US vs India cab drivers : ವಿದೇಶಕ್ಕೆ ಹೋಗಿ ಬಂದಾಗ್ಲೇ ವಾಸ್ತವದ ಅರಿವಾಗೋದು. ಗೂಗಲ್ ಟೆಕ್ಕಿಗೆ ಅದ್ರ ಜ್ಞಾನೋದಯವಾಗಿದೆ. ಅಮೆರಿಕಾ ಕ್ಯಾಬ್ ಡ್ರೈವರ್ಸ್ ಹಾಗೂ ಬೆಂಗಳೂರು ಕ್ಯಾಬ್ ಡ್ರೈವರ್ಸ್ ಮಧ್ಯೆ ಇರುವ ವ್ಯತ್ಯಾಸವನ್ನು ಅವರು ಹಂಚಿಕೊಂಡಿದ್ದಾರೆ.
ಭಾರತೀಯರಿಗೆ ಫಾರೆನ್ ಆರ್ಕಷಿಸುತ್ತೆ. ಅಲ್ಲಿ ಆ ಸೌಲಭ್ಯ ಇದೆ, ಈ ಸೌಲಭ್ಯ ಇದೆ ಅಂತ ದೇಶ ಬಿಟ್ಟು ವಿದೇಶ ಹೊಗಳ್ತಾರೆ. ಅಲ್ಲಿಗೆ ಹೋದಾಗ್ಲೆ ಸತ್ಯ ದರ್ಶನವಾಗೋದು. ನಮ್ಮ ಬೆಂಗಳೂರಿನ ಕ್ಯಾಬ್ ಡ್ರೈವರ್ಸ್ (Bangalore Cab Drivers), ಭಾರವಾದ ಬ್ಯಾಗ್ ಹಿಡಿದು ಕಾರ್ ಹತ್ತೋಕೆ ಮಹಿಳೆ ಬಂದ್ರೆ, ಕಾರ್ ನಿಂದ ಇಳಿದು, ಡಿಕ್ಕಿಗೆ ಲಗೇಜ್ ಹಾಕಿ, ಕಾರ್ ಓಡಿಸ್ತಾರೆ. ಹತ್ತು ರೂಪಾಯಿ ಎಕ್ಸ್ಟ್ರಾ ಕೇಳ್ದೆ ಹೋದ್ರೂ ಅವರು ಲಗೇಜ್ (Luggage) ಹಾಕಿದ್ದು ಸ್ವಲ್ಪ ಹೆಚ್ಚು ಕಮ್ಮಿ ಆದ್ರೆ ಪ್ರಯಾಣಿಕರು ಅವರನ್ನೇ ದೂಷಿಸ್ತಾರೆ. ಬೆಂಗಳೂರಿನ ಟೆಕ್ಕಿ ಒಬ್ರು, ಬೆಂಗಳೂರಿನ ಕ್ಯಾಬ್ ಡ್ರೈವರ್ಸ್ ಹಾಗೂ ಅಮೆರಿಕಾ ಕ್ಯಾಬ್ ಡ್ರೈವರ್ಸ್ ಗೆ ಇರುವ ವ್ಯತ್ಯಾಸ ಹೇಳಿದ್ದಾರೆ. ಭಾರತದ ಲೇಬರ್ ಕಾನ್ಸೆಪ್ಟ್ ಬಗ್ಗೆ ಲಿಂಕ್ಡ್ ಇನ್ ನಲ್ಲಿ ಈಗ ಭಾರೀ ಚರ್ಚೆ ಆಗ್ತಿದೆ.
ಗೂಗಲ್ ಟೆಕ್ಕಿಗಾದ ಅನುಭವ ಏನು? : ಗೂಗಲ್ ಟೆಕ್ಕಿ ತಮ್ಮ ಅಮೆರಿಕ vs ಬೆಂಗಳೂರು ಕ್ಯಾಬ್ ರೈಡ್ ಅನುಭವ ಹಂಚಿಕೊಂಡಿದ್ದು ಅದು ಈಗ ಲಿಂಕ್ಡ್ಇನ್ ನಲ್ಲಿ ಚರ್ಚೆ ಆಗ್ತಿದೆ.
ನಾನು ಅಮೆರಿಕದಲ್ಲಿ ಒಂದೆರಡು ವಾರಗಳನ್ನು ಕಳೆಯುವವರೆಗೂ ಭಾರತದಲ್ಲಿ ನಾವು ಎಷ್ಟೋ ವಿಷ್ಯಗಳನ್ನು ಲಘುವಾಗಿ ತೆಗೆದ್ಕೊಂಡಿದ್ದೇವೆ ಎಂಬುದು ನನಗೆ ಗೊತ್ತಿರಲಿಲ್ಲ. ಅಮೆರಿಕಾದ ಪ್ರತಿಯೊಂದು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಪ್ರಯಾಣದ ವೇಳೆ ನಾನು ಕಷ್ಟಪಟ್ಟಿದ್ದೇನೆ. ನಾನು ದೊಡ್ಡ ಲಗೇಜ್ ಎಳೆದುಕೊಂಡು ಬರ್ತಿದ್ರೂ ಡ್ರೈವರ್ ತನ್ನ ಸೀಟಿನಿಂದ ಅಲ್ಲಾಡ್ತಿರಲಿಲ್ಲ. ಯಾಕೆಂದ್ರೆ ನಾವು ಡ್ರೈವ್ ಗೆ ಪೇ ಮಾಡ್ತೇವೆಯೇ ವಿನಃ ಲೇಬರ್ ಗೆ ಅಲ್ಲ. ಅವರು ಡ್ರೈವಿಂಗ್ ಕೆಲ್ಸಕ್ಕೆ ಹಣ ಪಡೆದು ಅದೊಂದು ಕೆಲ್ಸ ಮಾತ್ರ ಮಾಡ್ತಾರೆ. ನಮ್ಮ ಲಗೇಜ್ ತೆಗೆದುಕೊಳ್ಳುವ ಕೆಲ್ಸ ಮಾಡೋದಿಲ್ಲ ಎಂದು ಕವ್ಲೀನ್ ಕೌರ್ ಬಕ್ಷಿ ಲಿಂಕ್ಡ್ಇನ್ನಲ್ಲಿ ಬರೆದಿದ್ದಾರೆ.
