ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದಕ್ಕೆ 'ಸೆಂಟ್ ಮೇರಿ' ಎಂದು ಹೆಸರಿಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮತಿ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಅನುಮೋದನೆ ಬಳಿಕ ನಾಮಕರಣ ದಿನಾಂಕವನ್ನು ಘೋಷಿಸಲಾಗುವುದು. ಇದೇ ವೇಳೆ ಧಾರ್ಮಿಕ ಸಹಿಷ್ಣುತೆ, ಪ್ರೀತಿ-ವಿಶ್ವಾಸದ ಮಹತ್ವ ಸಾರಿದರು.

ಬೆಂಗಳೂರು (ಸೆ.08): ಬೆಂಗಳೂರು ನಗರದಲ್ಲಿನ ಒಂದು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಎಂಬ ಹೆಸರಿಡಬೇಕು ಎಂಬ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಒಂದು ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹಸರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಇದಕ್ಕೆ ಅನುಮೋದನೆ ದೊರೆತ ನಂತರ ನಾಮಕರಣ ದಿನಾಂಕ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಂಗಳೂರಿನಲ್ಲಿ ನಡೆದ ಸೆಂಟ್ ಮೇರೀಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ನಾನು ತುಂಬಾ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸೆಂಟ್ ಮೇರಿಸ್ ಜನ್ಮದಿನದ ಶುಭಾಶಯ ಕೋರುತ್ತೇನೆ. ನಾನು ಮುಖ್ಯಮಂತ್ರಿ ಆಗಿ ಪ್ರತಿ ವರ್ಷ ತಪ್ಪದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಬಹಳ ಜನ ಹರಕೆ ಹೊತ್ತುಕೊಳ್ತಾರೆ, ನಂತರ ಹರಕೆ ತೀರಿಸ್ತಾರೆ. ಪ್ರತಿಯೊಬ್ಬರು ಕೂಡ ದೈಹಿಕ, ಮಾನಸಿಕವಾಗಿ ಆರೋಗ್ಯ ಕೊಡಲಿ ಅಂತ ತಾಯಿ ಸೆಂಟ್ ಮೇರಿಯನ್ನು ಪ್ರಾರ್ಥನೆ ಮಾಡುತ್ತಾರೆ. ಅದಕ್ಕೋಸ್ಕರ ಸೆಂಟ್ ಮೇರಿಗೆ ಆರೋಗ್ಯ ಮಾತೆ ಅಂತ ಕರಿತಾರೆ ಎಂದು ಹೇಳಿದರು.

ಎಲ್ಲರೂ ಮಾನಸಿಕ, ದೈಹಿಕ ಆರೋಗ್ಯ ಚೆನ್ನಾಗಿ ಇರಲಿ ಅಂತ ನಾನು ಕೂಡ ಪ್ರಾರ್ಥನೆ ಮಾಡುತ್ತೇನೆ. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ ಇದೆ. ವಿವಿಧತೆಯಲ್ಲಿ ಏಕತೆ ಸಾಧಿಸಬೇಕು, ನಮ್ಮ ಸರ್ಕಾರ ಇದರಲ್ಲಿ ನಂಬಿಕೆ ಇರಿಸಿದೆ. ನಮ್ಮ ಸರ್ಕಾರ ಎಲ್ಲಾ ಧರ್ಮವನ್ನು ಒಂದೇ ಗೌರವದಿಂದ ಕಾಣುತ್ತಿದೆ. ನಮಗೆ ಎಲ್ಲಾ ಧರ್ಮ ಒಂದೇನೇ. ಸಮಾಜ ಸುಧಾರಕರು ಜಾತಿ ಹೋಗಬೇಕು, ಮನುಷ್ಯತ್ವದಿಂದ ಬದುಕಬೇಕು ಅನ್ನುವ ಮಾತು ಹೇಳಿದ್ದಾರೆ. ಸಹಿಷ್ಣುತೆ ಬರಬೇಕು, ಬೇರೆ ಧರ್ಮವನ್ನು ಗೌರವದಿಂದ ಕಾಣುವ ಸಹಿಷ್ಣುತೆ ಬರಬೇಕು. ಅದು ಇದ್ದಾಗ ಮಾತ್ರ ಮನುಷ್ಯತ್ವ ಬೆಳೆಯುತ್ತದೆ ಎಂದರು.

