Lakshmi Nivasa Serial Today Episode: ಮಾಡಿದ್ದುಣ್ಣೋ ಮಾರಾಯ ಎನ್ನೋ ಗಾದೆ ಕೇಳಿದ್ದೀರಿ, ಅಲ್ಲವೇ? ಲಕ್ಷ್ಮೀ ನಿವಾಸ ಧಾರಾವಾಹಿ

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ( Lakshmi Nivasa Serial Today Episode Update ) ಹರೀಶ್‌ ಹಾಗೂ ಸಿಂಚನಾ ನಡುವೆ ಮನಸ್ತಾಪ ಶುರುವಾಗಿದೆ. ಅಪ್ಪ-ಅಮ್ಮನ ಹೊಟ್ಟೆ ಉರಿಸಿ ಅವನು ಸಿಂಚನಾಳನ್ನು ಮದುವೆಯಾದ. ಮದುವೆಯಾದ್ಮೇಲೂ ಅವನು ಹೆಂಡ್ತಿ ಹೇಳಿದಂತೆ ಕೇಳೋಕೆ ಶುರು ಮಾಡಿದ. ಈಗ ಕರ್ಮ ರಿಟರ್ನ್ಸ್‌ ಬಂದಿದೆ.

ಹೊರಗಡೆ ಹೋಗಿ ದುಡಿಯೋ ಸಿಂಚನಾ!

ಹೌದು, ಬ್ಯುಸಿನೆಸ್‌ ಮಾಡಿ ಅವನು ಒಂದಿಷ್ಟು ಹಣ ಕಳೆದುಕೊಂಡ. ಪ್ರತಿ ಬಾರಿ ಹೆಂಡ್ತಿ ಹೇಳಿದಂತೆ ಕೇಳಿ ಮನೆಯವರಿಗೆ ಬೇಸರ ಮೂಡಿಸಿದೆ. ಆಗರ್ಭ ಶ್ರೀಮಂತ ಮನೆಯ ಸಿಂಚನಾಗೆ ಮನೆಯವರ ಪ್ರೀತಿ ಬೆಲೆ ಗೊತ್ತಿಲ್ಲ. ಐದು ಪೈಸೆ ಮನೆಯಲ್ಲಿ ಕೆಲಸ ಮಾಡದ ಸಿಂಚನಾ, ಹೊರಗಡೆ ಹೋಗಿ ಮಾತ್ರ ದುಡಿಯುತ್ತಾಳೆ. ತಾನು ಮಾತ್ರ ಚೆನ್ನಾಗಿರಬೇಕು ಎನ್ನುವ ಅವಳೀಗ ತಾಯಿಯಾಗುತ್ತಿದ್ದಾಳೆ.

ಹರೀಶ್‌ಗೆ ಜವಾಬ್ದಾರಿ ಇಲ್ಲ!

ಹರೀಶ್‌ ಚೆನ್ನಾಗಿರಲಿ ಅಂತ ಸಿಂಚನಾ ತವರು ಮನೆಯವರು ಕೂಡ ಬಯಸಿದ್ರು. ನಮ್ಮ ಮಗಳು ಲವ್‌ ಮ್ಯಾರೇಜ್‌ ಮಾಡಿಕೊಂಡಳು, ಇಲ್ಲ ಅಂದಿದ್ರೆ ಒಳ್ಳೇ ಕಡೆ ನಾವೇ ಸಂಬಂಧ ಹುಡುಕಿ ಮದುವೆ ಮಾಡ್ತಿದ್ವಿ ಅಂತ ಅವರು ಪದೇ ಪದೇ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಹರೀಶ್‌ ದುಡಿಯುತ್ತಿಲ್ಲ, ಅವನಿಗೆ ಜವಾಬ್ದಾರಿ ಇಲ್ಲ ಅಂತಲೂ ನಿಂದಿಸುತ್ತಿರುತ್ತಾರೆ.

ಬಾಯಿಗೆ ಬಂದಹಾಗೆ ಮಾತಾಡೋ ಸಿಂಚನಾ

ಅಪ್ಪ ಕೊಡಿಸಿದ ಹೊಸ ಮನೆಯಲ್ಲಿ ಸಿಂಚನಾ ಹರೀಶ್‌ ಬದುಕುತ್ತಿದ್ದಾರೆ. ಅಪ್ಪ-ಅಮ್ಮನ ಜವಾಬ್ದಾರಿಯನ್ನು ಹಂಚಿಕೊಂಡ ಹರೀಶ್‌, ಸಂತೋಷ್‌ ನಿಜಕ್ಕೂ ಸ್ವಾರ್ಥಿಗಳು. ಈ ವಯಸ್ಸಿನಲ್ಲಿ ಅಪ್ಪ-ಅಮ್ಮನನ್ನು ಬೇರೆ ಬೇರೆ ಮಾಡಿ ತಾವು ಚೆನ್ನಾಗಿರಬೇಕು ಅಂತ ನೋಡಿದರು. ಸಿಂಚನಾ ಅಂತೂ ತನ್ನ ಅತ್ತೆಗೆ, ವೀಣಾ ತಾಯಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದಳು.

