Annayya Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಮನು ಪೆದ್ದ, ಎಲ್ಲರೂ ಮೋಸದಿಂದ ಮದುವೆ ಮಾಡಿದರು ಅಂತ ರಾಣಿಗೆ ಗೊತ್ತಾಗಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಪಾರು ವಿರುದ್ಧ ರಾಣಿ ಕೂಗಿದ್ದಾಳೆ. ಯಾಕೆ?
ಅಣ್ಣಯ್ಯ ಧಾರಾವಾಹಿಯಲ್ಲಿ ( Zee Kannada Annayya Serial ) ಎಲ್ಲರೂ ಮೋಸದಿಂದ ಪೆದ್ದ ಮನು ಜೊತೆ ಮಾರಿಗುಡಿ ಶಿವು ತಂಗಿ ರಾಣಿ ಮದುವೆ ಮಾಡಿದ್ದಾರೆ. ಮದುವೆಯಾದ ದಿನವೇ ಮನುಗೆ ಆರೋಗ್ಯ ಸರಿ ಇಲ್ಲ ಅಂತ ಶಿವು ಮನೆಯವರಿಗೆ ಗೊತ್ತಾಗಿದೆ. ಇನ್ನು ಮರುದಿನವೇ ಮನು ತಾಯಿ ರಾಣಿ ಬಳಿ ಬಂದು, “ನನ್ನ ಮಗ ಶತದಡ್ಡ, ಅವನಿಗೆ ಪ್ರಪಂಚ ಜ್ಞಾನ ಇಲ್ಲ. ನಿನ್ನ ಮದುವೆಯಾದ್ಮೇಲೆ ಅವನು ಸರಿ ಹೋಗ್ತಾನೆ, ಈ ಮನೆ ಸಮಸ್ಯೆ ಬಗೆಹರಿಯುತ್ತದೆ ಅಂತ ಸ್ವಾರ್ಥದಿಂದ ಸುಳ್ಳು ಹೇಳಿ ಮದುವೆ ಮಾಡಿದೆ, ಕ್ಷಮಿಸು” ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ.
ಮದುವೆಯಾಗಿ ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದ ರಾಣಿಗೆ ಆಕಾಶ ತಲೆ ಮೇಲೆ ಬಿದ್ದ ಹಾಗೆ ಆಗಿದೆ. ಅವಳಿಗೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಈಗ ಅವಳು ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ. ರಾಣಿ ಹಾಗೂ ಮನು ತಾಯಿ ಮಾತನಾಡಿರೋದು ಪಾರು ಕಿವಿಗೆ ಬಿದ್ದಿದೆ. “ನಿನಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು, ಅಣ್ಣನ ಬಳಿ ಹೇಳೋಣ, ಬಾ” ಎಂದಾಗ ರಾಣಿ, “ಬೇಡ” ಎಂದು ತಿರುಗಿ ಬಿದ್ದಿದ್ದಾಳೆ. ಬಹುಶಃ ಅಣ್ಣನಿಗೆ ಬೇಸರ ಆಗುತ್ತದೆ ಅಂತ ಈ ಥರ ಹೇಳಿರಬಹುದು. ಈ ಎಪಿಸೋಡ್ ಬಗ್ಗೆ ವೀಕ್ಷಕರು ಏನು ಹೇಳಿದ್ದಾರೆ?
ವೀಕ್ಷಕರು ಈ ಎಪಿಸೋಡ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಏನಂದ್ರು?
- ಮನುನನ್ನು ರಾಣಿ ಸರಿಮಾಡ್ತಾಳೆ.
- ಮನು ಬಿಟ್ಟು ರಾಣಿ ಎಲ್ಲಿಗೂ ಹೋಗಲ್ಲ, ಇಲ್ಲೇ ಇದ್ದು ಎಲ್ಲವನ್ನೂ ಸರಿ ಮಾಡ್ತಾಳೆ.
