Lakshmi Nivasa Kannada serial Update: 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಿಂಚನಾಗೆ ಈಗ ಒಳ್ಳೆಯ ಬುದ್ಧಿ ಬಂತಾ? ಇದು ನಾಟಕವೇ? 

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಹರೀಶ್‌ ಹಾಗೂ ಸಿಂಚನಾ ಸಂಸಾರದಲ್ಲಿ ಸಮಸ್ಯೆ ಶುರುವಾಗಿದೆ. ಗಂಡ ಏನೂ ಕೆಲಸ ಮಾಡಲ್ಲ, ಗರ್ಭಿಣಿಯಾಗಿರೋ ನನಗೆ ಸಹಾಯ ಮಾಡ್ತಿಲ್ಲ ಎಂದು ಸಿಂಚನಾ, ಗಂಡನ ಮೇಲೆ ಸಿಡುಕಿದ್ದಾಳೆ. ಇನ್ನೊಂದು ಕಡೆ ಭಾವನಾ ಕೂಡ ಹರೀಶ್‌ಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ಗಂಡ ಕೆಲಸ ಮಾಡಲ್ಲ, ಗರ್ಭಿಣಿಯಾದ ನನಗೆ ಯಾವುದೇ ಬೆಲೆ ಕೊಡಲ್ಲ, ಸಹಾಯ ಮಾಡಲ್ಲ, ಪ್ರೀತಿ ಮಾಡಲ್ಲ, ನಾನು ಮುಂದೆ ಹೇಗೆ ನನ್ನ ಮಗುವನ್ನು ಬೆಳೆಸೋದು, ಹೇಗೆ ಜವಾಬ್ದಾರಿಯನ್ನು ತಗೊಳೋದು, ಸಮಸ್ಯೆಗಳನ್ನು ಹೇಗೆ ಎದುರಿಸೋದು ಅಂತ ಸಿಂಚನಾಗೆ ತಲೆನೋವು ಶುರುವಾಗಿದೆ. ಈ ವಿಷಯವನ್ನು ಅವಳು ಭಾವನಾ ಬಳಿ ಹೇಳಿಕೊಂಡಿದ್ದಾಳೆ.

“ಇಷ್ಟುದಿನ ನಾವಿಬ್ಬರೇ ಇದ್ದೆವು, ಈಗ ಸಂಸಾರ ದೊಡ್ಡದಾಗ್ತಿದೆ, ಹರೀಶ್‌ ಮಾತ್ರ ಸಣ್ಣವರ ಥರ ಆಡ್ತಿದ್ದಾರೆ. ಮಗು ಎನ್ನೋ ಕಾಳಜಿ ಇರಬೇಕು, ಜವಾಬ್ದಾರಿ ತಗೋಬೇಕು, ಮುಂದಿನ ಜೀವನ ಹೇಗೆ ಅಂತ ಭಯ ಆಗ್ತಿದೆ. ನಾನು ಇಷ್ಟು ವರ್ಷಗಳ ಕಾಲ ಅತ್ತೆ-ಮಾವನಿಗೆ ತೊಂದರೆ ಕೊಟ್ಟಿದ್ದೇನೆ, ಮನಸ್ಸು ನೋಯಿಸಿದ್ದೇನೆ. ನಾನು ಅತ್ತೆ-ಮಾವನ ಬಳಿ ಗರ್ಭಿಣಿ ಅಂತ ಹೇಳೋಕೆ ಮುಜುಗರ ಆಗ್ತಿದೆ. ಅತ್ತೆ-ಮಾವನ ಮುಂದೆ ನಿಂತುಕೊಳ್ಳೋ ಯೋಗ್ಯತೆ ಕಳೆದುಕೊಂಡಿದ್ದೇನೆ” ಎಂದು ಸಿಂಚನಾ ಬೇಸರ ಮಾಡಿಕೊಂಡಿದ್ದಾಳೆ.

“ಇನ್ನೊಂದು ಕಡೆ ಹರೀಶ್‌ ಮಾತ್ರ ಸರಿ ಹೋಗ್ತಿಲ್ಲ, ಹೆಂಡ್ತಿಗೆ ಬುದ್ಧಿ ಕಲಿಸಬೇಕು, ಅವರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕು. ನೀನಿರೋ ಮನೆ ಮಾವನ ಮನೆಯವರು ಕೊಟ್ಟಿರೋದು, ಸಿಂಚನಾಳಿಂದಲೇ ನೀನು ಬದುಕ್ತಿರೋದು, ಎಲ್ಲ ಕಳೆದುಕೊಂಡು ಅಂಬೋ ಅಂತ ಅನ್ನಬೇಡ. ಇರೋ ಅನ್ನಕ್ಕೆ ಕಲ್ಲು ಹಾಕಿಕೊಳ್ಳಬೇಡ” ಅಂತೆಲ್ಲ ಸಂತೋಷ್‌ ತನ್ನ ತಮ್ಮನಿಗೆ ಬುದ್ಧಿ ಹೇಳಿದ್ದಾನೆ. ಇದು ಬುದ್ಧಿ ಅಲ್ಲ, ಕೆಟ್ಟ ಬುದ್ಧಿ.

