Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೊದಲ ದಿನವೇ ಓರ್ವ ಸ್ಪರ್ಧಿ ಎಲಿಮಿನೇಟ್‌ ಆಗಿದ್ದಾರೆ. ಆದರೆ ಅವರಾರು? ನಿಜಕ್ಕೂ ಎಲಿಮಿನೇಟ್‌ ಆದರಾ? ಸೀಕ್ರೇಟ್‌ ರೂಮ್‌ಗೆ ಹೋದರಾ? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮನೆಯ ಆಟ ಶುರುವಾಗಿದೆ. ದೊಡ್ಮನೆಗೆ ಬಂದು ಎಲ್ಲರೂ ಸ್ವಲ್ಪ ಮನೆ ನೋಡಿಕೊಂಡು, ಸ್ಪರ್ಧಿಗಳು ಪರಸ್ಪರ ಪರಿಚಯ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಬಿಗ್‌ ಬಾಸ್‌ ಮಹಾ ಟ್ವಿಸ್ಟ್‌ ಕೊಟ್ಟಿದ್ದರು. ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಡುವಾಗಲೇ ವೇದಿಕೆ ಕೆಳಗಿದ್ದ ವೀಕ್ಷಕರು, ಯಾರು ಮನೆಗೆ ಹೋಗಬೇಕು ಎಂದು ಮತ ಹಾಕಿ ಆಯ್ಕೆ ಮಾಡಬೇಕಿತ್ತು. ಆ ವೇಳೆ 75% ಮತ ಪಡೆದವರಿಗೆ ಒಂಟಿ, 75% ಕ್ಕಿಂತ ಕಡಿಮೆ ಇರೋರನ್ನು ಜಂಟಿ ಎಂದು ಮಾಡಿದ್ದರು. ಆಮೇಲೆ ಕೊನೆಯದಾಗಿ ಸ್ಪಂದನಾ, ಮಾಳು, ರಕ್ಷಿತಾ ಶೆಟ್ಟಿ ಉಳಿದುಕೊಂಡಿದ್ದರು.

ಮೊದಲ ದಿನವೇ ಮಹಾ ಶಾಕ್

ಈ ವೇಳೆ ಸ್ಪಂದನಾ, ಕಾಕ್ರೋಚ್‌, ಸುಧಿ, ಜಾಹ್ನವಿ, ಧನುಷ್‌ ಗೌಡ, ಅಶ್ವಿನಿ ಗೌಡ ಅವರು ಒಂಟಿಯಾಗಿದ್ದಾರೆ. ಇವರು ನಟಿ ಸ್ಪಂದನಾ ಸೋಮಣ್ಣ, ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಅವರ ನಡುವೆ ಒಬ್ಬರನ್ನು ಮನೆಯಿಂದ ಹೊರಗಡೆ ಕಳಿಸಬೇಕಿತ್ತು. ಆ ವೇಳೆ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಮೂವರು ಮನವಿ ಮಾಡಿದ್ದರೆ, ಉಳಿದವರು ಯಾರು ಉಳಿಯಬೇಕು ಎಂದು ಜಡ್ಜ್‌ ಮಾಡಬೇಕಿತ್ತು.

ಮನವಿ ಮಾಡಿಕೊಂಡ ಸ್ಪರ್ಧಿಗಳು

“ನನಗೆ ಈ ಮನೆಯಲ್ಲಿ ಇರೋದು ದೊಡ್ಡ ಅವಕಾಶ. ಇಲ್ಲಿ ಒಂದೆರಡು ದಿನಗಳಾದರೂ ಇರಬೇಕು ಎನ್ನೋ ಆಸೆ ಇದೆ” ಎಂದು ಮಾಳು ನಿಪನಾಳ ಎಂದು ಹೇಳಿದ್ದಾರೆ.

“ನಾನು ಇಲ್ಲಿಯವರೆಗೆ ತುಂಬ ಕಷ್ಟಪಟ್ಟು ಬಂದಿದ್ದೇನೆ. ನನ್ನ ಜರ್ನಿಯನ್ನು ನಾನು ರೂಪಿಸಿಕೊಂಡು ಬಂದಿದ್ದೇನೆ. ಈ ಮನೆಯಲ್ಲಿ ಇರೋಕೆ ಅವಕಾಶ ಕೊಡಬೇಡಿ” ಎಂದು ಸ್ಪಂದನಾ ಸೋಮಣ್ಣ ಅವರು ಮನವಿ ಮಾಡಿದ್ದರು.