- ರಾಣಿ ಅಕ್ಕ ಎಲ್ಲವನ್ನೂ ಸರಿ ಮಾಡ್ತಾಳೆ, ಸುಮತಿ ಅಮ್ಮ ನೀವು ಏನು ಚಿಂತೆ ಮಾಡಬೇಡಿ ಮನುಗೆ ತಕ್ಕ ಜೋಡಿನೇ ನಮ್ಮ ರಾಣಿ ಅಕ್ಕ. ಮನು + ರಾಣಿ= ಮಣಿ
- ರಾಣಿಗೆ ಗಂಡನ ಮನೆ ಜವಾಬ್ದಾರಿ ಜೊತೆ, ಗಂಡನನ್ನು ಸರಿಮಾಡಿಕೊಳ್ಳೋ ಜವಾಬ್ದಾರಿಯೂ ಇದೆ.
- ಪಾಪ ನಮ್ ರಾಣಿ, ಆಸೆಯಿಂದ ರಾಜಕುಮಾರನನ್ನು ಮದುವೆ ಆಗುತ್ತಿದ್ದೀನಿ ಅಂತ ತುಂಬ ಸಡಗರ ಸಂಭ್ರಮದಿಂದ ಇದ್ದು, ಈಗ ನೋಡಿದರೆ ಬಹಳ ಬೇಜಾರು ಆಗುತ್ತದೆ.
- ನಮ್ಮ ರಾಣಿ ಈಗಲೇ ಅವರ ಅಣ್ಣನಿಗೆ ಏನೂ ಹೇಳಲ್ಲ. ರಾಣಿ ಮನುನನ್ನು ಸರಿ ಮಾಡ್ತಾಳೆ, ಮನೆಯಲ್ಲಿ ಇರುವವರಿಗೆ ಬುದ್ದಿ ಕಲಿಸುತ್ತಾರೆ.
- ಅಯ್ಯೋ... ತುಂಬಾ ಫೀಲ್ ಆಗಬೇಡಿ.. ನಮ್ಮ ರಾಣಿ ಅವಳು... ಅವಳಿಗೆ ಕೆಟ್ಟವನು ಸಿಕ್ಕಿಲ್ಲ. ಪೆದ್ದ ಅಷ್ಟೇ... ಎಲ್ಲ ಸರಿ ಹೋಗುತ್ತದೆ
- ಸೀರಿಯಲ್ ಅಲ್ಲಿ ಒಂದೇ ಅಲ್ಲದೆ ನಿಜ ಜೀವನದಲ್ಲಿ ಸಹ ಹೀಗೆ ಸುಳ್ಳು ಹೇಳಿ ಮದುವೆ ಮಾಡ್ತಾರೆ
- ಆಗೋದೆಲ್ಲ ಒಳ್ಳೆಯದಕ್ಕೆ ಅಂತಾರೆ.. ಮುಗ್ಧ ನಮ್ ರಾಣಿ ಇನ್ನುಮೇಲೆ ಬದಲಾಗಿ ರೌಡಿ ಬೇಬಿ ಆಗುತ್ತಾಳೆ
- ಮನೆ ಮಗಳು ಫಿಲಂ ತರ ರಾಣಿ ಎಲ್ಲರನ್ನು ಬುದ್ಧಿಕಲಿಸುತ್ತಾಳೆ
- ನಮ್ಮ ಪಾರು ಡಾಕ್ಟರ್ ಎಲ್ಲವನ್ನೂ ಮತ್ತೆ ಎಲ್ಲರನ್ನೂ ಸರಿ ಮಾಡೇ ಮಾಡುತ್ತಾಳೆ
- ರಾಣಿ ಯಾರು? ತಂಗಿ ಶಿವಣ್ಣ ತಂಗಿ
- ಉದ್ಧಾರ ಮಾಡ್ತಾಳೆ ಮನುನನ್ನು ರಾಣಿ ಆದ್ರೂ ರಾಣಿಯನ್ನು ನೋಡಿದ್ರೆ ಬೇಜಾರು ಆಗುತ್ತದೆ.
