- Home
- Entertainment
- TV Talk
- Lakshmi Nivasa: ಜವರೇ ಗೌಡ್ರಿಗೆ ತಿರುಗೇಟು ಕೊಟ್ಟ ಭಾವನಾ... ಇದು ಆಕ್ಚುವಲಿ ಚೆನ್ನಾಗಿರೋದು ಎಂದ ಜನ
Lakshmi Nivasa: ಜವರೇ ಗೌಡ್ರಿಗೆ ತಿರುಗೇಟು ಕೊಟ್ಟ ಭಾವನಾ... ಇದು ಆಕ್ಚುವಲಿ ಚೆನ್ನಾಗಿರೋದು ಎಂದ ಜನ
Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇದೀಗ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ಇಲ್ಲಿವರೆಗೆ ಯಾರು ಏನೇ ಹೇಳಿದ್ರು ಕೇಳಿಕೊಂಡು ಅತ್ತುಕೊಂಡು ಇರುತ್ತಿದ್ದ ಭಾವನಾ ಇದೀಗ ಮನೆಯವರ ನಿಜ ಮುಖ ತಿಳಿದ ಮೇಲೆ ಸಂಪೂರ್ಣವಾಗಿ ಬದಲಾಗಿದ್ದು, ಜವರೇ ಗೌಡರಿಗೆ ತಿರುಗೇಟು ಕೊಟ್ಟಿದ್ದಾಳೆ.

ಲಕ್ಷ್ಮೀ ನಿವಾಸ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇದೀಗ ಪಾತ್ರಧಾರಿಗಳು ಬದಲಾಗುತ್ತಿದ್ದಂತೆ, ಪಾತ್ರದ ತೂಕ ಕೂಡ ಬದಲಾಗುತ್ತಿದೆ. ಸದ್ಯ ಪ್ರತಿಯೊಂದು ಪಾತ್ರಗಳು ಕೂಡ ಬದಲಾಗಿವೆ.
ರೇಣುಕಾ ಪಾತ್ರಧಾರಿ ಬದಲಾವಣೆ
ಈ ಹಿಂದೆ ಸಿದ್ದೇ ಗೌಡರ ತಾಯಿ ರೇಣುಕಾ ಪಾತ್ರದಲ್ಲಿ ಅಂಜಲಿ ಸುಧಾಕರ್ ಅವರು ನಟಿಸುತ್ತಿದ್ದರು. ಆದರೆ ಪಾತ್ರವನ್ನು ನೆಗೆಟಿವ್ ಶೇಡ್ ನಲ್ಲಿ ತೋರಿಸುತ್ತಿದ್ದ ಕಾರಣ ಅವರು ಸಿರಿಯಲ್ ನಿಂದ ಹೊರಬಂದಿದ್ದು, ಬೇರೆ ಪಾತ್ರಧಾರಿ ನಟಿಸುತ್ತಿದ್ದಾರೆ. ಪಾತ್ರಧಾರಿ ಬದಲಾಗುತ್ತಿದ್ದಂತೆ ಪಾತ್ರವು ಪೂರ್ತಿಯಾಗಿ ನೆಗೆಟಿವ್ ಆಗಿ ಬದಲಾಗಿದೆ.
ಸಿದ್ದೇ ಗೌಡ-ಭಾವನಾರನ್ನು ದೂರ ಮಾಡಲು ಸಂಚು
ಧಾರಾವಾಹಿಯಲ್ಲಿ ಸದ್ಯ ಅತ್ತೆ ಮತ್ತು ಹಿರಿಯ ಸೊಸೆ ನೀಲು ಸೇರಿ ಸಿದ್ದೇ ಗೌಡ ಮತ್ತು ಭಾವನಾರನ್ನು ದೂರ ಮಾಡಿ. ಭಾವನಾಳನ್ನು ಮನೆಯಿಂದ ಹೊರ ಹಾಕುವ ಪ್ಲ್ಯಾನ್ ಮಾಡಿದ್ದಾರೆ. ಇಲ್ಲಿವರೆಗೆ ಭಾವನಾ ಸಹ ಅವರು ಹೇಳಿದಂತೆ ತಲೆಯಾಡಿಸಿಕೊಂಡು, ಅಳುತ್ತಾ ಜೀವನ ನಡೆಸುತ್ತಿದ್ದಳು.