ಬೇರೆ ಮದುವೆ ಆಗು ಎಂದ ಹರೀಶ್!‌

ಈಗ ಸಿಂಚನಾ ತಾಯಿಯಾಗುತ್ತಿದ್ದಾಳೆ. ತನ್ನ ಗಂಡ ತನ್ನ ಸೇವೆ ಮಾಡಬೇಕು ಅಂತ ಬಯಸುತ್ತಿದ್ದಾಳೆ. ಆದರೆ ಹರೀಶ್‌ ಮಾತ್ರ ಬೇಕಾಬಿಟ್ಟಿ ತಿರುಗುತ್ತಿದ್ದಾನೆ. ಹೊರಗಡೆ ಹೋಗಿ ಬಂದರೆ ಸಾಕು ಅವನಿಗೆ, ಅವಳು ತಿರುಗೋದು ಬಿಟ್ಟರೆ ನಿಮಗೆ ಏನೂ ಕೆಲಸ ಇಲ್ಲ, ನನಗೆ ಸಹಾಯ ಮಾಡಬೇಕು ಅಂತ ಗೊತ್ತಾಗಲ್ವ ಎಂದು ನಿಂದಿಸಿದ್ದಾಳೆ. ಇದನ್ನು ಕೇಳಿ ಕೇಳಿ ಹರೀಶ್‌ಗೂ ಸಾಕಾಗಿದೆ. ನೀನು ಬೇಕಿದ್ರೆ ಬೇರೆ ಮದುವೆ ಆಗು ಅಂತ ಅವಳಿಗೆ ಬೈಯ್ದಿದ್ದಾನೆ. ಹಾಗಾದರೆ ಸಿಂಚನಾ- ಹರೀಶ್‌ ಬೇರೆ ಬೇರೆ ಆಗ್ತಾರಾ? ಮಾಡಿದ್ದುಣ್ಣೋ ಮಾರಾಯ ಅಂದ್ರೆ ಇದೇ ಇರಬೇಕು ಅಲ್ವಾ?

ಈ ಧಾರಾವಾಹಿ ಕತೆ ಏನು?

ಲಕ್ಷ್ಮೀ ಶ್ರೀನಿವಾಸ್‌ ಅವರಿಗೆ ಮೂರು ಗಂಡು, ಮೂರು ಹೆಣ್ಣು ಮಕ್ಕಳು. ಮಧ್ಯಮ ವರ್ಗದ ಕುಟುಂಬದ ಇವರಿಗೆ ಒಂದು ಸ್ವಂತ ಮನೆ ಮಾಡೋ ಆಸೆ. ಆದರೆ ಇವರ ಗಂಡು ಮಕ್ಕಳು ಮಾತ್ರ ಅಪ್ಪ-ಅಮ್ಮನನ್ನು ಕೂಡ ನೋಡಿಕೊಳ್ಳಲು ರೆಡಿ ಇಲ್ಲ. ಇಬ್ಬರು ಹೆಣ್ಣು ಮಕ್ಕಳು ಶ್ರೀಮಂತ ಮನೆ ಸೇರಿದ್ದಾರೆ. ಈಗ ವಯಸ್ಸಿನಲ್ಲಿ ಲಕ್ಷ್ಮೀ, ಶ್ರೀನಿವಾಸ್‌ ದುಡಿದು ತಿನ್ನುತ್ತಿದ್ದಾರೆ. ಇವರ ದತ್ತು ಮಗ ವೆಂಕಿ ಮಾತ್ರ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಿದ್ದಾನೆ. ಸಂತೋಷ್‌, ಹರೀಶ್‌ ಅವರು ಬೇರೆ ಮನೆಯಲ್ಲಿ ಬದುಕುತ್ತಿದ್ದರೂ ಕೂಡ ಸ್ವಲ್ಪವೂ ನೆಮ್ಮದಿ ಇಲ್ಲದ ಜೀವನ ಮಾಡ್ತಿದ್ದಾರೆ. ಕೂಡು ಕುಟುಂಬದಂತೆ ಬದುಕಬೇಕಿದ್ದ ಈ ಮನೆಯವರ ಮನೆ, ಮನಸ್ಸು ಎಲ್ಲವೂ ಒಡೆದು ಚೂರಾಗಿದೆ.

ಪಾತ್ರಧಾರಿಗಳು

ಹರೀಶ್‌ ಪಾತ್ರದಲ್ಲಿ ಅಜಯ್‌ ರಾಜ್‌, ಸಂತೋಷ್‌ ಪಾತ್ರದಲ್ಲಿ ಮಧು ಹೆಗಡೆ, ಸಿಂಚನಾ ಪಾತ್ರದಲ್ಲಿ ನಟಿ ರೂಪಿಕಾ ಅಭಿನಯಿಸುತ್ತಿದ್ದಾರೆ.