ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಜೀ ಕನ್ನಡ ಒಂದೊಂದೇ ಪ್ರೋಮೋ ಪೋಸ್ಟ್ ಮಾಡ್ತಿದ್ದು, ಕುತೂಹಲ ಡಬಲ್ ಮಾಡಿದೆ. ಈಗ ಶಿವರಾಜ್ ಕುಮಾರ್ ಸರ್ಪ್ರೈಸ್ ಒಂದು ರಿವೀಲ್ ಆಗಿದೆ. 

ಜೀ ಕನ್ನಡ (Zee Kannada) ಅಭಿಮಾನಿಗಳು ಕಾತರದಿಂದ ಕಾಯ್ತಿರುವ ಕಾಲ ಹತ್ತಿರ ಬರ್ತಿದೆ. ಜೀ ಕುಟುಂಬ ಅವಾರ್ಡ್ಸ್ 2025 (Zee Kutumba Awards 2025) ಇದೇ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಪ್ರಸಾರ ಆಗ್ತಿದೆ. ಈಗಾಗಲೇ ಕಾರ್ಯಕ್ರಮದ ಶೂಟಿಂಗ್ ಪೂರ್ಣಗೊಂಡಿದ್ದು, ಜೀ ಕನ್ನಡ ಒಂದೊಂದೇ ಪ್ರೋಮೋ ಬಿಡುಗಡೆ ಮಾಡ್ತಿದೆ. ಪ್ರೋಗ್ರಾಂ ಝಲಕ್ ನೋಡಿದ ಫ್ಯಾನ್ಸ್, ಯಾರಿಗೆ ಅತ್ಯುತ್ತಮ ನಟ, ಯಾರಿಗೆ ಅತ್ಯುತ್ತಮ ನಟಿ ಎಂಬ ಚರ್ಚೆ ಶುರು ಮಾಡಿದ್ದಾರೆ. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದ ಶಿವಣ್ಣ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಂಠಿ ಅಲಿಯಾಸ್ ಧನುಷ್ ಅವ್ರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವೇದಿಕೆ ಮೇಲೆ ಖುಷಿ ವಿಷ್ಯ ಅನೌನ್ಸ್ ಮಾಡಿದ್ದಾರೆ.

ಕಂಠಿ ಅಲಿಯಾಸ್ ಧನುಷ್ ಗೆ ಭರ್ಜರಿ ಗಿಫ್ಟ್ ನೀಡಿದ ಶಿವರಾಜ್ ಕುಮಾರ್ : 

ಜೀ ಕನ್ನಡ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದ ಶಿವಣ್ಣ ಭರ್ಜರಿ ಡಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಎಂದಿನಂತೆ ಜೋಶ್ ನಲ್ಲಿ ಹೆಜ್ಜೆ ಹಾಕಿದ ಶಿವಣ್ಣ, ಜೀ಼ ಕುಟುಂಬದ ಸೆನ್ಸೇಷನಲ್ ಅವಾರ್ಡ್ಸ್ ಯಾರಿಗೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಕರುನಾಡ ಚಕ್ರವರ್ತಿ ಶಿವಣ್ಣ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಕಂಠಿಯಾಗಿ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿರುವ ಧನುಷ್ ಅವರಿಗೆ ಅವಾರ್ಡ್ ನೀಡಿದ್ದಾರೆ. ಬರೀ ಅವಾರ್ಡ್ ನೀಡಿದ್ದು ಮಾತ್ರವಲ್ಲ, ಧನುಷ್ ನಟನೆಯನ್ನು ಹೊಗಳಿದ್ದಾರೆ. ನನ್ನ ಅಚ್ಚುಮೆಚ್ಚಿನ ನಟ ಧನುಷ್ ಎಂದ ಶಿವಣ್ಣ, ತಮ್ಮ ಪ್ರೊಡಕ್ಷನ್ ನಲ್ಲಿ ಧನುಷ್ ಲಾಂಚ್ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಕಂಠಿಗೆ ಶಿವರಾಜ್ ಕುಮಾರ್ ಹೊಸ ನಾಮಕಾರಣ ಮಾಡಿದ್ದಾರೆ. ಧನುಷ್, ಫೈರ್ ಸ್ಟಾರ್ ಅಂತ ಶಿವರಾಜ್ ಕುಮಾರ್ ಹೇಳಿದ್ದಾರೆ.

ಕೊನೆಗೂ ಸಿಡಿದೆದ್ದ ಸಿದ್ದೇಗೌಡ್ರು ಹೆಂಡ್ರು, ಭಾವನಾಳ ಇನ್ನೊಂದು ರೂಪ ವೀಕ್ಷಕರ ಕಣ್ಮುಂದೆ!

