Bigg Boss Kannada Season 12  : ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಕೆಲವೇ ದಿನಗಳಲ್ಲಿ ಪ್ರಸಾರ ಆಗಲಿದೆ. ಬಿಗ್ ಬಾಸ್ ಹಿನ್ನೆಲೆಯಲ್ಲಿ ಅನೇಕ ಸೀರಿಯಲ್ ಟೈಮಿಂಗ್ ಬದಲಾಗಿದೆ. ಸೋಮವಾರದಿಂದ ಬದಲಾದ ಸಮಯದಲ್ಲಿ ಸೀರಿಯಲ್ ಪ್ರಸಾರ ಆಗಲಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12)ಕ್ಕೆ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗ್ತಾರೆ ಅನ್ನೋದು ಒಂದ್ಕಡೆ ಚರ್ಚೆ ಆಗ್ತಿದ್ರೆ, ಇನ್ನೊಂದು ಕಡೆ ಗ್ರ್ಯಾಂಡ್ ಓಪನಿಂಗ್ ನಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಬಿಗ್ ಬಾಸ್ ಬರ್ತಿದೆ ಅಂದ್ರೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಸೀರಿಯಲ್ ಗೆ ಕುತ್ತು ಬಂತು ಅಂದೇ ಅರ್ಥ. ಈಗಾಗಲೇ ಕಲರ್ಸ್ ಕನ್ನಡ ಕರಿಮಣಿ ಸೀರಿಯಲ್ ಮುಗಿಸಿದ್ದು, ದೃಷ್ಟಿಬೊಟ್ಟಿನ ಕೊನೆ ಎಪಿಸೋಡ್ ಗಳು ಪ್ರಸಾರವಾಗ್ತಿವೆ. ಇದಲ್ಲದೆ ಯಜಮಾನ ಸೀರಿಯಲ್ ಕೂಡ ಮುಕ್ತಾಯದ ಹಂತದಲ್ಲಿದೆ. ಈಗ ಕಲರ್ಸ್ ಕನ್ನಡ ಸೀರಿಯಲ್ ಪ್ರೇಮಿಗಳು ತಮ್ಮ ನೆಚ್ಚಿನ ಸೀರಿಯಲ್ ನೋಡುವ ಟೈಂ ಬದಲಿಸಿಕೊಳ್ಳಬೇಕಾಗಿದೆ. ಕೆಲ ಸೀರಿಯಲ್ಗಳನ್ನು ಒಟ್ಟಿಗೆ ಸೇರಿಸಿ ಮಹಾಸಂಗಮದ ಹೆಸರಿನಲ್ಲಿ ಒಂದ ಗಂಟೆ ಸೀರಿಯಲ್ ಓಡಿಸ್ತಿದೆ. ಇದೇ ಸೆಪ್ಟೆಂಬರ್ 22 ರಿಂದ ನವರಾತ್ರಿ ಶುರುವಾಗುವ ಕಾರಣ ಸೋಮವಾರದಿಂದ ಕಲರ್ಸ್ ಕನ್ನಡ ಸೀರಿಯಲ್ ಟೈಂ ಟೇಬಲ್ ನಲ್ಲಿ ಸಾಕಷ್ಟು ಬದಲಾವಣೆ ಆಗ್ತಿದೆ. ಅದ್ರ ಅಪ್ಡೇಟ್ ಇಲ್ಲಿದೆ.

ಕಲರ್ಸ್ ಕನ್ನಡದಲ್ಲಿ ಸೀರಿಯಲ್ ಟೈಂ ಬದಲಾವಣೆ : ಕಳೆದ ಒಂದು ವಾರದಿಂದ ಯಜಮಾನ ಹಾಗೂ ರಾಮಾಚಾರಿ ಮಿಲನ ನಡೆಯುತ್ತಿದೆ. ಇಷ್ಟು ದಿನ ಮಹಾ ಮಿಲನ ರಾತ್ರಿ 9.30ಕ್ಕೆ ಪ್ರಸಾರ ಆಗ್ತಿತ್ತು. ಇನ್ಮುಂದೆ ಮಹಾ ಮಿಲನ ಸಂಜೆ 6 ಗಂಟೆಗೆ ಪ್ರಸಾರ ಆಗಲಿದೆ. ಮಹಾಮಿಲನದಲ್ಲಿ ರಾಮಾಚಾರಿ ಹಾಗೂ ಯಜಮಾನ ಕಲಾವಿದರು ಒಂದಾಗಿ ಕಾಣಿಸಿಕೊಳ್ತಿದ್ದಾರೆ. ಚಾರು ಸೀಮಂತವನ್ನು ರಾಘು ಹಾಗೂ ಝಾನ್ಸಿ ಮಾಡ್ತಿದ್ರೆ ಅದನ್ನು ತಪ್ಪಿಸಲು ಪಲ್ಲವಿ – ರುಕ್ಮಿಣಿ ಪ್ರಯತ್ನ ನಡೆಸಿದ್ರು. ಆದ್ರೆ ಎಲ್ಲ ಯಡವಟ್ಟಾಗಿದ್ದು, ರುಕ್ಮಿಣಿ ಬಣ್ಣ ಬಯಲಾಗಿದೆ. ಸತ್ತಿದ್ದು ರಾಮಾಚಾರಿ ಅಲ್ಲ, ಕೃಷ್ಣ ಎಂಬುದು ಗೊತ್ತಾಗಿದೆ. ರುಕ್ಮಿಣಿ ಸಿಕ್ಕಿ ಬಿದ್ದಿದ್ದಾಳೆ. ಇನ್ನು ಯಜಮಾನ ಸೀರಿಯಲ್ ನಲ್ಲಿ ಝಾನ್ಸಿ, ರಾಘುಗೆ ಹತ್ತಿರವಾಗ್ತಿದ್ದಾಳೆ.