“ನಾನು ಇಂದು ಏನು ಮಾತನಾಡಬೇಕು ಅಂತ ಗೊತ್ತಾಗ್ತಿಲ್ಲ. ಯುಟ್ಯೂಬ್‌ ರೀಲ್ಸ್‌ ಮಾಡಿ ಇಂದು ಮೇಲೆ ಬಂದಿದ್ದೇನೆ. ತುಳುನಾಡಿನಲ್ಲಿ ನಾನು ಯಾರು ಅಂತ ಗೊತ್ತಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಅವಕಾಶ ಸಿಕ್ಕಿದರೆ, ಹೆಚ್ಚಿನ ಜನರಿಗೆ ರೀಚ್‌ ಆಗಬಹುದು ಅಂತ ಆಸೆ. ನಾನು ಮುಂಬೈನಲ್ಲಿ ಇರೋದು, ಉಡುಪಿ ನನ್ನ ಅಜ್ಜನ ಮನೆ ಆಗಿರೋದಿಕ್ಕೆ ಇಲ್ಲಿಗೆ ಬಂದು ವಿಡಿಯೋಗಳನ್ನು ಮಾಡುತ್ತಿದ್ದೇನೆ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಉಳಿದವರ ಅಭಿಪ್ರಾಯ ಏನಾಗಿತ್ತು?

“ಸ್ಪಂದನಾ ಅವರು ತುಂಬ ಕಷ್ಟಪಟ್ಟು ಇಲ್ಲಿಗೆ ಬಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫ್ಲುಕ್‌ ಆಗಿ ಗೆಲ್ಲೋದುಂಟು. ಸಿಂಗರ್‌ಗೂ ಕೆಲಸ ಇಲ್ಲ. ಜನರಿಗೂ ಕೂಡ ಇಂಥವರಿಗೆ ಅವಕಾಶ ಕೊಡ್ತೀವಾ ಅಂತ ಅನಿಸುತ್ತದೆ” ಎಂದು ಜಾಹ್ನವಿ ಅವರು ಹೇಳಿದ್ದಾರೆ.

“ಇಲ್ಲಿ ಎಲ್ಲ ವರ್ಗದವರು ಇದ್ದಾರೆ. ಆದರೆ ನಮ್ಮ ಮಧ್ಯೆ ಚಿಕ್ಕ ವಯಸ್ಸಿನ ಹುಡುಗಿ ಇರಬೇಕು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಸ್ಪಂದನಾ ಸೋಮಣ್ಣ ಅವರು ಕಲಾವಿದರು, ಅವರಿಗೆ ಬೆಂಬಲ ಕೊಡಬೇಕು ಎಂದು ಧನುಷ್‌ ಗೌಡ, ಧ್ರುವಂತ್‌, ಮಲ್ಲಮ್ಮ ಕೂಡ ಹೇಳಿದ್ದಾರೆ.

ನಿಜಕ್ಕೂ ಆಗಿದ್ದೇನು?

ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದಾರೆ. ಆದರೆ ಸಂಪ್ರದಾಯದ ಪ್ರಕಾರ ಬಿಗ್‌ ಬಾಸ್‌ ಇವರನ್ನು ಬೀಳ್ಕೊಡಬೇಕಿತ್ತು. ಇದ್ಯಾವುದೂ ಆಗೇ ಇಲ್ಲ. ಬಹುಶಃ ರಕ್ಷಿತಾ ಶೆಟ್ಟಿ ಅವರು ಸೀಕ್ರೇಟ್‌ ರೂಮ್‌ಗೆ ಹೋಗಿದ್ದಾರೆ ಎನ್ನಲಾಗಿದೆ. ಕೆಲ ಸೀಸನ್‌ಗಳಿಂದ ಸೀಕ್ರೇಟ್‌ ರೂಮ್‌ ಎನ್ನೋದು ಇರಲಿಲ್ಲ. ಈ ಬಾರಿ ಸೀಕ್ರೇಟ್‌ ರೂಮ್‌ ಇಟ್ಟಿದ್ದರೆ, ಇನ್ನಷ್ಟು ಆಟಕ್ಕೆ ಮಜಾ ಬರೋದಂತೂ ಗ್ಯಾರಂಟಿ.

ಸ್ಪರ್ಧಿಗಳು ಯಾರು?

ಅಂದಹಾಗೆ ಸ್ಪಂದನಾ ಸೋಮಣ್ಣ, ಕರಿಬಸಪ್ಪ, ಧನುಷ್‌ ಗೌಡ, ಅಶ್ವಿನಿ ಗೌಡ, ಅಶ್ವಿನಿ, ಕಾವ್ಯ ಶೈವ, ಡಾಗ್‌ ಸತೀಶ್‌, ಧ್ರುವಂತ್‌, ಆರ್‌ಜೆ ಅಮಿತ್‌, ಮಲ್ಲಮ್ಮ, ಕಾಕ್ರೋಚ್‌ ಸುಧಿ, ರಾಶಿಕಾ ಶೆಟ್ಟಿ, ಜಾಹ್ನವಿ, ಚಂದ್ರಪ್ರಭ, ಗಿಲ್ಲಿ ನಟ, ಮಂಜುಭಾಷಿಣಿ, ರಕ್ಷಿತಾ ಶೆಟ್ಟಿ, ಅಭಿಷೇಕ್‌ ಶ್ರೀಕಾಂತ್‌ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ.