Amruthadhaare Kannada Serial Update: 'ಅಮೃತಧಾರೆ' ಧಾರಾವಾಹಿಯಲ್ಲಿ ಮಗಳು ಸಿಕ್ಕ ಖುಷಿಯಲ್ಲಿ ಗೌತಮ್‌ ಮುಠ್ಠಾಳ ಕೆಲಸ ಮಾಡಿದ್ದಾನೆ. ಇದರಿಂದ ಅವನಿಗೆ ದೊಡ್ಡ ನಷ್ಟ ಆಗಲಿದೆ. 

'ಅಮೃತಧಾರೆ' ಧಾರಾವಾಹಿಯಲ್ಲಿ ( Amruthadhare Serial ) ಗೌತಮ್‌ಗೆ ಮಗಳು ಸಿಕ್ಕಿದ್ದಾಳೆ. ಡಿಎನ್‌ಎ ಪರೀಕ್ಷೆಯಲ್ಲಿ ಗೌತಮ್‌ ಮಗು ಎಂದು ಸಾಬೀತಾದರೆ ಅವನು ಅವಳನ್ನು ಮನೆಗೆ ಕರೆದುಕೊಂಡು ಬರಬಹುದು. ಇಷ್ಟು ದಿನ ಮಗಳು ಸಿಕ್ಕಿದ್ರೆ ಸಾಕು ಅಂತ ಪ್ರಾರ್ಥಿಸುತ್ತಿದ್ದ ಗೌತಮ್‌, ಈಗ ಮುಠ್ಠಾಳ ಮಾಡೋ ಕೆಲಸ ಮಾಡಿದ್ದಾನೆ.

ಮಗುವನ್ನು ಎತ್ತೊಯ್ದ ಜಯದೇವ್!‌

ಭೂಮಿ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಳು. ಮೊದಲು ಅವಳು ಮಗಳಿಗೆ ಜನ್ಮ ಕೊಟ್ಟಿದ್ದಳು. ಈ ಹಿಂದೆ ಸ್ಕ್ಯಾನಿಂಗ್‌ನಲ್ಲಿಯೂ ಅವಳಿ ಮಕ್ಕಳಿರೋದು ಗೊತ್ತಾಗಲಿಲ್ಲ. ಡಾ ಕರ್ಣ, ಭೂಮಿಗೆ ಹೆರಿಗೆ ಮಾಡಿಸಿದ್ದನು. ಈಗ ತಾನೇ ಹುಟ್ಟಿದ ಮಗುವನ್ನು ನರ್ಸ್‌ ಕ್ಲೀನ್‌ ಮಾಡಲು ತೆಗೆದುಕೊಂಡು ಹೋಗಿದ್ದರು. ಆಗ ಗೌತಮ್‌ ಮಲಸಹೋದರ ಜಯದೇವ್‌ ಬಂದು ಆ ಮಗುವನ್ನು ಎತ್ತೊಯ್ದಿಲ್ಲದೆ ಕಾಡಿನಲ್ಲಿ ಎಸೆದಿದ್ದನು.

ಒಂದೇ ಮಗ ಅಂತ ನಂಬಿಸಿರೋ ಗೌತಮ್!

ರಾತ್ರಿ ಕಾಡಿನಲ್ಲಿ ಎಷ್ಟೇ ಹುಡುಕಿದರೂ ಕೂಡ ಮಗಳು ಕಾಣಲಿಲ್ಲ. ಆಗ ಅವನು ಹಾಗೆಯೇ ನಿರಾಸೆಯಿಂದ ಆಸ್ಪತ್ರೆಗೆ ಹೋಗಿದ್ದನು. ಅಲ್ಲಿ ಭೂಮಿ ಇನ್ನೊಂದು ಮಗುವಿಗೆ ಜನ್ಮ ನೀಡಿದ್ದಳು. ಎರಡನೇ ಬಾರಿ ಹೆರಿಗೆಯಾದಾಗ ಮಗ ಇದ್ದನು. ಇದು ಎಲ್ಲರಿಗೂ ಶಾಕ್‌ ನೀಡಿತ್ತು. ಭೂಮಿಗೆ ಒಂದೇ ಮಗು ಹುಟ್ಟಿದೆ ಅಂತ ಗೌತಮ್‌ ಎಲ್ಲರಿಗೂ ನಂಬಿಸಿದ್ದನು. ಆದರೆ ಅವಳಿ ಮಕ್ಕಳಾಗಿರೋದು ಶಕುಂತಲಾಗೂ, ಅವಳ ಮಗ ಜಯದೇವ್‌ಗೆ ಮಾತ್ರ ಗೊತ್ತಿತ್ತು.

