ನಟಿ ರಕ್ಷಿತಾ ಪ್ರೇಮ್, ಜೀ ಕನ್ನಡದ ಎರಡೂ ಶೋಗಳಿಂದ ಹೊರ ಬಿದ್ದಿದ್ದಾರೆ. ಕಾಮಿಡಿ ಕಿಲಾಡಿಗಳು ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಶೋನಿಂದ ಹೊರ ಬೀಳಲು ಕಾರಣ ಏನು ಎಂಬುದನ್ನೂ ಅವರು ಹೇಳಿದ್ದಾರೆ.
ಜೀ ಕನ್ನಡ (Zee Kannada )ದಲ್ಲಿ ಪ್ರಸಾರ ಆಗ್ತಿದ್ದ ಕಾಮಿಡಿ ಕಿಲಾಡಿಗಳು (Comedy Khiladigalu) ಮತ್ತೆ ಬರ್ತಿದೆ. ವೀಕೆಂಡ್ ರಿಯಾಲಿಟಿ ಶೋ ಅಂದ್ರೆ ಜಡ್ಜ್ ಆಗಿ ರಕ್ಷಿತಾ ಪ್ರೇಮ್ (Rakshita Prem) ಇದ್ದೇ ಇರ್ತಾರೆ ಎನ್ನುವ ಭಾವನೆ ವೀಕ್ಷಕರಿಗಿತ್ತು. ಈ ಬಾರಿಯೂ ರಕ್ಷಿತಾ ಪ್ರೇಮ್ ಜಡ್ಜ್ ಆಗ್ತಾರೆ ಅಂತ ವೀಕ್ಷಕರು ಭಾವಿಸಿದ್ರು. ಆದ್ರೆ ರಕ್ಷಿತಾ ವೀಕ್ಷಕರಿಗೆ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇದೇ ವಾರಾಂತ್ಯದಲ್ಲಿ ಆರಂಭ ಆಗ್ತಿರುವ ಕಾಮಿಡಿ ಕಿಲಾಡಿಗಳು ಸೀಸನ್ 5 ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ರಕ್ಷಿತಾ ಗುಡ್ ಬೈ ಹೇಳಿದ್ದಾರೆ. ರಕ್ಷಿತಾ ಪ್ರೇಮ್ ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ಎರಡೂ ಶೋ ಬಿಡ್ತಾರೆ ಎಂಬುದು ಮಾತ್ರ ಸುದ್ದಿಯಾಗಿತ್ತು. ಈಗ ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತಾನ್ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂಬುದನ್ನು ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋ ಯಾಕೆ ಬಿಟ್ರು ರಕ್ಷಿತಾ ಪ್ರೇಮ್ :
ಕಾಮಿಡಿ ಕಿಲಾಡಿಗಳು ಶೋ ಶುರುವಾದಾಗಿನಿಂದ ಜಡ್ಜ್ ಸ್ಥಾನದಲ್ಲಿ ರಕ್ಷಿತಾ ಪ್ರೇಮ್ ಕಾಣಿಸಿಕೊಳ್ತಿದ್ದರು. ಇದೊಂದೇ ಶೋ ಅಲ್ಲ ಡಾನ್ಸ್ ಕರ್ನಾಟಕ ಡಾನ್ಸ್ ಶೋನ ಫೆವರೆಟ್ ಜಡ್ಜ್ ಕೂಡ ಹೌದು. ಆದ್ರೀಗ ಅವರು ಶೋ ಬಿಡ್ತಿದ್ದಾರೆ. ಆದ್ರೆ ರಕ್ಷಿತಾ ಎಲ್ಲಿಯೂ ಶೋ ಹೆಸರು ಹಾಗೂ ಚಾನೆಲ್ ಹೆಸರನ್ನು ಹೇಳಿಲ್ಲ. ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ನನ್ನನ್ನು ಟ್ಯಾಗ್ ಮಾಡುವವರಿಗೆ ಅಂತ ಬರೆದಿರುವ ರಕ್ಷಿತಾ, ನಾನು 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆ ನಿರ್ದಿಷ್ಟ ಚಾನೆಲ್ ಗೆ ನಾನು ಇನ್ಮುಂದೆ ಭಾಗವಾಗಿರುವುದಿಲ್ಲ. ಜೀವನ ಬದಲಾಗಬೇಕಾಗಿದೆ. ನಾನು ನನ್ನ ಕಂಫರ್ಟ್ ಝೋನ್ನಿಂದ ಹೊರಬಂದು ಹೊಸದನ್ನು ಪ್ರಯತ್ನಿಸಬೇಕು. ಹೊಸದನ್ನು ಪ್ರಯತ್ನಿಸಬೇಕು. ಆದ್ದರಿಂದ ನಾನು ಡಾನ್ಸ್ ಶೋ ಭಾಗವಾಗುವುದಿಲ್ಲ. ಪ್ರೇಕ್ಷಕರು ನನಗೆ ತೋರಿಸಿದ ಪ್ರೀತಿಗೆ, ನಾನು ನಿಮಗೆ ಮತ್ತು ದೇವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ, ನನಗೆ ಅಲ್ಲಿ ತುಂಬಾ ಸುಂದರವಾದ ವರ್ಷಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ನಾನು ಹಿಂತಿರುಗಿದಾಗ ಪ್ರೀತಿ ಯಾವಾಗಲೂ ಇರುತ್ತೆ ಎಂದು ನಾನು ಭಾವಿಸುದ್ದುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ರಕ್ಷಿತಾ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ನಟಿ ದಿವ್ಯಾ ಸುರೇಶ್ ಕಾರಿನಿಂದ ಗುದ್ದಿ ಉಡಾಫೆ ಮಾತಿನ ಮೂಲಕ ಚೆಲ್ಲಾಟ; ಗಾಯಾಳು ಅನಿತಾ ಪರದಾಟ!
ರಕ್ಷಿತಾ ಪ್ರೇಮ್ ಅವರನ್ನು ಮಿಸ್ ಮಾಡಿಕೊಳ್ತೇವೆ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅಪ್ಪು ಪುನೀತ್ ರಾಜ್ ಕುಮಾರ್ ಜೊತೆ ಮೊದಲ ಸಿನಿಮಾ ಮಾಡಿದ್ದ ರಕ್ಷಿತಾ ಪ್ರೇಮ್, ಸ್ಯಾಂಡಲ್ವುಡ್ ನಲ್ಲಿ ಕ್ರೇಜಿ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಸ್ಯಾಂಡಲ್ ವುಡ್ ಗೆ ಹಿಟ್ ಸಿನಿಮಾಗಳನ್ನು ನೀಡಿರುವ ರಕ್ಷಿತಾ ಪ್ರೇಮ್, ಮದುವೆ ಆದ್ಮೇಲೆ ಸಿನಿಮಾದಿಂದ ದೂರವಿದ್ದಾರೆ. ಆದ್ರೆ ಜೀ ಕನ್ನಡ ರಿಯಾಲಿಟಿ ಶೋ ಭಾಗವಾದ ರಕ್ಷಿತಾ, ಕಿರುತೆರೆ ಮೂಲಕ ಜನರಿಗೆ ಆಪ್ತವಾಗಿದ್ದರು. ರಕ್ಷಿತಾ ಪ್ರೇಮ್ ತಮ್ಮ ಮುಂದಿನ ನಡೆ ಬಗ್ಗೆ ಹೇಳಿಲ್ಲ. ಶೋ ಬಿಟ್ಟಿರೋದನ್ನು ಅವರು ದೃಢಪಡಿಸಿದ್ದು, ಮತ್ತ್ಯಾವ ಶೋನಲ್ಲಿ ಕಾಣಿಸಿಕೊಳ್ತಾರೆ ಕಾದುನೋಡ್ಬೇಕಿದೆ.
Lakshmi Nivasa: ಜವರೇ ಗೌಡ್ರಿಗೆ ತಿರುಗೇಟು ಕೊಟ್ಟ ಭಾವನಾ... ಇದು ಆಕ್ಚುವಲಿ ಚೆನ್ನಾಗಿರೋದು ಎಂದ ಜನ
ಇನ್ನು ವೀಕೆಂಡ್ ನಲ್ಲಿ ಭರ್ಜರಿ ಮನರಂಜನೆ ನೀಡಲು ಕಾಮಿಡಿ ಕಿಲಾಡಿಗಳು ಮತ್ತೆ ಬರ್ತಿದೆ. ರಕ್ಷಿತಾ ಪ್ರೇಮ್ ಬದಲು ಈಗ ತಾರಾ, ಕಾಮಿಡಿ ಕಿಲಾಡಿಗಳು ಜಡ್ಜ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ಈ ಬಾರಿ ನಿರಂಜನ್ ದೇಶಪಾಂಡೆ ಶೋ ನಿರೂಪಣೆ ಮಾಡಲಿದ್ದಾರೆ.