- ಮನುಗೆ ಮಾತ್ರೆ ಕೊಟ್ಟು, ಈ ಥರ ಆಗಿದೆ ಅಂದ್ರೆ ಮತ್ತೆ ಸರಿ ಹೋಗ್ತಾನೆ. ರಾಣಿಯೇ ಸರಿ ಮಾಡ್ತಾಳೆ.
- ರಾಣಿ ಅಕ್ಕ, ಅರ್ಧಕ್ಕೆ ಬಿಟ್ಟು ಹೋಗುದಿಲ್ಲ. ರಾಣಿ ಅಕ್ಕ ಎಲ್ಲರು ಮುಂದೆಯೂ ಜೀವನ ಮಾಡಿ ತೋರಿಸುತ್ತಾಳೆ.
- ರಾಣಿ ಮನುನನ್ನು ಸರಿ ಮಾಡ್ತಾಳೆ. ನಮ್ಮ ಮನು-ರಾಣಿ ಮನು ಜೋಡಿ ಸರಿ ಆಯ್ತು, ಮುಂದೆ ವಿಲನ್ ಆಟ ನಡೆಯೋದಿಲ್ಲ.
- ಸತ್ಯ ಬೇಗ ಗೊತ್ತಾಗಿದ್ದು ಒಳ್ಳೆದಾಯ್ತು ಸರಿ ಮಾಡೋಕೆ, ಅವಕಾಶ ಇದೆ ಮನುನನ್ನು ಕಾಪಾಡು ರಾಣಿ.
- ಹೇಳ್ಬೇಕಾಗಿರೋದನ್ನು ಮೊದಲೇ ಹೇಳ್ಬೇಕಿತ್ತು. ಆಗ ಅವಳ ನಿರ್ಧಾರ ಹೇಳ್ತಿದ್ಲು. ಎಲ್ಲ ಮುಗಿದ್ಮೇಲೆ ನಿನ್ನ ನಿರ್ಧಾರ ಅಂದ್ರೆ. ಪಾಪ ಏನ್ಮಾಡ್ತಾಳೆ ರಾಣಿ.
- ಅತ್ತಿಗೆ ನಾದಿನಿ ಅಂದರೆ ಈ ಥರ ಇರಬೇಕು
- ಅಯ್ಯೋ ಮನು ಪೆದ್ದ ಅಷ್ಟೇ, ಕೆಟ್ಟವನಲ್ಲ. ಪೆದ್ದರ ಜೊತೆ ಜೀವನ ಮಾಡಬಹುದು. ಕೆಟ್ಟವರ ಜೊತೆ ಜೀವನ ಮಾಡೋದು ಕಷ್ಟ. ರಾಣಿ ಎಲ್ಲವನ್ನೂ, ಎಲ್ಲರನ್ನೂ ಸರಿ ಮಾಡುತ್ತಾಳೆ.
- ಪಾಪ ರಾಣಿ, ಒಳ್ಳೆಯ ಮನಸಿಗೆ ಕಷ್ಟ ನೋವು ತುಂಬನೇ ಸಿಗುತ್ತೆ, ಆದರೆ ಅದನ್ನು ಇಷ್ಟ ಪಟ್ಟು ಸ್ವೀಕರಿಸಿ ಎದುರಿಸಿದರೆ ಎಲ್ಲವೂ ಸುಖದಲ್ಲಿ ಅಂತ್ಯವಾಗುತ್ತೆ.
- ಕೆಟ್ಟ ಚಟ ಇರೋ ಗಂಡನಿಗಿಂತ ಅಮಾಯಕ ಒಳ್ಳೆವ ಮನುನೇ ಸರಿಯಾದ ಜೋಡಿ ರಾಣಿ
