Bangalore school fees : ಬೆಂಗಳೂರು ದಿನೇ ದಿನೇ ಕೈಗೆಟುಕದ ಆಕಾಶವಾಗ್ತಿದೆ. ಇಲ್ಲಿ ಮಕ್ಕಳ ಶಿಕ್ಷಣ ದೊಡ್ಡ ಸವಾಲಾಗ್ತಿದೆ. ಎಷ್ಟೇ ದುಡಿದ್ರೂ ಶಾಲೆ ಫೀಸ್ ನಿಂದ ಜೇಬು ಖಾಲಿಯಾಗ್ತಿದೆ. 

ಸಿಲಿಕಾನ್ ಸಿಟಿ ಬೆಂಗಳೂರು (Silicon City Bangalore) ದಿನೇ ದಿನೇ ದುಬಾರಿಯಾಗ್ತಿದೆ. ಕೆಲಸ ಅರಸಿ ಹಳ್ಳಿಯಿಂದ ಪಟ್ಟಣ ಸೇರುವ ವ್ಯಕ್ತಿಗೆ ಖರ್ಚಿಗೆ ಹಣ ಹೊಂದಿಸೋದೇ ದೊಡ್ಡ ಹೊರೆಯಾಗಿದೆ. ಮದುವೆ, ಮಕ್ಕಳಾಗುವವರೆಗೆ ಹೇಗೋ ಜೀವನ ನಡೆದುಹೋಗುತ್ತೆ. ಮಕ್ಕಳಾಗ್ತಿದ್ದಂತೆ ಉದ್ಯಾನ ನಗರಿ ಬೆಂಗಳೂರು ಬೆಂಕಿ ಕೆಂಡವಾದಂತೆ ಭಾಸವಾಗುತ್ತೆ. ಮನೆ, ಮಕ್ಕಳ ಶಾಲೆ ಪಾಲಕರಿಗೆ ದೊಡ್ಡ ಹೊರೆಯಾಗ್ತಿದೆ. ವಿಶೇಷವಾಗಿ ಮಕ್ಕಳ ಸ್ಕೂಲ್ ಫೀಸ್ (School Fees). ಒಂದು ಕಾಲದಲ್ಲಿ ನಾವು ಓದು ಮುಗಿಸಿದ ಶುಲ್ಕಕ್ಕಿಂತ ದುಪ್ಪಟ್ಟು ಹಣವನ್ನು ಮಕ್ಕಳ ಒಂದು ವರ್ಷದ ಶಿಕ್ಷಣಕ್ಕೆ ಸಾಕಾಗ್ತಿಲ್ಲ. ಫ್ರೀಸ್ಕೂಲ್ ನಿಂದಲೇ ಶುಲ್ಕದ ಭಾರ ಹೊರುವ ಪಾಲಕರು ಎಷ್ಟು ದುಡಿದ್ರು ಸಾಲದು. ಮಕ್ಕಳಿಗೆ ಎರಡು – ಮೂರು ವರ್ಷವಾಗ್ತಿದ್ದಂತೆ ಲಕ್ಷ ಲಕ್ಷ ಶಾಲೆ ಶುಲ್ಕ ರೆಡಿ ಇರ್ಬೇಕು. ಇಲ್ಲ ಅಂದ್ರೆ ಒಳ್ಳೆ ಸ್ಕೂಲ್ ನಲ್ಲಿ ನೋ ಅಡ್ಮಿಷನ್. ಖರ್ಚು ಎಷ್ಟೇ ಬರ್ಲಿ, ಮಕ್ಕಳು ಒಳ್ಳೆ ಸ್ಕೂಲ್ ನಲ್ಲಿ ಓದ್ಬೇಕು, ಅವ್ರ ಭವಿಷ್ಯ ಚೆನ್ನಾಗಿರ್ಬೇಕು ಎನ್ನುವ ಕಾರಣಕ್ಕೆ ಸ್ಕೂಲ್ ಬಾಯಿಗೆ ಬಂದ ಫೀಸ್ ಹೇಳಿದ್ರೂ ಪಾಲಕರು ತುಟಿ ಬಿಚ್ಚೋದಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ಫೈನಾನ್ಶಿಯಲ್ ಪ್ಲಾನರ್ ಡಿ. ಮುತ್ತುಕೃಷ್ಣ, ಬೆಂಗಳೂರು ಶಾಲೆ ಶುಲ್ಕದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಶಾಲೆ ಫೀಸ್ ಕೇಳಿದ್ರೆ ದಂಗಾಗುತ್ತೆ : ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಡಿ. ಮುತ್ತುಕೃಷ್ಣ ಅವರು ಫೀಸ್ ಬಗ್ಗೆ ಬರೆದಿದ್ದಾರೆ. 2025 -2026ರ ಶಾಲಾ ಶುಲ್ಕದ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.