ಚುನಾವಣಾ ಆಯೋಗ ಬಿಜೆಪಿಯ ಹಿಂಬಾಗಿಲ ಕಚೇರಿಯೇ?: ಸಿಎಂ ಸಿದ್ದರಾಮಯ್ಯ

ಪ್ರೀತಿ ವಿಶ್ವಾಸ ಪ್ರತಿಯೊಬ್ಬರಲ್ಲೂ ಬರಬೇಕು, ಬೇರೆ ಜಾತಿಯ ಬಗ್ಗೆ ದ್ವೇಷ ಬರಬಾರದು. ಬೇರೆ ಜಾತಿಯವರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಏಸು ಕ್ರಿಸ್ತ ಶಾಂತಿಯನ್ನು ಬೋಧಿಸಿದ್ದರು. ಶಾಂತಿಯನ್ನು ಕದಡುವ ಕೆಲಸ ಸಮಾಜದಲ್ಲಿ ಯಾರು‌ ಮಾಡಬಾರದು. ಬಸವಣ್ಣನವರು ಇದನ್ನೇ 12ನೇ ಶತಮಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಏಸು ಕ್ರಿಸ್ತ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧೀಜಿ ಎಲ್ಲರೂ ಇದನ್ನೇ ಹೇಳುತ್ತಾರೆ. ನಾವು ಎಲ್ಲರೂ ಸೆಂಟ್ ಮೇರಿಸ್ ಅವರಂತೆ ಮನುಷ್ಯರಾಗಿ ಬಾಳೋಣ, ಪ್ರೀತಿಸೋಣ ಅಂತ ಪ್ರತಿಜ್ಞೆ ಮಾಡೋಣ. ಶಾಂತಿಯನ್ನು ಕಡದುವ ಕೆಲಸ ಮಾಡಲ್ಲ ಅಂತ ಪ್ರತಿಜ್ಞೆ ಮಾಡೋಣ ಎಂದು ಎಲ್ಲರಿಗೂ ಪ್ರತಿಜ್ಞೆ ಮಾಡಿಸಿದರು.

ಪೀಟರ್ ಮಚಾಡೋ ಅವರು ಮನವಿಯಂತೆ ಭ್ರಷ್ಟಾಚಾರ ವಿರೋಧಿ ಮಸೂದೆ (anti corruption bill) ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಬಡವರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಬಗ್ಗೆ ನಮ್ಮ ಸರ್ಕಾರ ಕೆಲಸ ಮಾಡಿದೆ. ಎಲ್ಲಾ ಧರ್ಮ, ಪಕ್ಷದ ಬಡವರು ಗ್ಯಾರಂಟಿ ಯೋಜನೆಗಳ ಫಲಾನುಭವಿ ಆಗಬಹುದು. 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೊಜನೆಗೆ ನೀಡಿದ್ದೇವೆ. ಸಮಾನತೆ ತಂದಿದ್ದೇವೆ. ಈ ಸಲ ಅಭಿವೃದ್ಧಿ ‌ನಿಗಮಕ್ಕೆ 250 ಕೋಟಿ ರೂಪಾಯಿ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ಈಡಿಗ ಸಮುದಾಯಕ್ಕೆ ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜು: ಸಿಎಂ ಸಿದ್ದರಾಮಯ್ಯ ಭರವಸೆ

ಇನ್ನು ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿ ಹೆಸರಿಡುವ ಪ್ರಸ್ತಾಪ ಇಟ್ಟಿದ್ದಾರೆ. ಇದರ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ನಾನು ಮಾಡುತ್ತೇನೆ. ಅಲ್ಲಿಂದ ಒಪ್ಪಿಗೆ ಆದ ಬಂದ ನಂತರ ನಾವು ಘೋಷಣೆ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.