'ಸು ಫ್ರಂ ಸೋ' ಸಿನಿಮಾ ಮೂಲಕ ಹೊಸ ಸಂಚಲನ ಸೃಷ್ಟಿಸಿ ಮತ್ತೆ ತಮ್ಮ ಇಮೇಜ್ ಹಾಗೂ ಕ್ರೇಜ್ ಹೆಚ್ಚಿಸಿಕೊಂಡಿರುವ ರಾಜ್ ಬಿ ಶೆಟ್ಟಿಯವರು ಇದೀಗ ಜುಗಾರಿ ಕ್ರಾಸ್‌ಗೆ ರೆಡಿಯಾಗಿದ್ದಾರೆ. 'ರಕ್ಕಸಪುರದೊಳ್' ಎನ್ನುವ ಸಿನಿಮಾ ಈಗಾಗಲೇ ಅವರ ಕೈನಲ್ಲಿದೆ. ಹೊಸದೊಂದು ಸಿನಿಮಾಗೆ ಸ್ಕೆಚ್ ಹಾಕಿದ್ದಾರೆ. ಇನ್ನೂ ಏನೇನಿದೆ?

ರಾಜ್‌ ಭಿ ಶೆಟ್ಟಿ ಕೈನಲ್ಲಿ ಅದೆಷ್ಟು ಸಿನಿಮಾಗಳು?

ಸು ಫ್ರಂ ಸೋ ಖ್ಯಾತಿಯ ಬಳಿಕ ರಾಜ್‌ ಬಿ ಶೆಟ್ಟಿಯವರು (Raj B Shetty) 'ನಾನು ಹೊಸ ಸಿನಿಮಾವೊಂದನ್ನು ಕೈಗತ್ತಿಕೊಂಡಿದ್ದೇನೆ. ಅದು ಸಸ್ಪೆನ್ಸ್‌-ಥ್ರಿಲ್ಲರ್' ಸಬ್ಜೆಕ್ಟ್ ಹೊಂದಿದೆ. ನಾನೀಗ ಅದೇ ಪ್ರಾಜೆಕ್ಟ್‌ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಅಗಿದ್ದೇನೆ' ಎಂದಿದ್ದರು. ಆ ಸಿನಿಮಾ ಹೆಸರು ಸದ್ಯಕ್ಕೆ ಹೊರಬಂದಿಲ್ಲ. ಅದರೆ, ಇದೀಗ ದೀಪಾವಳಿ ಶುಭಾಶಯಗಳನ್ನು ಹೇಳುತ್ತ ಈ ಸಿನಿಮಾ ಹೆಸರು ಹೊರಬಂದಿದೆ. ಅದು 'ರಕ್ಕಸಪುರದೊಳ್'. ಈ (Rakkasapuradol) ಸಿನಿಮಾವನ್ನು ಕಳೆದ ವರ್ಷ, ಅಂದರೆ 16 ಆಗಸ್ಟ್ 2024ರಂದು ಘೋಷಣೆ ಮಾಡಲಾಗಿತ್ತು.

ಈಗ್ಗೆ ಮೂರು ದಿನಗಳ ಹಿಂದೆ 'ಜುಗಾರಿ ಕ್ರಾಸ್' ಸಿನಿಮಾ ಘೋಷಣೆ ಆಗಿದೆ. ಗುರುದತ್ ಗಾಣಿಗ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಈ ಸಿನಿಮಾ ಆಗಲಿದ್ದು ಇದಕ್ಕೆ ರಾಜ್‌ ಬಿ ಶೆಟ್ಟಿ ಹೀರೋ ಆಗಿದ್ದಾರೆ. ಆದರೆ, ಇಂದು ದೀಪಾವಳಿ ಶುಭಾಶಯ ತಿಳಿಸಿರುವ 'ರಕ್ಕಸಪುರದೊಳ್' ಚಿತ್ರವನ್ನು ಕೆ ರವಿ ವರ್ಮಾ ನಿರ್ಮಾಣ ಮಾಡುತ್ತಿದ್ದಾರೆ, ರವಿ ಸಾರಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ನಟ-ನಿರ್ದೇಶಕ ರಾಜ್‌ ಬಿ ಶೆಟ್ಟಿಯವರು ಸಿಕ್ಕಾಪಟ್ಟೆ ಬ್ಯುಸಿ ಆಗಿರೋದಂತೂ ಪಕ್ಕಾ ಆಗಿದೆ.

