ಚಿನ್ನಯ್ಯನ ಮಹಜರು ಮುಕ್ತಾಯದ ಬೆನ್ನಲ್ಲೇ, ಎಸ್ಐಟಿ ತಂಡವು ಬುರುಡೆ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬಯಲು ಮಾಡಲು ಸಜ್ಜಾಗಿದೆ. 

ಬೆಂಗಳೂರು: ಬುರುಡೆ ಹಿಡಿದುಕೊಂಡು ಬಂದಿದ್ದ ಚಿನ್ನಯ್ಯನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಮಹಜರು ನಡೆಸಲಗಿತ್ತು. ಇದಕ್ಕೂ ಮೊದಲು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೂ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿತ್ತು. ಬಹುತೇಕ ಮಹಜರು ಕಾರ್ಯ ಮುಕ್ತಾಯಗೊಂಡಿದ್ದು ಎಂದು ತಿಳಿದು ಬಂದಿದ್ದು, ಇನ್ಮುಂದೆ ಎಸ್‌ಐಟಿ ತಂಡದ ಅಸಲಿ ಆಟ ಶುರುವಾಗುವ ಸಾಧ್ಯತೆಗಳು ದಟ್ಟವಾಗಿವೆ. ಮಾಹಿತಿ ಈ ವಾರವೇ ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ.

ಮಹಜರು ಬೆನ್ನಲ್ಲೇ ಬುರುಡೆ ಪ್ರಕರಣದಲ್ಲಿ ಷಡ್ಯಂತ್ರ ರಚಿಸಿದವರ ಬಂಧನಕ್ಕೆ ಎಸ್‌ಐಟಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಇಂದು ಆರೋಪಿ ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಮಾಹಿತಿ ಕಲೆ ಹಾಕಲು ಎಸ್‌ಐಟಿ ಮುಂದಾಗಿದೆ. ಈ ಹಿನ್ನೆಲೆ ಇಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತನಿಖಾಧಿಕಾರಿ‌ ಜಿತೇಂದ್ರ ದಯಾಮ ಆಗಮಿಸಲಿದ್ದಾರೆ.

ಗ್ಯಾಂಗ್ ಮೆಂಬರ್ಸ್ ಬಂಧನಕ್ಕೆ ಸಿದ್ಧತೆ

ಬುಧವಾರ ನ್ಯಾಯಾಲಯದ ಮುಂದೆ ಚಿನ್ನಯ್ಯನನ್ನು ಹಾಜರುಪಡಿಸಿ ಮತ್ತಷ್ಟು ದಿನ ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 3ಕ್ಕೆ ಚಿನ್ನಯ್ಯ ಕಸ್ಟಡಿ ಅಂತ್ಯವಾಗಲಿದೆ. ಇಂದಿನಿಂದ ಬುರಡೆ ಗ್ಯಾಂಗ್‌ನಲ್ಲಿರುವ ಸದಸ್ಯರ ಬಂಧನದ ಕುರಿತು ಎಸ್‌ಐಟಿ ತಂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಿದೆಯಂತೆ. ಬುರುಡೆ ಗ್ಯಾಂಗ್ ಷಡ್ಯಂತ್ರ ನಡೆದ ಮೂಲೆಮೂಲೆಗಳಲ್ಲೂ ಶೋಧ ನಡೆಸುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಮೌನಮುರಿದ ಪಂಚಪೀಠ ಶ್ರೀಗಳು, ಕಾಣದ 'ಕೈ'ಗಳ ಪಿತೂರಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ತಲೆಬರುಡೆ ಸಭೆ?

ಜಯಂತ್ ಮನೆಯಲ್ಲೇ ತಲೆಬರುಡೆ ಸುಳ್ಳಿನ ಕತೆಯ ಸಂಚಿನ ಕುರಿತು ಚಿನ್ನಯ್ಯನ ಜತೆ ಸಂಚುಕೋರರು ಸಭೆ ನಡೆಸಿದ್ದರು ಎಂಬ ಆರೋಪವಿದೆ. ಇದರಲ್ಲಿ ಜಯಂತ್‌ ಹಾಗೂ ಗಿರೀಶ್ ಮಟ್ಟಣ್ಣವರ್ ಭಾಗಿಯಾಗಿದ್ದರು ಬಗ್ಗೆ ಮಾಹಿತಿ ಇದೆ ಎಂದು ಮೂಲಗಳು ಹೇಳಿವೆ.

YouTube video player

ಇಂದು ಬಿಜೆಪಿ ‘ಧರ್ಮಸ್ಥಳ ಚಲೋ’

ಧರ್ಮಸ್ಥಳ ಬುರುಡೆ ಕೇಸ್‌ ಕುರಿತ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ವಹಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಸೋಮವಾರ ‘ಧರ್ಮಸ್ಥಳ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆಯಲಿರುವ ಈ ಬೃಹತ್‌ ಸಮಾವೇಶದಲ್ಲಿ ರಾಜ್ಯಾದ್ಯಂತ ಆಗಮಿಸಲಿರುವ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರಂಗವಾಗಿ ಮಧ್ಯಾಹ್ನ 2 ಗಂಟೆಗೆ ವಿಜಯೇಂದ್ರ ನೇತೃತ್ವದಲ್ಲಿ ‘ಧರ್ಮಸ್ಥಳ ಚಲೋ, ಧರ್ಮದೆಡೆಗೆ ನಮ್ಮ ನಡಿಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಕಾರಲ್ಲಿ ಕಿಡ್ನಾಪ್ ಮಾಡಿದ್ದು ನೋಡಿದ್ದಾಗಿ ಮಹಿಳೆ ದೂರು