ಖಾಸಗಿ ಸ್ಥಳದಲ್ಲಿ ವಾಹನ ಬಳಸ್ತಿದ್ರೆ ತೆರಿಗೆ ವಿಧಿಸುವಂತಿಲ್ಲ!

• 1 ರಿಂದ 5 ನೇ ತರಗತಿಯವರೆಗಿನ ಶುಲ್ಕಗಳು 7.35 ಲಕ್ಷ ರೂಪಾಯಿ.

• 6 ರಿಂದ 8 ನೇ ತರಗತಿಯವರೆಗಿನ ಶುಲ್ಕಗಳು 7.75 ಲಕ್ಷ ರೂಪಾಯಿ.

• 9 ಮತ್ತು 10 ನೇ ತರಗತಿಯ ಶುಲ್ಕಗಳು 8.5 ಲಕ್ಷ ರೂಪಾಯಿ.

• 11 ಮತ್ತು 12 ನೇ ತರಗತಿಯ ಶುಲ್ಕಗಳು 11 ಲಕ್ಷ ರೂಪಾಯಿ.

• ಅಡ್ಮಿಷನ್ ಟೈಂನಲ್ಲಿ 1 ಲಕ್ಷ ರೂಪಾಯಿ ಹೆಚ್ಚುವರಿ ಶುಲ್ಕ.

ಎಕ್ಸ್ ನಲ್ಲಿ ಡಿ ಮುತ್ತು ಕೃಷ್ಣ ಏನು ಬರೆದಿದ್ದಾರೆ? : ಇದು ಮುಕ್ತ ಮಾರುಕಟ್ಟೆ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಇಚ್ಛೆಯಂತೆ ವಸ್ತುಗಳ ಬೆಲೆಯನ್ನು ನಿರ್ಧರಿಸಬಹುದು. ಗ್ರಾಹಕರು ತಮ್ಮ ಆಯ್ಕೆಯ ವಸ್ತುವನ್ನು ಆಯ್ಕೆ ಮಾಡಬಹುದು. ಹೇಳಿದಾಗ ಇದೆಲ್ಲವೂ ಸರಿ ಎನಿಸುತ್ತೆ. ಆದ್ರೆ ವಾಸ್ತವದಲ್ಲಿ ಅದು ಹಾಗಲ್ಲ. ಒಟ್ಟಿಗೆ ಒಂದು ವರ್ಷದಲ್ಲಿ 50 ಲಕ್ಷ ರೂಪಾಯಿ ಗಳಿಸುವ ಮತ್ತು ಅವರ ಇಬ್ಬರು ಮಕ್ಕಳು ಶಾಲೆಗೆ ಹೋಗುವ ಐಟಿ ದಂಪತಿಗೂ ಈ ಶುಲ್ಕ ತುಂಬಾ ಹೆಚ್ಚು ಎಂದು ಬರೆದಿದ್ದಾರೆ.

ಭಾರತದ ಈ ನಿರ್ಧಾರದಿಂದ ಅಮೆರಿಕನ್ ಉತ್ಪನ್ನಗಳ ಮೇಲೆ ಜಾಗತಿಕ ಬಹಿಷ್ಕಾರದ ಅಲೆ! ಬಾಬಾ ರಾಮ್‌ದೇವ್ ಹೇಳಿದ್ದೇನು?

ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳೋದೇನು? : ಮುತ್ತುಕೃಷ್ಣನ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಅನ್ನು ಭಾನುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪೋಸ್ಟ್ ಮಾಡಲಾಗಿದೆ. ಇದು 1 ಲಕ್ಷದ 37 ಸಾವಿರಕ್ಕಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಒಂದು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಶಾಲೆ ಫೀಸ್ ಹೆಚ್ಚಾಗಲು ಜನರೇ ಕಾರಣ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮಕ್ಕಳಿಗೆ ಒಂದು ಲಕ್ಷ ಸಂಬಳ ಸಿಗ್ಲಿ ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸೋದು ಪಾಲಕರೇ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ. ಉತ್ತಮ ಶಿಕ್ಷಣ ಕೆಲವರಿಗೆ ಮಾತ್ರ ಸೀಮಿತ ಆಗ್ಬಾರದು. ಇದು ಎಲ್ಲರಿಗೂ ಸಿಗುವಂತಾಗ್ಬೇಕು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಶಾಲೆಯ ಫೀಸ್ ಲೆಕ್ಕವನ್ನು ಪೋಸ್ಟ್ ಮಾಡಿದ್ದಾರೆ.

Scroll to load tweet…