ವೀಕ್ಷಕರು ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

  • ಏನೇ ಆದ್ರೂ ನಮ್ ಸಿಂಚುಗೆ ಒಳ್ಳೆ ಬುದ್ದಿ ಬಂದಿದೆ
  • ಸಿಂಚನಾ ಅತ್ತೆ ಮಾವನನ್ನು ನೋಡೋಕೆ ಆಗಲ್ಲ,
  • ಈಗೀಗ ಸಿಂಚನಗೆ ಬುದ್ದಿ ಬರ್ತಾ ಇದೆ, ಎಲ್ಲರೂ ಒಟ್ಟಿಗೆ ಇದ್ದಾಗ ತುಂಬಾ ಮೆರೆಯುತ್ತಿದ್ದಳು, ವೀಣಾ ಅತ್ತಿಗೆಗೆ ತುಂಬಾ ಕಾಟ ಕೊಟ್ಟಿದಾಳೆ.
  • ಮಕ್ಕಳು ಆಡ್ಸೋಕೆ ಯಾರು ಇಲ್ಲ, ಅತ್ತೆ ಮಾವ ಇದ್ರೆ ಚೆನ್ನಾಗಿರುತ್ತದೆ ಅಂತ ಸಿಂಚನಾ ಏನಾದರೂ ನಾಟಕ ಮಾಡ್ತಿದಾಳಾ? ಏನೂ ಅರ್ಥ ಆಗುತ್ತಿಲ್ಲ.
  • ಅತ್ತೆ ಮಾವನಿಗೆ ತೊಂದರೆ ಕೊಟ್ಟರೆ ಈ ಸಿಂಚನಾಗೆ ಹೀಗೆ ಆಗಬೇಕು.
  • ದೇವರೇ ಸಿಂಚನಾಗೆ ಈಗ ಬುದ್ಧಿ ಬಂತು
  • ಇಲ್ಲಿ ಸೊಸೆಯಂದಿರು ಸರಿಹೋಗ್ತಿದ್ದಾರೆ ....ಆದ್ರೆ ಮಕ್ಕಳು..
  • ಈ ಧಾರಾವಾಹಿ ಕಥೆ ಏನು?

ಈ ಧಾರಾವಾಹಿ ಕತೆ ಏನು?

ಲಕ್ಷ್ಮೀ ಶ್ರೀನಿವಾಸ್‌ಗೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳು. ಮಧ್ಯಮ ವರ್ಗದ ಕುಟುಂಬದ ಇವರಿಗೆ ಮನೆ ಮಾಡುವ ಆಸೆಯಾಗಿತ್ತು. ಆದರೆ ಇವರ ಗಂಡು ಮಕ್ಕಳಾದ ಹರೀಶ್‌, ಸಂತೋಷ್ ಮಾತ್ರ ತಂದೆ-ತಾಯಿಯನ್ನು ನೋಡಿಕೊಳ್ಳಲು ರೆಡಿ ಇಲ್ಲ. ಇಬ್ಬರು ಹೆಣ್ಣು ಮಕ್ಕಳಾದ ಭಾವನಾ, ಜಾಹ್ನವಿ ಮಾತ್ರ ಶ್ರೀಮಂತರ ಮನೆ ಸೇರಿದ್ದಾರೆ. ಇನ್ನೊಂದು ಮಗಳು ಕೂಡ ಆರಾಮಾಗಿ ಜೀವನ ಮಾಡುತ್ತಿದ್ದಾಳೆ. ಆದರೆ ಮಕ್ಕಳು ನೋಡಿಕೊಂಡಿಲ್ಲ ಎಂದು ಈ ವಯಸ್ಸಿನಲ್ಲಿ ಲಕ್ಷ್ಮೀ, ಶ್ರೀನಿವಾಸ್‌ ದುಡಿದು ತಿನ್ನುತ್ತಿದ್ದಾರೆ. ಇವರ ದತ್ತು ಮಗ ವೆಂಕಿಗೆ ಮಾತ್ರ ಅಪ್ಪ-ಅಮ್ಮನ ಮೇಲೆ ಗೌರವ ಇದೆ. ಸಂತೋಷ್‌, ಹರೀಶ್‌ ಬೇರೆ, ಬೇರೆ ಮನೆಯಲ್ಲಿ ಬದುಕುತ್ತಿದ್ದರೂ ಕೂಡ ಇವರು ಹಣದಾಸೆಯಿಂದ ಮಾಡಬಾರದ್ದನ್ನೆಲ್ಲ ಮಾಡಿ ನೆಮ್ಮದಿ ಇಲ್ಲದಂತೆ ಜೀವನ ಮಾಡ್ತಿದ್ದಾರೆ.

ಪಾತ್ರಧಾರಿಗಳು

ಹರೀಶ್‌- ಅಜಯ್‌ ರಾಜ್‌

ಸಂತೋಷ್‌ - ಮಧು ಹೆಗಡೆ

ಸಿಂಚನಾ - ನಟಿ ರೂಪಿಕಾ

View post on Instagram