ಸು ಫ್ರಂ ಸೋ ಸಿನಿಮಾ ಸೂಪರ್ ಹಿಟ್ ಅದ ಬಳಿಕ ಸಹಜವಾಗಿಯೇ ರಾಜ್‌ ಬಿ ಶೆಟ್ಟಿಯವರು ಮುಂದೇನು ಮಾಡಬಹುದು ಎನ್ನುವ ಕುತೂಹಲ ಸೃಷ್ಟಿಯಾಗಿತ್ತು. ಇದೀಗ ಒಂದು ಹೊಸ ಸಿನಿಮಾ ಹಾಗೂ ಒಂದು ಹಳೆಯ ಸಿನಿಮಾ ಟ್ರಾಕ್‌ನಲ್ಲಿ ಇರೋದು ತಿಳಿದುಬಂದಿದೆ. ಆದರೆ, ಅವರದೇ ನಿರ್ದೇಶನದ ಹೊಸ ಸಿನಿಮಾ ಬಗ್ಗೆ ಕತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ, ಸ್ವಲ್ಪ ಸಮಯ ಕಾಯಲೇಬೇಕಾಗಿದೆ. ಆದಷ್ಟೂ ಬೇಗ ರಾಜ್‌ ಬಿ ಶೆಟ್ಟಿಯವರು ತಮ್ಮ ಮುಂಬರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಘೋಷಣೆ ಮಾಡಲಿ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಸದ್ಯಕ್ಕೆ ರಾಜ್‌ ಬಿ ಶೆಟ್ಟಿಯವರ ಕೈನಲ್ಲಿ ಎರಡು ಸಿನಿಮಾಗಳಿವೆ ಎಂಬುದು ಜಗಜ್ಜಾಹೀರಾಗಿದೆ. ಘೋಷಣೆ ಆಗುವ ಮೂಲಕ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸಿನಿಮಾ ಈ ಎರಡೂ ವರ್ಷದಲ್ಲಿ ಬಿಡುಗಡೆ ಆಗೋದು ಕಷ್ಟ, ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು. ಆದರೆ, ರಾಜ್‌ ಬಿ ಶೆಟ್ಟಿ ಅವರ ನಿರ್ದೇಶನದ ಚಿತ್ರಕ್ಕಂತೂ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.

ರಾಜ್ ಬಿ ಶೆಟ್ಟಿ: ಜರ್ನಿ ಹೀಗಿದೆ

ಒಂದು ಮೊಟ್ಟೆಯ ಕಥೆಯ ಮೂಲಕ ಕನ್ನಡದ ನಟ-ನಿರ್ದೇಶಕರಾಗಿ ಗಮನ ಸೆಳೆದ ರಾಜ್ ಬಿ ಶೆಟ್ಟಿಯವರು, ಬಳಿಕ ಗರುಡ ಗಮನ ವೃಷಭ ವಾಹನ, ಟೋಬಿ, ಸ್ವಾತಿ ಮುತ್ತಿನ ಮಳೆ ಹನಿಯೇ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಜೊತೆ ಅರ್ಜುನ್ ಜನ್ಯರ ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದಲ್ಲೂ ನಟಿಸಿದಿದ್ದಾರೆ. ಇದೀಗ 'ರಕ್ಕಸಪುರದೊಳ್' ಹಾಗೂ 'ಜುಗಾರಿ ಕ್ರಾಸ್' ಸಿನಿಮಾಗಳು ಕೈನಲ್ಲಿವೆ ಇನ್ನೂ ಒಂದು ಸಿನಿಮಾ ಸದ್ಯದಲ್ಲೇ ಅವರ ಬತ್ತಳಿಕೆ ಸೇರಲಿದೆ.

ಸಸ್ಪೆನ್ಸ್ -ಥ್ರಿಲ್ಲರ್ ಝೋನರ್!

'ಸು ಫ್ರಂ ಸೋ' ಸಿನಿಮಾ ಮೂಲಕ ಹೊಸ ಸಂಚಲನ ಸೃಷ್ಟಿಸಿ ಮತ್ತೆ ತಮ್ಮ ಇಮೇಜ್ ಹಾಗೂ ಕ್ರೇಜ್ ಹೆಚ್ಚಿಸಿಕೊಂಡಿರುವ ರಾಜ್ ಬಿ ಶೆಟ್ಟಿಯವರು ಇದೀಗ ಜುಗಾರಿ ಕ್ರಾಸ್‌ಗೆ ರೆಡಿಯಾಗಿದ್ದಾರೆ. 'ರಕ್ಕಸಪುರದೊಳ್' ಎನ್ನುವ ಸಿನಿಮಾ ಈಗಾಗಲೇ ಅವರ ಕೈನಲ್ಲಿದೆ.. ಹೊಸದೊಂದು ಸಿನಿಮಾಗೆ ಸ್ಕೆಚ್ ಹಾಕಿದ್ದಾರೆ. ಮುಂಬರುವ ಅವರ ನಿರ್ದೇಶನದ ಸಿನಿಮಾ ಹೊಸ ಜೋನರ್, ಅಂದರೆ ಸಸ್ಪೆನ್ಸ್ ಥ್ರಿಲ್ಲರ್ ಆಗಲಿದ್ದು, ಅದಕ್ಕಾಗಿ ಬಹಳಷ್ಟು ತಯಾರಿ ನಡೆಸುತ್ತಿದ್ದಾರೆ. 'ಸು ಫ್ರಂ ಸೋ' ಸಿನಿಮಾ ಮೂಲಕ 100 ಕೋಟಿ ರೂ.ಗೂ ಅಧಿಕ ಲಾಭ ಮಾಡಿ, ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿರುವ ರಾಜ್ ಬಿ ಶೆಟ್ಟಿಯವರ ಮುಂದಿನ ಜರ್ನಿ ಬಗ್ಗೆ ಇದೀಗ ತೀವ್ರ ಕುತೂಹಲ ಸೃಷ್ಟಿಯಾಗಿದೆ.