- Home
- Entertainment
- TV Talk
- Amruthadhaare: ಕಳೆದು ಹೋದಾಕೆ ಒಬ್ಬಳೇ ಮಗಳು- ಇಲ್ಲಿರೋದು ಇಬ್ಬರು ಮಕ್ಕಳು! ಅಸಲಿ ಪುತ್ರಿ ಯಾರು?
Amruthadhaare: ಕಳೆದು ಹೋದಾಕೆ ಒಬ್ಬಳೇ ಮಗಳು- ಇಲ್ಲಿರೋದು ಇಬ್ಬರು ಮಕ್ಕಳು! ಅಸಲಿ ಪುತ್ರಿ ಯಾರು?
ಅಮೃತಧಾರೆ ಧಾರಾವಾಹಿಯು ರೋಚಕ ತಿರುವು ಪಡೆದುಕೊಂಡಿದ್ದು, ಮಗಳು ಕಿಡ್ನಾಪ್ ಆದ ಸತ್ಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ. ಇದರ ನಡುವೆ ಗೌತಮ್‌ಗೆ ಅನಿರೀಕ್ಷಿತವಾಗಿ ಮತ್ತೊಂದು ಹೆಣ್ಣು ಮಗು ಸಿಕ್ಕಿದ್ದು, ಸ್ನೇಹಿತೆಯ ಬಳಿ ಇರುವ ಮಗು ಮತ್ತು ಈಗ ಸಿಕ್ಕ ಮಗುವಿನ ಪೈಕಿ ಅಸಲಿ ಮಗಳು ಯಾರು?

ರೋಚಕ ತಿರುವಿನಲ್ಲಿ ಸೀರಿಯಲ್
ಯಾರೂ ಊಹಿಸದ ರೋಚಕ ಟ್ವಿಸ್ಟ್ ಮೇಲೆ ಟ್ವಿಸ್ಟ್ನತ್ತ ಸಾಗಿದೆ ಅಮೃತಧಾರೆ ಸೀರಿಯಲ್ (Amruthadhaare Serial). ಮಗಳು ಕಿಡ್ನ್ಯಾಪ್ ಆಗಿರೋ ಸತ್ಯವನ್ನು ಗೌತಮ್ ಹೇಳಿಲ್ಲ ಎನ್ನುವ ಕಾರಣಕ್ಕೆ ಭೂಮಿಕಾ ಸಿಟ್ಟುಮಾಡಿಕೊಂಡು ಮನೆ ಬಿಟ್ಟು ಬಂದಿದ್ದಾಳೆ. ಇದೊಂದೇ ಕಾರಣನಾ ಅಥವಾ ಭೂಮಿಕಾ ಈ ಪರಿಯಲ್ಲಿ ಪತಿಯಿಂದ ದೂರವಾಗಲು ಇನ್ನೇನು ಕಾರಣನಾ ಎನ್ನೋದು ಇನ್ನಷ್ಟೇ ತಿಳಿಯಬೇಕಿದೆ.
ಸ್ನೇಹಿತೆ ಕಾವೇದಿ ಮನೆಯಲ್ಲಿ ಮಗಳು?
ಇದೇ ವೇಳೆಯಲ್ಲಿ ಭೂಮಿಕಾ ಸ್ನೇಹಿತೆ ಕಾವೇರಿ, ದತ್ತು ಪುತ್ರಿಯ ಬಗ್ಗೆ ಹೇಳಿದ್ದಳು. ಮಕ್ಕಳಿಲ್ಲದ ತನಗೆ ಮಗು ಸಿಕ್ಕಿರುವುದಾಗಿ ಹೇಳಿದ್ದಳು. ಆ ಸಮಯದಲ್ಲಿ ಖಂಡಿತವಾಗಿಯೂ ಇದು ಭೂಮಿಕಾ ಮತ್ತು ಗೌತಮ್ದ್ದೇ ಮಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಸೀರಿಯಲ್ ಪ್ರೇಮಿಗಳು ಕಮೆಂಟ್ಸ್ ಮಾಡಿದ್ದರು. ಇದೀಗ ಭೂಮಿಕಾ ಹೆಡ್ಮಿಸ್ ಆಗಿರೋ ಶಾಲೆಯ ಸಮೀಪವೇ ಆ ಸ್ನೇಹಿತೆ ಕೂಡ ಸಿಕ್ಕಿದ್ದರಿಂದ ಅವಳ ಮನೆಯಲ್ಲಿ ಇರುವುದು ಇವರ ಮಗುನೇ ಎನ್ನುವುದು ಕನ್ಫರ್ಮ್ ಎಂಬಂತಾಗಿತ್ತು.