Amruthadhaare Serial: ‘ನಾವೊಂದು ಬಗೆದರೆ ದೈವ ಇನ್ನೊಂದು ಬಗೆದಂತೆ’-ತಪ್ಪು ಮಾಡ್ತೀನಿ ಅಂತಿದ್ದ ಭೂಮಿಗೆ ವಿಧಿ ಟ್ವಿಸ್ಟ್

ವಾರಪೂರ್ತಿ ನಂದಗೋಕುಲ ಮಹಾ ಸಂಚಿಕೆ ಪ್ರಸಾರ : ಪ್ರತಿ ದಿನ 9 ಗಂಟೆಗೆ ಪ್ರಸಾರ ಆಗ್ತಿದ್ದ ನಂದಗೋಕುಲ ಸೋಮವಾರದಿಂದ 9 ರಿಂದ 10 ಗಂಟೆಯವರೆಗೆ ಪ್ರಸಾರವಾಗಲಿದೆ. ಕಲರ್ಸ್ ಕನ್ನಡ ನಂದಗೋಕುಲ ಒಂದು ಗಂಟೆಗಳ ಮಹಾಸಂಚಿಕೆ ಹೆಸರಿನಲ್ಲಿ ಸೀರಿಯಲ್ ಪ್ರಸಾರ ಮಾಡ್ತಿದೆ. ನಂದಗೋಕುಲದಲ್ಲಿ ನಂದನ ಕುಟುಂಬ ಮಡಿಕೇರಿ ಟ್ರಿಪ್ ನಲ್ಲಿದೆ. ಮೀನಾ, ಹನಿಮೂನ್ ಹಠ ಹಿಡಿದ್ರೆ ನಂದ, ಫ್ಯಾಮಿಲಿ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದಾನೆ. ಬರೀ ನಂದನ ಕುಟುಂಬ ಮಾತ್ರವಲ್ಲ ಅವನ ಶತ್ರು ಕುಟುಂಬ ಕೂಡ ಈಗ ಮಡಿಕೇರಿ ಸೇರಿದ್ದು, ಸೀರಿಯಲ್ ಮತ್ತಷ್ಟು ಮಜವಾಗಿದೆ.

ನವಶಕ್ತಿ ನವರಾತ್ರಿ : ಸೆಪ್ಟೆಂಬರ್ 22 ರಿಂದ ನವರಾತ್ರಿ ಶುರು ಆಗ್ತಿರುವ ಕಾರಣ ಕಲರ್ಸ್ ಕನ್ನಡ ನವಶಕ್ತಿ ನವರಾತ್ರಿ ಕಾರ್ಯಕ್ರಮ ಶುರು ಮಾಡ್ತಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 10 ಗಂಟೆಗೆ ಕಾರ್ಯಕ್ರಮ ಪ್ರಚಾರ ಆಗಲಿದೆ.

Amruthadhaare Serial: ದಿಯಾ ಬೇಬಿ ಅಸಲಿ ಮುಖ ಬಯಲಾಯ್ತು! ಜಯದೇವ್‌ಗೆ ಈಗ ಐತಿ ಮಾರಿಹಬ್ಬ!

ಶುರುವಾಗಲಿದೆ ಬಿಗ್ ಬಾಸ್ ಅಬ್ಬರ : ರಿಯಾಲಿಟಿ ಶೋ ರಾಜ ಎಂದೇ ಪ್ರಸಿದ್ಧಿ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ರಂದು ನಡೆಯಲಿದೆ. ಸಂಜೆ 6 ಗಂಟೆಯಿಂದ ಕಾರ್ಯಕ್ರಮ ಶುರುವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ. ಬಿಗ್ ಬಾಸ್ ಗೆ ಯಾವೆಲ್ಲ ಸೆಲೆಬ್ರಿಟಿಗಳು ಹೋಕ್ತಾರೆ ಎನ್ನುವ ಲೆಕ್ಕಾಚಾರ ಸದ್ಯಕ್ಕೆ ನಡೆಯುತ್ತಿದೆ.