ಅರೆ ಡಾ.ಬ್ರೋಗೆ ಇದೇನಾಯ್ತು? ಲೈವ್ ವಿಡಿಯೋ ಮಾಡುತ್ತಲೇ ಎತ್ತರದ ಜೋಕಾಲಿ ತುಂಡಾಗೋಯ್ತು!
ಬೆಂಗಳೂರು ಕ್ಯಾಬ್ ಡ್ರೈವರ್ಸ್ ಹೇಗಿದ್ದಾರೆ? : ಟೆಕ್ಕಿಗೆ ಬೆಂಗಳೂರು ಕ್ಯಾಬ್ ಡ್ರೈವರ್ ಕೆಲ್ಸ ಅಚ್ಚರಿಗೊಳಿಸಿದೆ. ನಾವು ಹೇಳ್ದೆ ಅವರು 25 ಪ್ಲಸ್ ಕೆಜಿ ಸೂಟ್ಕೇಸನ್ನು ಕಾರಿನಲ್ಲಿ ಇಟ್ಟಿದ್ದಾರೆ. ಅವರ ಕೆಲ್ಸ ನೋಡಿ ತಕ್ಷಣ ನನ್ನ ಕೈ ಪರ್ಸ್ ಕಡೆ ಹೋಯ್ತು. ನಾನು 200 ರೂಪಾಯಿ ಹೆಚ್ಚುವರಿ ಹಣ ನೀಡೋಕೆ ಮುಂದಾದೆ. ನಿಜವಾಗ್ಲೂ ಇಷ್ಟೊಂದು ಭಾರವನ್ನು ಎತ್ತಲು ನನ್ನಿಂದ ಸಾಧ್ಯ ಇರ್ಲಿಲ್ಲ. ಆದ್ರೆ ಅವರು ಹಣ ಪಡೆಯಲು ನಿರಾಕರಿಸಿದ್ರು. ನಾನು ಒತ್ತಾಯ ಮಾಡಿ ಹಣ ನೀಡ್ಬೇಕಾಯ್ತು ಎಂದು ಅವರು ಬರೆದಿದ್ದಾರೆ.
ಪ್ರವಾಸಿಗರಿಗೆ ಶಾಕ್, ಇನ್ಮುಂದೆ ಬೇಕೆಂದಾಗ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಹೋಗೋಕೆ
ಕಣ್ಣು ತೆರೆಸಿದ ಸಣ್ಣ ಘಟನೆ : ಈ ಘಟನೆ ಕವ್ಲೀನ್ ಕೌರ್ ಕಣ್ಣು ತೆರೆಸಿದೆ. ಭಾರತದಲ್ಲಿ ಇದನ್ನು ನಾವು ಸಣ್ಣ ಘಟನೆಯಂತೆ ನೋಡ್ತೇವೆ. ಆದ್ರೆ ಎಂದೂ ಶ್ರಮವನ್ನು ಲಘುವಾಗಿ ತೆಗೆದುಕೊಳ್ಬಾರದು ಅಂತ ಬಕ್ಷಿ ಹೇಳಿದ್ದಾರೆ. ಮುಂದೆ ನನ್ನ ಕೆಲ್ಸವನ್ನು ಸುಲಭಗೊಳಿಸಲು ಯಾರಾದ್ರೂ ಮುಂದಾದ್ರೆ ನಾನು ಅವರನ್ನು ಗೌರವಿಸ್ತೇನೆ ಎಂದು ಕವ್ಲೀನ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ : ಬಕ್ಷಿ ಪೋಸ್ಟ್ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೆಲವರು ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು ನೆನೆಪಿಸಿಕೊಂಡಿದ್ದಾರೆ. ನಮಗೆ ಸಣ್ಣದಾಗಿ ಸಹಾಯ ಮಾಡಿದ ವ್ಯಕ್ತಿಯನ್ನೂ ಸದಾ ನೆನೆಯಬೇಕು. ಕೃತಜ್ಞತೆ ಸಲ್ಲಿಸಬೇಕು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ವಿಮಾನ ನಿಲ್ದಾಣದ ಬ್ಯಾಗೇಜ್ ಟ್ರಾಲಿಗೆ 6 ಡಾಲರ್ ಪಾವತಿ ಮಾಡ್ಬೇಕು. ಭಾರತದಲ್ಲಿ ಇದು ಫ್ರೀ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲವರು ತಮಗಾದ ಕೆಟ್ಟ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
