Lakshmi Nivasa Serial Update: ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಫ್ರೆಂಡ್ ಗೂಬೆ ವಿಶ್ವ ಎನ್ನೋದು ಜಯಂತ್‌ಗೆ ಗೊತ್ತಾಗಿದೆ. ಮುಂದೆ ಏನಾಗುವುದು?
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ( Lakshmi Nivasa Serial ) ಜಾಹ್ನವಿಯನ್ನು ಕಳೆದುಕೊಂಡಿರೋ ಜಯಂತ್‌ಗೆ ಇನ್ನೂ ಬುದ್ಧಿ ಬಂದಿಲ್ಲ. ತಾನು ಸ್ವತಂತ್ರ ಕೊಡದೆ ಕಟ್ಟಿ ಹಾಕಿದ್ದರಿಂದಲೇ ಜಾಹ್ನವಿ ಪ್ರಾಣ ಕಳೆದುಕೊಂಡಳು, ಅವಳು ಸಾಯೋಕೆ ತಾನೇ ಕಾರಣ ಅಂತ ಗೊತ್ತಿದ್ರೂ ಜಯಂತ್ ಮಾತ್ರ ಸುಮ್ಮನೆ ಇರುತ್ತಿಲ್ಲ. ಈಗ ಅವನು ಜಾನು ಫ್ರೆಂಡ್ ಗೂಬೆಯನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾನೆ.
ಜಾಹ್ನವಿ ಅವಳ ಫ್ರೆಂಡ್ ಜೊತೆ ಕ್ಲೋಸ್ ಇದ್ದರೂ ಆಗೋದಿಲ್ಲ, ಅವಳು ತಂದೆ-ತಾಯಿ ಜೊತೆ ಒಂದಿನ ಟೈಮ್ ಕಳೆದರೂ ಅವನಿಗೆ ಸಹಿಸೋಕೆ ಆಗೋದಿಲ್ಲ, ಇನ್ನು ವಿಶ್ವನಿಗೆ ಗೂಬೆ ಅಂತ ಕರೆದಿರೋದು ಈಗ ಜಯಂತ್‌ಗೆ ಗೊತ್ತಾಗಿದೆ. ಕೆಲವು ದಿನಗಳಿಂದ ಜಾಹ್ನವಿ ಯಾರನ್ನು ಗೂಬೆ ಅಂತ ಕರೆದಳು ಎನ್ನೋದರ ಹುಡುಕಾಟದಲ್ಲಿದ್ದನು, ಈಗ ಅವನಿಗೆ ಉತ್ತರ ಸಿಕ್ಕಿದೆ. ವಿಶ್ವನ ಮನೆಯಲ್ಲಿ ಜಾಹ್ನವಿ ಇರುವ ವಿಷ್ಯ ಗೊತ್ತಾದ್ರೆ ಇನ್ನೊಂದು ಮಹಾ ಯುದ್ಧ ಆಗುವುದು. ಜಾಹ್ನವಿ ಕಾಲೇಜಿನಲ್ಲಿದ್ದಾಗ ಅವಳ ಸ್ನೇಹಿತನಾಗಿದ್ದ ವಿಶ್ವನ ಜೊತೆ ಕ್ಲೋಸ್ ಆಗಿದ್ದಳು ಎನ್ನೋದು ಈಗ ಗೊತ್ತಾಗಿದೆ. ಈಗ ಅವನು ವಿಶ್ವನನ್ನು ಸುಮ್ಮನೆ ಬಿಡೋದಿಲ್ಲ.
ಜಾನುಳನ್ನು ಜಯಂತ್ ತುಂಬ ಪ್ರೀತಿ ಮಾಡ್ತಾನೆ, ಅವಳಿಲ್ಲ ಅಂತ ಬೇಸರದಲ್ಲಿದ್ದಾನೆ ಅಂತ ವಿಶ್ವ ಅಂದುಕೊಂಡಿದ್ದಾನೆ. ಆದರೆ ಜಯಂತ್ ಅತಿಯಾದ ಪ್ರೀತಿ, ಕಾಳಜಿ, ಪೊಸೆಸ್ಸಿವ್‌ನೆಸ್ ಏನು ಎನ್ನೋದು ಇನ್ನೂ ವಿಶ್ವನ ಅರಿವಿಗೆ ಬಂದಿಲ್ಲ. ಈಗ ವಿಶ್ವನನ್ನು ಕಾಪಾಡೋರು ಯಾರು? ವಿಶ್ವನನ್ನು ಕಾಪಾಡಲು ಹೋಗಿ ಜಾನು, ಜಯಂತ್‌ನ ಕಣ್ಣಿಗೆ ಬೀಳ್ತಾಳಾ? ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿದೆ.
ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
- ಇದ್ದಾಗ ಅವರ ಬೆಲೆ ಗೊತ್ತಾಗಲ್ಲ. ಅವರನ್ನು ಕಳ್ಕೊಂಡಾಗ ಗೊತ್ತಾಗುತ್ತೆ. ಇದ್ದಾಗ ಆದಷ್ಟು ಪ್ರೀತಿ ಕೊಡಿ
- ಪಾಪ, ನಮ್ ಜಯಂತ್ ಅವರನ್ನು ಈ ಥರ ನೋಡೋಕಾಗ್ತಿಲ್ಲ, ಚಿನ್ನುಮರಿ ಬೇಗ ನೀನು ನಿನ್ನ ಮುದ್ದುಮರಿ ಹತ್ರ ಬಂದ್ಬಿಡು
- ಪಾಪ ಜಯಂತ್, ಸಮಾಧಾನ ಮಾಡ್ಕೋ
- ಜಾನು ಜೊತೆ ಇದ್ದಾಗ ಜಯಂತ್ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಈಗ ಎಲ್ಲಿಲ್ಲದ ಕೋಪ, ಸರಿ ಮಾಡಿಕೋ
- ಬದಲಾವಣೆ ಜಗದ ನಿಯಮ, ಬದಲಾಗು ಜಯಂತ್
- ನೀನು ನಿನ್ನ ಚಿನ್ನು ಮರಿಯನ್ನು ಪ್ರೀತಿ ಮಾಡಲಿಲ್ಲ. ಬರೀ ಅನುಮಾನ ಪಟ್ಟಿದ್ದು, ಒಬ್ಬ ಗಂಡಸು ಒಂದು ಹೆಂಗಸಿನ ಮೇಲೆ ಅನುಮಾನ ಪಟ್ರೆ ಅವರ ಸಂಸಾರ ಉಳಿಯುವುದಿಲ್ಲ. ಅದಕ್ಕೆ ಜಾನು ಈ ರೀತಿ ಮಾಡಿದ್ಲು
- ಈ ಥರ abnormal behaviour ಇದ್ರೆ ಯಾರೂ ತಾನೇ ಜೀವನ ಮಾಡ್ತಾರೆ
ಈ ಧಾರಾವಾಹಿ ಕಥೆ ಏನು?
ಲಕ್ಷ್ಮೀ ಹಾಗೂ ಶ್ರೀನಿವಾಸ್ ಮಗಳು ಜಾಹ್ನವಿಗೆ ಜಯಂತ್ ಎನ್ನುವವನ ಜೊತೆ ಮದುವೆ ಆಗುವುದು. ಜಯಂತ್ ಅನಾಥ. ಎಲ್ಲರನ್ನು ಕಳೆದುಕೊಂಡು, ಅನಾಥಾಶ್ರಮದಲ್ಲಿ ಬದುಕಿರೋ ಅವನಿಗೆ ಜಾಹ್ನವಿಯನ್ನು ಕಳೆದುಕೊಳ್ಳುವೆ ಎನ್ನುವ ಭಯ. ಅತಿಯಾದ ಕಾಳಜಿ, ಪ್ರೀತಿ, ಪೊಸೆಸ್ಸಿವ್‌ನೆಸ್, ಅನುಮಾನದಿಂದ ಅವಳನ್ನು ನೋಡಿ ಕಟ್ಟಿಹಾಕಿದ್ದನು. ಆರಂಭದಲ್ಲಿ ತನ್ನ ಗಂಡ ಅತಿಯಾಗಿ ಪ್ರೀತಿ ಮಾಡುತ್ತಾನೆ ಎಂದು ನಂಬಿಕೊಂಡಿದ್ದ ಅವಳಿಗೆ ಆಮೇಲೆ ಇದು ಪ್ರೀತಿಯಲ್ಲ, ತನಗೋಸ್ಕರ ಯಾರನ್ನು ಬೇಕಿದ್ರೂ ಸಾಯಿಸುವ ಸ್ವಾರ್ಥ ಎನ್ನೋದು ಅರ್ಥ ಆಗಿತ್ತು. ಹೀಗಾಗಿ ಅವಳು ಶ್ರೀಲಂಕಾ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದಳು. ಆದರೆ ಅವಳು ಸಾಯದೆ ಬದುಕಿದಳು. ಈಗ ವಿಶ್ವನ ಮನೆಯಲ್ಲಿ ತನ್ನ ಮನೆಯವರಿಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬದುಕುತ್ತಿದ್ದಾಳೆ.
ಪಾತ್ರಧಾರಿಗಳು
ಜಯಂತ್- ದೀಪಕ್ ಸುಬ್ರಹ್ಮಣ್ಯ
ಜಾಹ್ನವಿ- ಚಂದನಾ ಅನಂತಕೃಷ್ಣ
ವಿಶ್ವ- ಭವಿಷ್ ಗೌಡ