ನಿತ್ಯಾ ಅಲಿಯಾಸ್ ನಮ್ರತಾ ಕೈ ಮೇಲೆ ಪುನಿತ್ ರಾಜ್ ಕುಮಾರ್ ಟ್ಯಾಟೂ : 

ಜೀ಼ ಕುಟುಂಬದ ಸೆನ್ಸೇಷನಲ್ ಅವಾರ್ಡ್ಸನ್ನು ಕರ್ಣ ಸೀರಿಯಲ್ ನಿತ್ಯಾ ಪಡೆದಿದ್ದಾರೆ. ನಿತ್ಯಾ ಅಲಿಯಾಸ್ ನಮ್ರತಾ ಗೌಡ ವೇದಿಕೆ ಬಂದು, ಶಿವಣ್ಣನ ಕೈನಲ್ಲಿ ಅವಾರ್ಡ್ ಪಡೆದಿದ್ದು ಮಾತ್ರವಲ್ಲ ತಮಗೆ ಪುನಿತ್ ರಾಜ್ ಕುಮಾರ್ ಮೇಲೆ ಎಷ್ಟು ಅಭಿಮಾನ ಇದೆ ಎಂಬುದನ್ನು ತೋರಿಸಿದ್ದಾರೆ. ತಮ್ಮ ಕೈ ಮೇಲೆ ಹಾಕಿರುವ ಪುನಿತ್ ರಾಜ್ ಕುಮಾರ್ ಟ್ಯಾಟೂ ತೋರಿಸಿ ನಮ್ರತಾ ಸಂಭ್ರಮಿಸಿದ್ದಾರೆ. ಅಲ್ದೆ ಪುನಿತ್ ರಾಜ್ ಕುಮಾರ್ ಸಾಂಗ್ ಒಂದಕ್ಕೆ ವೇದಿಕೆ ಮೇಲೆ ಶಿವಣ್ಣನ ಜೊತೆ ಡಾನ್ಸ್ ಮಾಡಿದ್ದಾರೆ.

ಪತಿ ರೋಷನ್ ಬರ್ತ್‌ ಡೇಗೆ ಕವನ ಬರೆದು ಟಿಪಿಕಲ್ ಹೆಂಡ್ತಿ ಅನ್ನೋದನ್ನು ಪ್ರೂವ್ ಮಾಡಿದ ಅನುಶ್ರೀ

ದೊಡ್ಡ ಕಲಾವಿದರ ದಂಡು : 

ಜೀ ಕನ್ನಡ ಅವಾರ್ಡ್ಸ್ ಫಂಕ್ಷನ್ ಅಂದ್ರೆ ಅದು ಕಲಾವಿದರಿಗೆ ದೊಡ್ಡ ಹಬ್ಬ. ಈ ಬಾರಿ, ಶಿವರಾಜ್ ಕುಮಾರ್, ರಾಜ ಯದುವೀರ್ ಒಡೆಯರ್, ಕಾಂತಾರ ಚಾಪ್ಟರ್ 1 ಖ್ಯಾತಿಯ ರಿಷಬ್ ಶೆಟ್ಟಿ, ರಮೇಶ್ ಅರವಿಂದ್, ಪ್ರೇಮಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿದಂತೆ ಅನೇಕ ದಿಗ್ಗಜರು ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅವ್ರ ಕೈನಿಂದ ಸೀರಿಯಲ್ ಕಲಾವಿದರು ಅವಾರ್ಡ್ ಪಡೆಯಲಿದ್ದಾರೆ. ಅಭೂತಪೂರ್ವ ಮನರಂಜನೆ, ತಾರಾಬಳಗದ ಸಮಾಗಮ, ನೆಚ್ಚಿನ ಕಲಾವಿದರಿಗೆ ಪ್ರಶಸ್ತಿ ಗೌರವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ವೀಕ್ಷಕರು ಜೀ ಕನ್ನಡ ಚಾನೆಲ್ ನಲ್ಲಿ ಇದೇ ಅಕ್ಟೋಬರ್ 17, 18 ಮತ್ತು 19 ರಂದು ಕಣ್ತುಂಬಿಕೊಳ್ಳಲಿದ್ದಾರೆ. ಈಗಾಗಲೇ ಕೆಲ ಅವಾರ್ಡ್ ಯಾರಿಗೆ ಧಕ್ಕಿದೆ ಎಂಬುದು ರಿವೀಲ್ ಆಗಿದ್ರೂ, ಅಭಿಮಾನಿಗಳ ಕಾತರ ಮಾತ್ರ ಕಮ್ಮಿ ಆಗ್ಲಿಲ್ಲ. ತಾವು ವೋಟ್ ಹಾಕಿರುವ ಕಲಾವಿದರಿಗೆ ಅವಾರ್ಡ್ ಸಿಕ್ಕಿದ್ಯಾ ಎಂಬುದನ್ನು ನೋಡೋ ಆತುರ ಫ್ಯಾನ್ಸ್ ಗಿದೆ.

View post on Instagram