Bigg Boss Kannada 12 Malu Nipanal: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಬರಬಾರದಿತ್ತು ಎಂದು ಸ್ಪರ್ಧಿ ಮಾಳು ನಿಪನಾಳ ಅವರು ಹೇಳಿಕೊಂಡು ಬೇಸರ ಹಾಕಿದ್ದಾರೆ. ನಾನು ಇಲ್ಲಿಗೆ ಬಂದು ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಮಾಳು ನಿಪನಾಳ ಅವರು “ನಾನು ಯಾಕಾದರೂ ಬಿಗ್‌ ಬಾಸ್‌ ಮನೆಗೆ ಬಂದನೋ ಏನೋ? ಇಲ್ಲಿಗೆ ಬರಬಾರದಿತ್ತು” ಎಂದು ಹೇಳಿದ್ದರು. ಹೌದು, ‘ನಾ ಡ್ರೈವರ.. ನಾ ಲವ್ವರ..’ ಎಂದು ಹಾಡು ಹೇಳಿ ಫೇಮಸ್‌ ಆಗಿದ್ದ ಗಾಯಕ ಈ ಮಾತು ಹೇಳಿದ್ದರು.

ಅಂದಹಾಗೆ ಮಾಳು ನಿಪನಾಳ ಅವರು ಧ್ರುವಂತ್‌, ಸ್ಪಂದನಾ ಸೋಮಣ್ಣ ಜೊತೆ ಲಿವಿಂಗ್‌ ಏರಿಯಾದಲ್ಲಿ ಮಾತನಾಡಿದ್ದರು. ಆಗ ಅವರು ಈ ಶೋಗೆ ಬರಬಾರದಿತ್ತು ಎಂದು ಹೇಳಿದ್ದರು.

ಮಾಳು ನಿಪನಾಳ: ಇದು ಬೇರೆಯೇ ಲೋಕ. ನಾವು ಇದ್ದ ಪ್ರಪಂಚವೇ ಬೇರೆ. ನಾನು ಇಲ್ಲಿ ಇರೋಕೆ ಆಗ್ತಿಲ್ಲ. ನಾನು ಬಿಗ್‌ ಬಾಸ್‌ ಮನೆಗೆ ಬಂದು ತಪ್ಪು ಮಾಡಿದೆ. ನನಗೆ ಇದು ಸೆಟ್‌ ಆಗೋದಿಲ್ಲ. ಮಾತನಾಡಬೇಕು ಅಂದರೆ ಮಾತಾಡೋಕೆ ಆಗಲ್ಲ, ಆಟ ಆಡಬೇಕು ಅಂದರೆ ಆಗುತ್ತಿಲ್ಲ.

ಸ್ಪಂದನಾ ಸೋಮಣ್ಣ: ನಮ್ಮ ಜೊತೆ ಈಗ ಹೇಗೆ ಮಾತಾಡ್ತಿದ್ದೀರೋ ಹಾಗೆ ಮಾತಾಡಿ

ಮಾಳು ನಿಪನಾಳ: ನಮ್ಮದು ಉತ್ತರ ಕರ್ನಾಟಕ ಭಾಷೆ, ನಾನು ಹೀಗೆ ಮಾತನಾಡೋದು. ಇಲ್ಲಿಗೆ ಯಾಕಾದರೂ ಬಂದೆನೋ ಅಂತ ಅನಿಸ್ತಿದೆ. ನಾನು ಹೆಚ್ಚು ಮಾತನಾಡಲ್ಲ, ಆದರೆ ಇಲ್ಲಿ ಇಷ್ಟೊಂದು ಮಾತನಾಡೋದು ನೋಡಿ ನಮ್ಮ ಹಳ್ಳಿಯವರು ಕೂಡ ಏನ್‌ ಇವ, ಇಷ್ಟೊಂದು ಮಾತಾಡ್ತಾನೆ ಅಂತ ಹೇಳ್ತಾರೆ. ನನಗೆ ಈ ವಾರ ಹೋಗಬೇಕು ಅಂತ ಅನಿಸ್ತಿದೆ.

ಧ್ರುವಂತ್:‌ ಹೀಗೆ ನಮ್ಮ ಜೊತೆ ಇರಿ. ಆ ರೀತಿ ಅನ್ಕೋಬೇಡಿ. ಇದೊಂದು ಅನುಭವ ಅಷ್ಟೇ..

ಆಮೇಲೆ ಚಂದ್ರಪ್ರಭ ಅವರು, “ಮಾಳು ಮಾತು ಕಡಿಮೆ ಆಗಿದೆ. ನಿಮ್ಮ ಉತ್ತರ ಕರ್ನಾಟಕ ಭಾಷೆ ಯಾರಿಗೂ ಅರ್ಥ ಆಗೋದಿಲ್ಲ ಎಂದುಕೊಳ್ಳಬೇಡಿ, ನೀವು ಮಾತಾಡಿ. ನೀವು ಕಡಿಮೆ ಮಾತನಾಡಿದರೆ ಸ್ಪಂದನಾ ಕೂಡ ಸೈಲೆಂಟ್‌ ಆಗುತತಾರೆ” ಎಂದು ಹೇಳಿ ಧೈರ್ಯ ತುಂಬಿದ್ದಾರೆ. ಮಾಳು ನಿಪನಾಳ ಅವರು ಬೇಸರಗೊಂಡಿರುವಾಗಲೇ ಈ ಶೋ ಬಂದ್‌ ಆಗಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಬಂದ್!‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮನೆಗೆ ಈಗ ಬೀಗ ಬಿದ್ದಿದೆ. ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್‌ನಲ್ಲಿ ಬಿಗ್ ಬಾಸ್ ನಡೆಯುತ್ತಿತ್ತು. ಮಾಲೀನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದೇ ಮನರಂಜನಾ ಪಾರ್ಕ್ ಓಪನ್ ಮಾಡಿದ್ದರು. ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯದ ನೀರನ್ನ ಪರಿಸರಕ್ಕೆ ಬಿಟ್ಟಿದ್ದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶವಾಗಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 31, ಕಾಯ್ದೆ 1983 ನಿಯಮ 20(ಎ) ಅನ್ವಯ ಸ್ಟುಡಿಯೋ ಬಂದ್ ಮಾಡಲು ಆದೇಶ ನೀಡಲಾಗಿದೆ. ಈಗ ದೊಡ್ಮನೆಯಲ್ಲಿದ್ದ ಸ್ಪರ್ಧಿಗಳು ಹೊರಗಡೆ ಬಂದಿದ್ದು, ಅವರನ್ನು ಟನ್ ದಿ ಗಾಲ್ಫ್ ವಿಲೇಜ್ ರೆಸಾರ್ಟ್‌ನಲ್ಲಿ ಇಡಲಾಗಿದೆ.