ಭಾವನಾ ಮುಂದೆ ಬಯಲಾದ ಕುತಂತ್ರ
ಇದೀಗ ಭಾವನಾ ಮುಂದೆ ರೇಣುಕಾ ಮತ್ತು ನೀಲು ನಿಜವಾದ ಉದ್ದೇಶ ಬಯಲಾಗಿದ್ದು, ಅವರಿಬ್ಬರಿಗೂ ಈಗಾಗಲೇ ಟಕ್ಕರ್ ಕೊಟ್ಟಿದ್ದಾಳೆ ಭಾವನಾ. ತಾನು ಪ್ರೆಗ್ನೆಂಟ್ ಆಗಿರುವಂತೆ ನಟಿಸಿ ಅವರಿಬ್ಬರಿಗೂ ಸರಿಯಾಗಿ ಹಳ್ಳ ತೋಡಿದ್ದಾಳೆ.
ಜವರೇ ಗೌಡರಿಗೆ ತಿರುಗೇಟು ಕೊಟ್ಟ ಸೊಸೆ
ಅತ್ತೆ ಸೊಸೆ ಸೇರಿ ಜವರೇ ಗೌಡರಿಗೆ ಭಾವನಾ ಬಗ್ಗೆ ದೂರು ಹೇಳಲು ಹೊರಟಿದ್ದರೆ, ಇಲ್ಲಿವರೆಗೆ ಜವರೇ ಗೌಡರ ಬಳಿ ಧನಿ ಎತ್ತಿ ಮಾತನಾಡದ ಭಾವನಾ, ಅವರಿಗೂ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾಳೆ.
ಜವರೇ ಗೌಡರಿಗೆ ಸವಾಲು
ನಿನ್ನನ್ನು ಹೇಗಾದ್ರು ಮಾಡಿ ಮನೆಯಿಂದ ಹೊರ ಹಾಕುತ್ತೀನಿ ಎನ್ನುವ ಜವರೇ ಗೌಡರಿಗೆ ಭಾವನಾ, ನಾನು ನನ್ನ ಗಂಡನನ್ನು ಬಿಟ್ಟು ಎಲ್ಲೂ ಹೋಗೋದಿಲ್ಲ. ಅದನ್ನು ಸವಾಲಾಗಿ ಬೇಕಾದ್ರೂ ತೆಗೆದುಕೊಳ್ಳಿ ಎಂದಿದ್ದಾಳೆ. ಅಷ್ಟೇ ಅಲ್ಲದೇ ನಿಮ್ಮ ಆಟ ನೀವು ಆಡಿ ನನ್ನ ಆಟ ನಾನು ಆಡ್ತೀನಿ ಎಂದು ಕೆನ್ನೆಗೆ ಬಾರಿಸಿದಂತೆ ನುಡಿದಿದ್ದಾಳೆ ಭಾವನಾ.
ಇದು ಆಕ್ಚುವಲಿ ಚೆನ್ನಾಗಿರೋದು ಎಂದ ಜನ
ಭಾವನಾ ಈ ರೇಂಜ್ ಗೆ ಬದಲಾದದ್ದು ನೋಡಿ, ಜನರಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಭಾವನಾ ಸ್ಟ್ರಾಂಗ್ ಆಗಿರೋದು, ಸರಿಯಾಗಿ ತಿರುಗೇಟು ಕೊಡುತ್ತಿರೋದು ನೋಡಿ, ಇದು ಆಕ್ಚುವಲಿ ಚೆನ್ನಾಗಿರೋದು ಎಂದು ಹೇಳಿದ್ದಾರೆ. ಇನ್ನು ಮುಂದೆ ಅಸಲಿ ಆಟ ಶುರು ಅಂತಾನೂ ಹೇಳಿದ್ದಾರೆ.