ಮಲ್ಲಿಕಾರ್ಜುನ ಖರ್ಗೆ ದಂಪತಿ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ, ಡಾ. ದೊಡ್ಡಪ್ಪ ಅಪ್ಪಾ ಅವರಿಗೆ ಸಾಂತ್ವನ ಹೇಳಿದರು. ಶರಣಬಸಪ್ಪ ಅಪ್ಪಾ ಅವರ ಸೇವೆ ಮತ್ತು ಶಿಕ್ಷಣ ಕ್ರಾಂತಿಯನ್ನು ಸ್ಮರಿಸಿ ಖರ್ಗೆ ಭಾವುಕರಾದರು.
ಕಲಬುರಗಿ (ಸೆ.6): ಕಲಬುರಗಿ (ಸೆ.6): ಇತ್ತೀಚೆಗೆ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಅಪ್ಪಾ ಲಿಂಗೈಕ್ಯರಾದ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ತಮ್ಮ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿದರು.
ಶಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ 9ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪಾ ಹಾಗೂ ದಾಕ್ಷಾಯಣಿ ಅವ್ವಾ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶರಣಬಸಪ್ಪ ಅಪ್ಪಾ ಅವರ ಜನಸೇವೆ ಮತ್ತು ಶಿಕ್ಷಣ ಕ್ರಾಂತಿಯ ಕೊಡುಗೆಯನ್ನು ಡಾ ದೊಡ್ಡಪ್ಪ ಅಪ್ಪಾ ಕೊಂಡಾಡಿದರು.

ಭೇಟಿಯ ವೇಳೆ ಖರ್ಗೆ ಅವರು ಶರಣಬಸಪ್ಪ ಅವರು ಆಸ್ಪತ್ರೆಯಲ್ಲಿದ್ದಾಗ ಅವರ ಪುತ್ರ 9ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರು ಹಾಡು ಹೇಳಿ ಸಮಾಧಾನ ಪಡಿಸುತ್ತಿರುವ ವಿಡಿಯೋವನ್ನು ಮೊಬೈಲ್‌ನಲ್ಲಿ ನೋಡಿ ಖರ್ಗೆಯವರು ಭಾವುಕರಾದರು. ಈ ವಿಡಿಯೋ ದೃಶ್ಯವನ್ನು ವೀಕ್ಷಿಸುತ್ತಿದ್ದಂತೆ ಖರ್ಗೆ ಅವರ ಕಣ್ಣು ತೇವಗೊಂಡಿತು.
ಈ ಸಂದರ್ಭದಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಸೇರಿದಂತೆ ಇತರ ಗಣ್ಯರು ಖರ್ಗೆ ಅವರೊಂದಿಗೆ ಉಪಸ್ಥಿತರಿದ್ದರು.