ಈಗ ಮತ್ತೊಂದು ಟ್ವಿಸ್ಟ್
ಇದರ ನಡುವೆಯೇ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಪ್ಪ-ಅಮ್ಮನಿಗೆ ಬೇಡವಾಗಿ ಹೆಣ್ಣುಮಗಳೊಬ್ಬಳು ಗೌತಮ್ ಕೈ ಸೇರಿದ್ದಾಳೆ. ಮಗುವನ್ನು ಕರೆದುಕೊಂಡು ದಂಪತಿ ಗೌತಮ್ನ ಕಾರಿನಲ್ಲಿ ಬಂದಿದ್ದರು. ಅವರು ಬ್ಯಾಗ್ ಬಿಟ್ಟುಹೋದರು ಎನ್ನುವ ಕಾರಣಕ್ಕೆ ಗೌತಮ್ ವಾಪಸ್ ಬಂದು ಅದನ್ನು ಕೊಡಲು ಮುಂದಾದಾಗ ಆ ಮನೆಯ ಮುಂದೆ ಜನರು ಜಮಾಯಿಸಿದ್ದರು. ಕೊನೆಗೆ ಆ ದಂಪತಿ ತಮಗೆ ಬೇಡದಿರುವ ಮಗುವನ್ನು ಬಿಟ್ಟು ಹೋಗಿರುವುದಾಗಿ ಹೇಳಿದಾಗ, ಗೌತಮ್‌ಗೆ ತನ್ನ ಮಗಳೇ ನೆನಪಾಗಿದ್ದಾಳೆ.
ಪ್ರೊಮೋದಲ್ಲಿ ಕನ್ಫ್ಯೂಸ್?
ಈ ಪ್ರೊಮೋದಲ್ಲಿ ಕೂಡ ಈಕೆ ಗೌತಮ್ ಮಗಳು ಎನ್ನೋ ಅರ್ಥದಲ್ಲಿಯೇ ತೋರಿಸಲಾಗಿದೆ. ಆಗ ನಮಗೆ ಮಗು ಬೇಕಿತ್ತು, ಈಗ ಬೇಡ ಎಂದಿರೋ ದಂಪತಿ ಆಕೆಯನ್ನು ಬಿಟ್ಟು ಹೋಗಿದ್ದಾರೆ. ಆದರೆ ನಿಜವಾಗಿಯೂ ಇವಳೇ ಗೌತಮ್-ಭೂಮಿಕಾ ಮಗಳಾ ಎನ್ನುವ ಸಂದೇಹ ಪ್ರೊಮೋ ನೋಡಿದರೆ ತಿಳಿಯುತ್ತದೆ.
ಇರೋದು ಇಬ್ಬರು ಮಕ್ಕಳು
ಆದರೆ ಈಕೆಯಲ್ಲ, ಸ್ನೇಹಿತೆಯ ಮನೆಯಲ್ಲಿ ಇರುವ ಮಗುವೇ ಇವರ ಕಿಡ್ನ್ಯಾಪ್ ಆಗಿರೋ ಮಗಳು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಹೀಗೆ ಕಾಣೆಯಾಗಿರುವುದು ಒಬ್ಬಳು ಮಗಳು, ವೀಕ್ಷಕರನ್ನು ಕನ್ಫ್ಯೂಸ್ ಮಾಡಲು ಇಬ್ಬರು ಹೆಣ್ಣುಮಕ್ಕಳು! ಅಸಲಿ ಮಗಳು ಯಾರು ಅಥವಾ ಇಬ್ಬರೂ ಅಲ್ಲವೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್
ಒಟ್ಟಿನಲ್ಲಿ ಅಮೃತಧಾರೆ ಸೀರಿಯಲ್ ಹೀಗೆಯೇ ಸಾಗುತ್ತದೆ ಎಂದುಕೊಳ್ಳುವಾಗಲೇ ಪ್ರತಿಬಾರಿಯೂ ವೀಕ್ಷಕರು ಊಹಿಸದಂತ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಸಾಗಿದ್ದಾರೆ ನಿರ್ದೇಶಕರು. ಇದೇ ಕಾರಣಕ್ಕೆ ಟಿಆರ್ಪಿಯಲ್ಲಿಯೂ ಅಮೃತಧಾರೆ ಮುಂದಿದೆ.
ಭೂಮಿಕಾ ಮೇಲೆ ಕೋಪ
ಸದ್ಯ ಗೌತಮ್ ಮೇಲೆ ವಿನಾಕಾರಣ ಮುನಿಸಿಕೊಂಡಿರೋ ಭೂಮಿಕಾ ಕಂಡರೆ ವೀಕ್ಷಕರು ಉರಿದು ಬೀಳುತ್ತಿದ್ದಾರೆ. ಇವಳದ್ದು ಅತಿಯಾಯಿತು ಎನ್ನುತ್ತಿದ್ದಾರೆ. ಪತ್ನಿ ಮತ್ತು ಮಗನನ್ನು ನೋಡಲು ಗೌತಮ್ ಪಡುತ್ತಿರುವ ಕಷ್ಟ ವೀಕ್ಷಕರಿಗೆ ಅಸಹನೀಯವಾಗಿದೆ. ಆದರೆ ಇದೀಗ ಇನ್ನೊಬ್ಬ ಹೆಣ್ಣುಮಗಳು ಸಿಗುವ ಮೂಲಕ ಮತ್ತಷ್ಟು ರೋಚಕ ತಿರುವನ್ನು ಸೀರಿಯಲ್ ಪಡೆದುಕೊಂಡಿದೆ.