ಹೀಗಾಗಿ ಭವಿಷ್ ಗೌಡ ಅವರು ಈ ಸೀರಿಯಲ್ ಬಿಡ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಭವಿಷ್ ಗೌಡ ಅವರು ಕನ್ನಡದ ಜೊತೆಗೆ ತೆಲುಗು ಭಾಷೆಯ ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಸೀರಿಯಲ್ ಎಪಿಸೋಡ್ ಕೂಡ ಸಖತ್ ಕುತೂಹಲದಿಂದ ಪ್ರಸಾರ ಆಗುತ್ತಿದೆ.
