- Home
- Entertainment
- TV Talk
- 'ಗೌರಿ ಧಾರಾವಾಹಿ' ಹೀರೋ ಆದ ಕರಣ್ ಕೆ ಆರ್ Amruthadhaare Serial ಬಿಡ್ತಾರಾ? ಅಲ್ಲಿ ಪಾರ್ಥನ ಸಾವಾಗಲಿದೆಯಾ?
'ಗೌರಿ ಧಾರಾವಾಹಿ' ಹೀರೋ ಆದ ಕರಣ್ ಕೆ ಆರ್ Amruthadhaare Serial ಬಿಡ್ತಾರಾ? ಅಲ್ಲಿ ಪಾರ್ಥನ ಸಾವಾಗಲಿದೆಯಾ?
'ಅಮೃತಧಾರೆ' ಧಾರಾವಾಹಿಯಲ್ಲಿ ಈಗ ಪಾರ್ಥ ಆಗಿ ಜನರ ಮನಸ್ಸು ಗೆದ್ದಿರುವ ನಟ ಕರಣ್ ಕೆ ಆರ್ ಅವರು ಈ ಹಿಂದೆ 'ಅರಸಿ' ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸುತ್ತಿದ್ದರು. ಈಗ ಅವರು ಮತ್ತೆ ಹೀರೋ ಆಗಿದ್ದಾರೆ. ಹೊಸ ಧಾರಾವಾಹಿಯ ಹೀರೋ ಆಗಿದ್ದು, ಪ್ರೋಮೋ ಕೂಡ ರಿಲೀಸ್ ಆಗಿದೆ.

“ದುಡ್ಡಿದ್ರೆ ದುನಿಯಾ ಅಂದ್ಕೊಂಡಿರೋ ಗೌತಮಿ. ಸಂಬಂಧಗಳೇ ಸರ್ವಸ್ವ ಅಂತ ನಂಬಿರೋ ಗೌರಿ. ಅಕ್ಕತಂಗಿಯರ ಬದುಕಿನ ಹಾವು ಏಣಿ ಆಟದ ಕಥೆ. ಗೌರಿ, ಶೀಘ್ರದಲ್ಲಿ…” ಎಂದು ಜೀ ಪವರ್ ಟಿವಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದೆ. ಈ ಧಾರಾವಾಹಿಯನಲ್ಲಿ ನಟಿ ಸಿರಿ, ಕಾವ್ಯಶ್ರೀ ಗೌಡ ಅವರು ನಟಿಸುತ್ತಿದ್ದಾರೆ.
ಕಾವ್ಯಶ್ರೀ ಗೌಡ ಅವರು ಹಳ್ಳಿ ಹುಡುಗಿಯಾಗಿದ್ದು, ಅಕ್ಕನಿಗೋಸ್ಕರ ಏನು ಬೇಕಿದ್ರೂ ಮಾಡೋಕೆ ರೆಡಿ ಆಗುತ್ತಾಳೆ. ಆದರೆ ಅವಳ ಅಕ್ಕ ಮಾತ್ರ ಹಣಕ್ಕಾಗಿ ಏನು ಬೇಕಿದ್ರೂ ಮಾಡ್ತಾಳೆ. ಅವಳಿಗೆ ತಂಗಿ ಕಷ್ಟ ಗೊತ್ತೇ ಆಗೋದಿಲ್ಲ. ಶ್ರೀಮಂತ ಮನೆಯಲ್ಲಿ ಕಾವ್ಯಶ್ರೀ ಮನೆ ಕೆಲಸದವರ ಪಾತ್ರ ಮಾಡ್ತಿದ್ರೆ, ಅದೇ ಮನೆಗೆ ಅವಳ ಅಕ್ಕ ಸುಳ್ಳು ಹೇಳಿಕೊಂಡು ಸೊಸೆಯಾಗಿ ಎಂಟ್ರಿ ಕೊಡ್ತಾಳೆ. ಈ ಧಾರಾವಾಹಿ ಕಥೆ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಧಾರಾವಾಹಿಯಲ್ಲಿ ಕಾವ್ಯಶ್ರೀ ಗೌಡಗೆ ಜೋಡಿಯಾಗಿ ಕರಣ್ ನಟಿಸುತ್ತಿದ್ದಾರೆ. ಜೀ ಕನ್ನಡ ಹಾಗೂ ಜೀ ಪವರ್ ಎರಡೂ ಕೂಡ ಒಂದೇ ಮಾಲೀಕತ್ವದ ವಾಹಿನಿಗಳು. ಜೀ ಪವರ್ ಹೊಸದಾಗಿ ಶುರುವಾಗುತ್ತಿದೆ. ಹೀಗಾಗಿ ಕರಣ್ ಅವರು ʼಗೌರಿʼ ಧಾರಾವಾಹಿಯಲ್ಲಿ ಹೀರೋ ಆಗಿದ್ದಾರೆ.
ಗೌರಿ ಧಾರಾವಾಹಿಯಲ್ಲಿ ಹೀರೋ ಆಗಿರೋದಿಕ್ಕೆ ಕರಣ್ ಅವರು ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸ್ತಾರಾ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ. ಕನ್ನಡದಲ್ಲಿ ಹೀರೋ ಅಥವಾ ಹೀರೋಯಿನ್ ಆದವರು ಇನ್ನೊಂದು ಧಾರಾವಾಹಿಯಲ್ಲಿ ನಟಿಸೋದಿಲ್ಲ. ಇದು ಸದ್ಯದ ಅಲಿಖಿತ ನಿಯಮ. ಈ ಹಿಂದೆ ಓರ್ವ ನಟಿ ಏಕಕಾಲಕ್ಕೆ ಎರಡು ಮೂರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಒಂದೇ ಮಾಲೀಕತ್ವದ ಎರಡು ಧಾರಾವಾಹಿ ಆಗಿದ್ದಕ್ಕೆ ಎರಡೂ ಧಾರಾವಾಹಿಗಳಲ್ಲಿ ನಟಿಸಿದರೂ ಆಶ್ಚರ್ಯವಿಲ್ಲ.
ಅಮೃತಧಾರೆ ಧಾರಾವಾಹಿಯಲ್ಲಿ ಈಗ ಭೂಮಿ ಹೋಗುತ್ತಿರುವ ಕಾರ್ ಎಕ್ಸಿಡೆಂಟ್ ಆಗುತ್ತದೆಯೇ ಇಲ್ಲವೇ ಎಂದು ಕಾದು ನೋಡಬೇಕಿದೆ. ಆ ಕಾರ್‌ನಲ್ಲಿ ಪಾರ್ಥ ಡ್ರೈವರ್ ಆಗಿದ್ದನು. ಕಾರ್ ಹಿಂದಿನ ಸೀಟ್‌ನಲ್ಲಿ ಭೂಮಿಕಾ ಹಾಗೂ ಅವಳ ಮಗ ಆಕಾಶ್ ಇದ್ದನು. ಈಗ ಕಾರ್ ಎಕ್ಸಿಡೆಂಟ್ ಆಗಿ ಪಾರ್ಥ ಮಾತ್ರ ಸಾಯುತ್ತಾನಾ ಎಂದು ಕಾದು ನೋಡಬೇಕಿದೆ. ಈ ರೀತಿ ಪಾರ್ಥನ ಪಾತ್ರ ಅಂತ್ಯ ಮಾಡಿದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲದಿಂದ ಕೂಡಿವೆ.