Lakshmi Nivasa Serial Nirmala Chennappa: ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಪಕ ಸರದಾರ್‌ ಸತ್ಯ,  ನಿರ್ಮಲಾ ಚೆನ್ನಪ್ಪ ವಿರುದ್ಧ ದೂರು ದಾಖಲಾಗಿದೆ. ಏನದು? 

ಲಕ್ಷ್ಮೀ ನಿವಾಸ ಧಾರಾವಾಹಿ ( Lakshmi Nivasa Serial ) ನಿರ್ಮಾಪಕ ಸತ್ಯ, ನಿರ್ಮಲಾ ಚೆನ್ನಪ್ಪ ವಿರುದ್ಧ ದೂರು ದಾಖಲಾಗಿದೆ. 1 ಕೋಟಿ ರೂಪಾಯಿ ಹಣ ಪಡೆದು ವಾಪಸ್ ನೀಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಸಾಯಿ ನಿರ್ಮಲಾ ಪ್ರೊಡಕ್ಷನ್ಸ್‌ ಎಂಬ ಕಂಪೆನಿ ಹೆಸರಿನಲ್ಲಿ ಇವರು ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದಾರೆ.

ಸೀರಿಯಲ್‌ ನಿರ್ಮಾಣಕ್ಕೆ ಹಣ ಪಡೆದಿದ್ರು

ಲಕ್ಷ್ಮಿ ನಿವಾಸ ಧಾರಾವಾಹಿ ನಿರ್ಮಾಣಕ್ಕೆಂದು ಸತ್ಯ, ನಿರ್ಮಲಾ ಅವರು 1 ಕೋಟಿ ರೂಪಾಯಿ ಪಡೆದಿದ್ದರು. ಸೃಜನ್ ಲೋಕೇಶ್ ಪ್ರೊಡಕ್ಷನ್‌ನಿಂದ ಸತ್ಯ ದಂಪತಿಗೆ ಹಣ ವರ್ಗಾವಣೆ ಆಗಿತ್ತು ಎನ್ನಲಾಗಿದೆ. ಧಾರಾವಾಹಿ ಮಾಡಲು ಸತ್ಯ- ನಿರ್ಮಲಾ ದಂಪತಿ ಹಣ ಪಡೆದಿದ್ದರಂತೆ.

ದೂರು ದಾಖಲಾಗಿದೆ

23-11-2023 ರಲ್ಲಿ ಸೃಜನ್ ಲೋಕೇಶ್‌ ಅವರಿಂದ 1 ಕೋಟಿ ರೂಪಾಯಿ ಹಣ ಪಡೆದಿದ್ದರು. 1-04-24 ರಿಂದ ಪ್ರತಿ ತಿಂಗಳು 5 ಲಕ್ಷ ರೂಪಾಯಿ ಹಣ ಕೊಡಬೇಕು. ಇದುವರೆಗೂ ಯಾವುದೇ ಹಣ ನೀಡಿಲ್ಲ ಎಂದು ಸೃಜನ್ ಲೋಕೇಶ್ ಪರ ಅಗ್ನಿ ಯು ಸಾಗರ್ ದೂರು ನೀಡಿದ್ದಾರೆ. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೀರಿಯಲ್‌, ಶೋ ನಿರ್ಮಿಸಿದ್ದಾರೆ

ಈ ಹಿಂದೆ ನಟಿ ಅಶ್ವಿನಿ ಗೌಡ ಅವರಿಗೆ ನಟನೆ ಸಂಭಾವನೆ ಕೊಟ್ಟಿಲ್ಲ ಎಂದು ಅವರು ನಿರ್ಮಲಾ ಚೆನ್ನಪ್ಪ ವಿರುದ್ಧ ಕೂಗಾಡಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇವರ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್‌ ಮೂಲಕ ಈಗಾಗಲೇ ‘ಪದ್ಮಾವತಿ’ ಧಾರಾವಾಹಿ, ‘ಕನ್ನಡ ಕೋಗಿಲೆ ಶೋ’ಗಳನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಲಾ ಚೆನ್ನಪ್ಪ ಅವರು ಕೆಲ ವಾಹಿನಿಯಲ್ಲಿ ಫಿಕ್ಷನ್‌, ನಾನ್‌ ಫಿಕ್ಷನ್‌ ಎರಡೂ ವರ್ಗಗಳಲ್ಲಿ ಕೆಲಸ ಮಾಡಿದ್ದಾರೆ. ಫಿಕ್ಷನ್‌, ನಾನ್‌ ಫಿಕ್ಷನ್‌ ಎರಡರಲ್ಲೂ ನಿರ್ದೇಶನ ಮಾಡಿ ಮೊದಲ ಮಹಿಳಾ ನಿರ್ದೇಶಕಿ ಎಂಬ ಗೌರವ ಕೂಡ ಸಿಕ್ಕಿತ್ತು.

ದಾಖಲೆ ಬರೆದಿರುವ ಲಕ್ಷ್ಮೀ ನಿವಾಸ ಧಾರಾವಾಹಿ

250 episode ಗಳನ್ನು 1 ಘಂಟೆ ಶೋ ಪ್ರಸಾರ ಮಾಡಿ, ‘ಲಕ್ಷ್ಮಿ ನಿವಾಸ’ ಧಾರಾವಾಹಿ ಭಾರತದ ಟಿವಿ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಈ ಸೀರಿಯಲ್‌ ಬೇರೆ ಭಾಷೆಗೂ ಕೂಡ ರಿಮೇಕ್‌ ಆಗಿತ್ತು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 8ರಲ್ಲಿ ನಿರ್ಮಲಾ ಚೆನ್ನಪ್ಪ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅಲ್ಲಿ ಅವರ ವರ್ತನೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. 2017ರಿಂದ 2019ರವರೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಿದ್ದ ಪದ್ಮಾವತಿ ಸೀರಿಯಲ್‌ಗೆ ನಿರ್ದೇಶಕಿ, ನಿರ್ಮಾಪಕಿ ಕೂಡ ಆಗಿದ್ದರು.