ಏನು ಮಾಡೋಕೂ ಹೇಸದ ತಾಯಿ-ಮಗ

ಆಸ್ತಿಗೋಸ್ಕರ ಈ ತಾಯಿ-ಮಗ ಯಾರ ಪ್ರಾಣವನ್ನು ಬೇಕಿದ್ರೂ ತೆಗೆಯುತ್ತಾರೆ. ಈ ವಿಷಯ ಗೌತಮ್‌ಗೆ ಗೊತ್ತೇ ಇಲ್ಲ. ಈಗ ಭೂಮಿ ಹಾಗೂ ಅವಳ ಮಗುವಿನ ಪ್ರಾಣ ತೆಗೆಯೋದು ಇವರ ಮುಂದಿನ ಯೋಜನೆ. ಹೀಗಿರುವಾಗ ಗೌತಮ್‌ ಅವರಿಗೆ ಇನ್ನೊಂದು ಸುಳಿವು ಕೊಟ್ಟಿದ್ದಾನೆ.

ಶಕುಂತಲಾಗೆ ಇದ್ದ ವಿಷಯ ಹೇಳಿರೋ ಗೌತಮ್!‌

“ನನಗೆ ಮಗಳು ಸಿಕ್ಕಿದ್ದಾಳೆ, ಅವಳೀಗ ಅನಾಥಾಶ್ರಮದಲ್ಲಿದ್ದಾಳೆ. ಇನ್ನು ಒಂದು ವಾರಕ್ಕೆ ಡಿಎನ್‌ಎ ರಿಪೋರ್ಟ್‌ ಬರುವುದು, ಆಗ ನನ್ನ ಮಗಳು ಅಂತ ಸಾಬೀತಾದರೆ ಮಗಳು ನನ್ನ ಜೊತೆ ಬರಬಹುದು. ಯಾವಾಗ ಮಗಳನ್ನು ಮನೆಗೆ ಕರೆದುಕೊಂಡು ಬರ್ತೀನಿ ಅಂತ ಕಾಯ್ತಿದೀನಿ” ಅಂತ ಗೌತಮ್‌ ಶಕುಂತಲಾಗೆ ಹೇಳಿದ್ದಾನೆ.

ಶಕುಂತಲಾ ಏನು ಮಾಡ್ತಾಳೆ?

ಗೌತಮ್‌ ಮಗಳು ಬದುಕಿರೋದು ಶಕುಂತಲಾಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಯಾವ ಅನಾಥಾಶ್ರಮದಲ್ಲಿ ಆ ಮಗು ಇದೆ ಅಂತ ಅವಳು ತಿಳಿದುಕೊಳ್ಳೋ ಪ್ರಯತ್ನದಲ್ಲಿದ್ದಾಳೆ. ಒಂದು ವೇಳೆ ಆ ಮಗು ಇರೋ ಅನಾಥಾಶ್ರಮದ ಸುಳಿವು, ಸಿಕ್ಕಿ, ಶಕುಂತಲಾ ಅಲ್ಲಿಗೆ ಹೋಗಿ ಡಿಎನ್‌ಎ ರಿಪೋರ್ಟ್‌ ಬದಲಾಯಿಸಿದ್ರೂ ಆಶ್ಚರ್ಯವಿಲ್ಲ. ರಿಪೋರ್ಟ್‌ ಬರೋವರೆಗೆ ಮನೆಯಲ್ಲಿ ಯಾರಿಗೂ ಈ ವಿಷಯ ಹೇಳಬೇಡ ಅಂತ ಆನಂದ್‌ ಅಷ್ಟು ಚೆನ್ನಾಗಿ ಹೇಳಿದರೂ ಕೂಡ ಈ ಗೌತಮ್‌ ಕೇಳಿಲ್ಲ. ಮಗುವಿನ ವಿಷಯ ಗೊತ್ತಾದ್ಮೇಲೆ ಶಕುಂತಲಾ ಸುಮ್ಮನಿರೋದು ಡೌಟ್.‌ ಮಗಳು ಹುಟ್ಟಿರೋದು, ಕಿಡ್ನ್ಯಾಪ್‌ ಆಗಿರೋ ವಿಷಯ ಗೊತ್ತಾದರೆ ಅಲ್ಲಿಗೆ ಭೂಮಿ-ಗೌತಮ್‌ ಸಂಬಂಧದ ಮಧ್ಯೆ ಬಿರುಕು ಮೂಡೋದು ಗ್ಯಾರಂಟಿ.

ಧಾರಾವಾಹಿ ಕಥೆ ಏನು?

ಗೌತಮ್‌ ಹಾಗೂ ಭೂಮಿಕಾ ಮನೆಯವರ ಖುಷಿಗೋಸ್ಕರ ಮದುವೆ ಆಗ್ತಾರೆ. ಇವರಿಬ್ಬರಿಗೂ ಮದುವೆ ಆಗೋದು, ಮಕ್ಕಳಾಗೋದು ಶಕುಂತಲಾಗೆ ಇಷ್ಟವಿಲ್ಲ. ಇಡೀ ಆಸ್ತಿ ತನ್ನ ಮಕ್ಕಳಿಗೆ ಸಿಗಬೇಕು ಅಂತ ಅವಳು ಬಯಸ್ತಿದ್ದಾಳೆ. ಹೀಗಾಗಿ ಅವಳು ಮುಂದೆ ಏನ್‌ ಮಾಡ್ತಾಳೆ ಅಂತ ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಶಕುಂತಲಾ- ವನಿತಾ ವಾಸು

ಜಯದೇವ್‌- ರಾಣವ್‌